;

ಶಿಕ್ಷಕರು ಸೇವಾ ಸಮಪ೯ಣಾ ಭಾವನೆ ಹೊಂದಿರಬೇಕು – ಬಸಲಿಂಗಪ್ಪ…!!!

ಶಿಕ್ಷಕರು ಸೇವಾ ಸಮಪ೯ಣಾ ಭಾವನೆ ಹೊಂದಿರಬೇಕು – ಬಸಲಿಂಗಪ್ಪ

ಸಿಂಧನೂರು :ಜೂಲೈ 9.ಶಿಕ್ಷಕರು ಸದಾ ಸೇವಾ ಸಮಪ೯ಣಾ ಭಾವನೆ ಹೊಂದಿರಬೇಕು. ಶಂಕರ ದೇವರು ಹಿರೇಮಠ ಅವರು ವಿದ್ಯಾರ್ಥಿಗಳಿಗೆ ಉಚಿತವಾಗಿ ಸ್ಕೌಟ್ಸ್ ಸಮವಸ್ತ್ರ ವಿತರಣೆ ಮಾಡಿದ್ದು ತುಂಬಾ ಸಂತೋಷದ ವಿಷಯ ಎಂದು ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಸವಲಿಂಗಪ್ಪ ಹೇಳಿದರು.

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದುಗ್ಗಮ್ಮನ ಗುಂಡ ಶಾಲೆಯಲ್ಲಿ ಶಿಕ್ಷಕರಾದ ಶಂಕರ ದೇವರು ಹಿರೇಮಠ ಅವರು ವಿದ್ಯಾರ್ಥಿಗಳಿಗೆ ಉಚಿತವಾಗಿ ಸ್ಕೌಟ್ಸ್ ಸಮವಸ್ತ್ರ ವಿತರಣಾ ಸಮಾರಂಭ ದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶಂಕರ ದೇವರು ಹಿರೇಮಠ ಅವರು ತಮ್ಮ 15 ವಷ೯ಗಳ ಸೇವಾ ಅವಧಿ ಪೂರ್ಣಗೊಂಡ ಸಂತೋಷದಸಮಯದಲ್ಲಿ ವಿದ್ಯಾರ್ಥಿಗಳಿಗಾಗಿ ಉಚಿತ ಸ್ಕೌಟ್ಸ್ ಸಮವಸ್ತ್ರ ವಿತರಣೆ ಮಾಡಿದ್ದು ವಿದ್ಯಾರ್ಥಿಗಳ ಪ್ರೀತಿಗೆ ಧನ್ಯವಾದಗಳು ಅವರಿಂದ ನಾನು ಹೆಚ್ಚು ವಿಷಯ ಕಲಿತೆನು ಎಂದು ಅಭಿಪ್ರಾಯಪಟ್ಟರು.

ಕನ್ನಡ ಕಂಪು ಗೋಡೆ ಬರಹ ಪತ್ರಿಕೆಯನ್ನು ಅನಾವರಣ ಮಾಡಿದ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಸಿಂಧನೂರು ಕಾರ್ಯದರ್ಶಿ ಗಳಾದ ಬೀರಪ್ಪ ಶಂಭೋಜಿ ಅವರು ಮಾತನಾಡಿ ವಿದ್ಯಾರ್ಥಿಗಳಲ್ಲಿ ‌ಸಾಹಿತ್ಯ ಪ್ರೇಮವನ್ನು ಬೆಳೆಸುವ ಕಾರ್ಯ ಶಾಲೆಯಲ್ಲಿ ಶಿಕ್ಷಕರು ಮಾಡುತ್ತಿದ್ದಾರೆ. ಆದರ ಫಲವೇ ಕನ್ನಡ ಕಂಪು ಪತ್ರಿಕೆ 60ನೇ ಸಂಚಿಕೆ ಲೋಕಾರ್ಪಣೆ ಆಗಿದೆ ಎಂದು ಹೇಳಿದರು

ವನಸಿರಿ ಫೌಂಡೇಶನ್ ಜಿಲ್ಲಾ ಅಧ್ಯಕ್ಷರಾದ ಅಮರೇಗೌಡ ಮಲ್ಲಾಪುರ ಅವರು ಹಸಿರೇ ನಮ್ಮ ಉಸಿರು ಗೋಡೆ ಬರಹ ಪತ್ರಿಕೆಯನ್ನು ಅನಾವರಣ ಮಾಡಿ. ವಿಧ್ಯಾಥಿ೯ಗಳು ಪರಿಸರಕಾಳಜಿಯನ್ನು ಬೆಳೆಸಿಕೊಂಡು ನೀತಿವಂತರಾಗಿ ಎಂದು ಹೇಳಿದರು.

ಬೇಸಿಗೆ ಶಿಬಿರದ ಪ್ರಮಾಣ ಪತ್ರ ವಿತರಣೆ ಮಾಡಿದ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ರಾಯಚೂರು ಸಂಸ್ಥೆ ಯ ಅಂಬಣ್ಣ ಅವರು ಮಾತನಾಡಿ ವಿದ್ಯಾರ್ಥಿಗಳು ಸಂಸ್ಥೆ ನಡೆಸುವ ಪರಿಕ್ಷೇಗಳ ಬಗ್ಗೆ ಮಾಹಿತಿ ನೀಡಿದರು.ವಿಧ್ಯಾಥಿ೯ಗಳು ಪರಿಕ್ಷೇ ಬರೆದು ಪದಕಗಳನ್ನು ಪಡೆಯಬಹುದು ಎಂದು ಹೇಳಿದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಅಧ್ಯಕ್ಷರಾದ ಎಸ್. ಶರಣೇಗೌಡ ಅವರು ವಿದ್ಯಾರ್ಥಿಗಳು ಶಿಸ್ತು ಹಾಗೂ ಮೌಲ್ಯಯುತ ಗುಣಗಳನ್ನು ಬೆಳೆಸಿಕೊಳ್ಳಲು ‌ಸ್ಕೌಟ್ಸ ತರಬೇತಿ ಸಹಕಾರಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ದೇವಿ ಕ್ಯಾಂಪ್ ವಲಯ ಸಿ ಆರ್ ಪಿ ಗಿರೀಶ ,ಸ್ಕೌಟ್ಸ್ ಮಾಸ್ಟರ್ ಶರೀಫ್, ರಾಮದಾಸ್,ಕಬ್ ಮಾಸ್ಟರ್ ನಾಗೇಶ್,ದೇವರ ಗುಡಿ ಮುಖ್ಯ ಗುರುಗಳಾದ ಜಗದೀಶ್ ನಾಂದಿ, ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಗುಡದಪ್ಪ, ಉಪಾಧ್ಯಕ್ಷ ರಾದ ಲಕ್ಷಣ, ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಭವಾನಿ ಪ್ರಾಥ೯ನೆ ಹಾಡಿದಳು. ವಿರುಪಾಕ್ಷಪ್ಪ ಅವರೂ ನಿರೂಪಿಸಿದರು. ಮೋನಮ್ಮ ವಂದಿಸಿದಳು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;