ಟಿ.ಎ.ಪಿ.ಸಿ. ಎಂ.ಎಸ್.ಅಧ್ಯಕ್ಷರಾಗಿ ಮಲ್ಲನಗೌಡ, ಉಪಾಧ್ಯಕ್ಷರಾಗಿ ಬಾಲಯ್ಯ ಉಪ್ಪಾರ ಆಯ್ಕೆ.
ಸಿಂಧನೂರ ಜುಲೈ 9: ತಾಲುಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ(ನಿ) ಅಧ್ಯಕ್ಷರಾಗಿ ಮಲ್ಲಗೌಡ ಬಾದರ್ಲಿ ಉಪಾಧ್ಯಕ್ಷರಾಗಿ ಬಾಲಯ್ಯ ರೌಡಕುಂದ ಅವಿರೋದವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣೆಯ ಅಧಿಕಾರಿ ಶೇಕಹುಸೇನ ಅಧಿಕೃತವಾಗಿ ಚುನಾವಣಾ ಪಲಿತಾಂಶ ಘೋಷಣೆ ಮಾಡಿದರು.
ಇಂದು ಮುಂಜಾನೆ 10 ಗಂಟೆಗೆ ಚುನಾವಣೆಯ ನಡೆದು ಅಧ್ಯಕ್ಷ ಸ್ಥಾನಕ್ಕೆ ಬಾದರ್ಲಿ ಮಲ್ಲನಗೌಡ, ಉಪಾಧ್ಯಕ್ಷ ಸ್ಥಾನಕ್ಕೆ ಬಾಲಯ್ಯ ರೌಡಕುಂದ ನಾಮಪತ್ರ ಸಲ್ಲಿಸಿದ್ದು, ಯಾರು ನಾಮಪತ್ರ ಸಲ್ಲಿಸದೆ ಇರುವದರಿಂದ ಅಧ್ಯಕ್ಷರಾಗಿ ಮಲ್ಲನಗೌಡ ಉಪಾಧ್ಯಕ್ಷರಾಗಿ ಬಾಲಯ್ಯ ರೌಡಕುಂದ ಇವರನ್ನು ಅವಿರೋದವಾಗಿ ಆಯ್ಕೆ ಮಾಡಲಾಯಿತು
ಟಿ.ಎ.ಪಿ.ಸಿ.ಎಂ.ಎಸ್ ಸಿಂಧನೂರ ಸಂಘದ 2022 – 23 ರಿಂದ 5 ವರ್ಷಗಳ ಅವಧಿಯ
ಚುನಾವಣೆಯಾಗಿದ್ದು ನಿರ್ದೇಶಕರಾಗಿ ನರಸರೆಡ್ಡಿ ಕಲ್ಲೂರ, ದುಗ್ಗಿನ ಶ್ರೀನಿವಾಸ ಗಾಂಧಿನಗರ ತಿಮ್ಮಾರೆಡ್ಡಿ ಬೂದಿಹಾಳ, ಜಿ.ವೆಂಕಟರೆಡ್ಡಿ ಹುಡಾ, ಬಸವಂತರಾಯ ಗೌಡ ಗುಂಜಳ್ಳಿ, ಎನ್.ಶರಣೆಗೌಡ ಗೋರೆಬಾಳ, ಅಮರೇಗೌಡ ಜವಳಗೇರಾ,ಶರಣಪ್ಪ ರಡ್ಡೆರ ಹೊಸಳ್ಳಿ ಕೆ, ಸಂಜಯ ಪಾಟೀಲ ಬಡಿಬೇಸ್ ಆಯ್ಕೆಯಾಗಿದ್ದಾರೆ ಎಂದು ಚುನಾವಣೆಯ ಅಧಿಕಾರಿ ಪತ್ರಿಕೆಗೆ ತಿಳಿಸಿದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
