ರಾಮದುರ್ಗ ಗ್ರಾ.ಪಂ. ಪಿಡಿಒ ನಿರ್ಲಕ್ಷ್ಯ; ಚರಂಡಿ ದುರ್ವಾಸನೆಯಲ್ಲೇ ದಲಿತರ ಬದುಕು…!!!

ರಾಮದುರ್ಗ ಗ್ರಾ.ಪಂ. ಪಿಡಿಒ ನಿರ್ಲಕ್ಷ್ಯ; ಚರಂಡಿ ದುರ್ವಾಸನೆಯಲ್ಲೇ ದಲಿತರ ಬದುಕು.

ಗುಡೇಕೋಟೆ: ರಾಮದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಚಂದ್ರಶೇಖರಪುರ ಗ್ರಾಮದ ಅಂಬೇಡ್ಕರ್ ನಗರದ ಚರಂಡಿ ನೀರು ಸರಾಗವಾಗಿ ಹರಿಯದೇ ಮನೆಗಳ ಮುಂದೆ ರಸ್ತೆಯಲ್ಲೆ ನಿಂತು ಗಬ್ಬು ನಾರುತ್ತಿದೆ. ಅಲ್ಲದೆ ಸೊಳ್ಳೆಗಳ ಕಾಟದಿಂದ ಇಲ್ಲಿನ ಜನರು ತತ್ತರಿಸಿದ್ದು,ಇಲ್ಲಿನ ದಲಿತ ಕಾಲೋನಿ ಜನತೆ ಆಸ್ಪತ್ರೆಗೆ ಹೋಗಿ ಹೈರಾಣಾಗಿ ಹೋಗಿದ್ದಾರೆ.

ರಸ್ತೆಯ ಮೇಲೆ ಕೊಳಚೆ ನೀರು ನಿಂತು ಹರಿಯುವದರಿಂದ ಸಾರ್ವಜನಿಕರಿಗೆ ತಿರುಗಾಡಲು ತೊಂದರೆಯಾಗುತ್ತಿದೆ.ಹಲವು ತಿಂಗಳುಗಳಿಂದ ಚರಂಡಿ ನೀರು ರಸ್ತೆ ಬದಿಯ ಚರಂಡಿಯಲ್ಲಿ ನೀರು ನಿಂತಲ್ಲೇ ನಿಂತಿರುವುದರಿಂದ ತ್ಯಾಜ್ಯ ಸೇರಿ ದುರ್ವಾವಾಸನೆ ಬೀರುತ್ತಿದೆ. ಸುತ್ತಮುತ್ತಲಿನ ಮನೆಗಳ ವೃದ್ಧರು ಹಾಗೂ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುವ ಪರಿಸ್ಥಿತಿ ಎದುರಾಗಿದೆ. ರಾಮದುರ್ಗ ಗ್ರಾ ಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಗ್ರಾ ಪಂ ಆಡಳಿತ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅಭಿವೃದ್ಧಿ ಕುಂಠಿತವಾಗುತ್ತದೆ.

 


ಇನ್ನು ಪಂಚಾಯಿತಿ ಅಧಿಕಾರಿಗಳಿಗೆ ಹಾಗೂ ಗ್ರಾಮದ ಅಧ್ಯಕ್ಷರಿಗೆ ಸದಸ್ಯರಿಗೆ ಅನೇಕ ಬಾರಿ ಮನವಿ ಮಾಡಿದರೂ,ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮದ ಸ್ಥಳೀಯರಾದ ದಲಿತ ಕಾಲೋನಿ ಮುಖಂಡರಾದ ಹೆಚ್‌.ಗಂಗಪ್ಪ.ಮರಿಬಸಪ್ಪ.ದುರುಗಪ್ಪ.ಸೇರಿದಂತೆ ಗ್ರಾಮದ ಮುಖಂಡರು ಡಿಎಸ್ಎಸ್ ಯುವಕರು ಆಕ್ರೋಶ ಹೊರಹಾಕಿದ್ದಾರೆ.ಇನ್ನಾದ್ರೂ ಗ್ರಾ. ಪಂ. ಅಭಿವೃದ್ಧಿ ಅಧಿಕಾರಿಗಳು ಹಾಗೂ ಸದಸ್ಯರು ಇತ್ತ ಗಮನ ಹರಿಸಿ ಚರಂಡಿ ಸ್ವಚ್ಚಗೊಳಿಸುವಲ್ಲಿ ಮುಂದಾಗಬೇಕಿದೆ.ಎಂದು ಮನವಿ ಮಾಡಿಕೊಳ್ಳಲಾಗಿದೆ…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend