;

ಮಹಾತ್ಮ ಗಾಂಧಿ ನರೇಗಾ ಯೋಜನೆ ಮತ್ತು ಸಂಜೀವಿನಿ ಯೋಜನೆ & KSRLPS ಒಗ್ಗೂಡಿಸುವಿಕೆ ಯೋಜನೆ…!!!

ಮಹಾತ್ಮ ಗಾಂಧಿ ನರೇಗಾ ಯೋಜನೆ ಮತ್ತು ಸಂಜೀವಿನಿ ಯೋಜನೆ & KSRLPS ಒಗ್ಗೂಡಿಸುವಿಕೆ ಯೋಜನೆ
ವಿಜಯನಗರ ಜಿಲ್ಲಾ ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿ ಗ್ರಾ.ಪಂ ಕಛೇರಿ ಸಭಾಂಗಣದಲ್ಲಿ ದಿನಾಂಕ- 14/07/2022 ರಂದು ಇಟ್ಟಿಗಿ ಗ್ರಾ.ಪಂ ವ್ಯಾಪ್ತಿಯ ಕ್ಲಷ್ಟರ್ ಮಟ್ಟದ GPLF ಅಧ್ಯಕ್ಷರಾದ ಶ್ರೀಮತಿ ಪವಿತ್ರ ಎ ಇವರ ಅಧ್ಯಕ್ಷತೆಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ, ಸಂಜೀವಿನಿ ಯೋಜನೆ ಮತ್ತು KSRLPS ಒಗ್ಗೂಡಿಸುವಿಕೆ ಯೋಜನೆಯಡಿ ಇಟ್ಟಿಗಿ, ಉತ್ತಂಗಿ, ಹೊಳಗುಂದಿ, ಮಹಾಜನದಹಳ್ಳಿ ಗ್ರಾ ಪಂ ಸಂಜೀವಿನಿ ಮಹಿಳಾ ಸ್ವ-ಸಹಾಯ ಸಂಘ ಗಳ ಒಕ್ಕೂಟದ ಎಂ ಬಿ ಕೆ, ಗಳು, ಎಲ್ ಸಿ ಆರ್ ಪಿ ಗಳು, ಕೃಷಿ ಸಖಿ,ಇನ್ನಿತರೆ ಸದಸ್ಯರುಗಳಿಗೆ ನರೇಗಾ ಯೋಜನೆಯ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳ ಪಟ್ಟಿಮಾಡಲು ಮನೆ-ಮನೆ ಸಮೀಕ್ಷೆ ನಡೆಸುವ ಕುರಿತು ಒಂದು ದಿನದ ತರಬೇತಿ ನಡೆಸಲಾಯಿತು.


ಈ ಒಂದು ತರಬೇತಿಯಲ್ಲಿ ಇಟ್ಟಿಗಿ PDO ಪ್ರಕಾಶ್ ಸರ್, ತಾ ಪಂ ವಿನಯ್ ಮಾಹಿತಿ ಕೊ ಆರ್ಡಿನೇಟರ್, ತಾ ಪಂ NRLM ಕ್ಲಸ್ಟರ್ ಸೂಪರ್ವೈಸರ್ ಬಸವರಾಜ್ ಸರ್ & ಗ್ರಾ ಪಂ ಸಿ ಸಿ ಡಿ ಇ ಒ ಪ್ರಕಾಶ್ ರವರು ಹಾಜರಿದ್ದು ನೆಡಿಸಿಕೊಟ್ಟರು, ಎಂ ಬಿ ಕೆ ಗಳು, ಎಲ್ ಸಿ ಆರ್ ಪಿ ಗಳು, ಕಾಯಕ ಮಿತ್ರ ರು, ಕೃಷಿ ಸಖಿ, ಮುಂತಾದ ಸದಸ್ಯರುಗಳು ಪಾಲ್ಗೊಂಡಿದ್ದರು.

ವರದಿ-ಪ್ರಕಾಶ್ ಆಚಾರ್ ಇಟ್ಟಿಗಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;