;

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಸೋಲಿಸಿದ ಪಕ್ಷೇತರ ಸದಸ್ಯನಿಗೆ ಅಧ್ಯಕ್ಷ ಸ್ಥಾನವೇ …..???

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಸೋಲಿಸಿದ ಪಕ್ಷೇತರ ಸದಸ್ಯನಿಗೆ ಅಧ್ಯಕ್ಷ ಸ್ಥಾನವೇ …..???

ನಾವು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆದಿಲ್ಲ ಎಂದು ತಿಳಿಸಿದರು.

ಹರಪನಹಳ್ಳಿ ನಾವು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆದಿಲ್ಲ ಈಗಲೂ ನಾವು ಪಕ್ಷದ ಪರವಾಗಿ ಇದ್ದೇವೆ ಎಂದು ಪುರಸಭೆ ಅಧ್ಯಕ್ಷ ಚುನಾವಣೆಯಲ್ಲಿ ಗೈರಾದ ಕಾಂಗ್ರೆಸ್ ಸದಸ್ಯರು ಸ್ಪಷ್ಟಪಡಿಸಿದ್ದರು.

ಪಟ್ಟಣದ ಬಾಣಗೇರಿಯ ಬೈಪಾಸ್ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸದಸ್ಯ ಜಾಕಿರ್ ಹುಸೇನ್ ಅವರು ಪಕ್ಷದಲ್ಲಿ ನಿಷ್ಠಾವಂತರಿಗೆ ಬೆಲೆ ಇಲ್ಲ ಎನ್ನುವುದಕ್ಕೆ ಪುರಸಭೆಯ ಅಧ್ಯಕ್ಷೀಯ ಚುನಾವಣೆಯ ಸಾಕ್ಷಿ ಎಂದು ಹೇಳಿದರು.

2a ಮೀಸಲಾತಿಯಲ್ಲಿ ಕಾಂಗ್ರೆಸ್ ಪಕ್ಷದ ಚಿಹ್ನೆಯಿಂದ ಗೆದ್ದಿರುವ ಎಂಟು ಜನ ಸದಸ್ಯರಿದ್ದು ಅದರಲ್ಲಿ ಯಾರನ್ನಾದರೂ ಒಬ್ಬರನ್ನು ಅಭ್ಯರ್ಥಿ ಮಾಡಿದ್ದರೆ ನಮಗೆ ನೋವು ಆಗುತ್ತಿರಲಿಲ್ಲ ಆದರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಸೋಲಿಸಿದ ಪಕ್ಷೇತರ ಸದಸ್ಯನಿಗೆ ಅಧ್ಯಕ್ಷ ಸ್ಥಾನ ಅಭ್ಯರ್ಥಿ ಮಾಡಿದ್ದಕ್ಕಾಗಿ ನಮಗೆ ತುಂಬಾ ನೋವಾಗಿದೆ ಎಂದು ತಿಳಿಸಿದರು.

ಕೆಪಿಸಿಸಿ ವೀಕ್ಷಕರ ರೆಡ್ಡಿ ಅವರು ನಮ್ಮ ವೈಯಕ್ತಿಕ ಅಭಿಪ್ರಾಯವನ್ನು ಪಡೆದುಕೊಂಡಿಲ್ಲ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕ ಪಕ್ಷಿಯ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ನಮಗೆ ದಿಗ್ಭ್ರಮೆ ಆಯಿತು, ಪಕ್ಷವಿರೋದು ಚಟುವಟಿಕೆ ಮಾಡಿಲ್ಲ ಮುಂದೆಯೂ ಪಕ್ಷದ ಪರವಾಗಿ ಇರುತ್ತೇವೆ ಎಂದು ಜಾಕಿರ್ ಹುಸೇನ್ ಸ್ಪಷ್ಟಪಡಿಸಿದರು.

ಮತ್ತೋರ್ವ ಪುರಸಭೆ ಸದಸ್ಯ ಜೋಗಿನಾರು ಭರತೇಶ್ ಮಾತನಾಡಿ ನಮಗೆ ಎಷ್ಟೇ ಅಸಮಾಧಾನವಿದ್ದರೂ ಪಕ್ಷದ ಹೈಕಾಮಾಂಡಿಗೆ ಗೌರವ ಕೊಟ್ಟು ಪಕ್ಷದ ಅಭ್ಯರ್ಥಿಗೆ ಮತ ಹಾಕಲು ಹರಪನಹಳ್ಳಿಗೆ ಬರುವಾಗ ದಾರಿ ಮಧ್ಯ ನಮ್ಮ ವಾಹನ ಅಪಘಾತಕ್ಕೆ ಈಡಾಗಿದ್ದ ಪರಿಣಾಮ ಚುನಾವಣೆಯ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು.

ಕಳೆದ ಬಾರಿ ಚುನಾವಣೆಯಲ್ಲಿ ಮೂರ್ನಾಲ್ಕು ಬಾರಿ ಆಯ್ಕೆಯಾದ ಹಿರಿಯ ಸದಸ್ಯರು ನಮಗೆ ಬೆಂಬಲ ನೀಡದೆ ಕಚೇರಿ ಆವರಣದಲ್ಲಿಯೇ ಇದ್ದರೂ ನೋಟಿಸ್ ಗೆ ಅನುಗುಣವಾಗಿ ಸಭಾಂಗಣದ ಒಳಗೆ ಬಾರದೆ ಸಮಯ ಪ್ರಜ್ಞೆ ಮರೆತಿದ್ದು ಯಾಕೆ ಎಂದು ಪ್ರಶ್ನಿಸಿದರು.

ಸದಸ್ಯರಾದ ತಳವಾರ ಲಕ್ಕಮ್ಮ, ಸತ್ತುರ್ ಎಲ್ಲಮ್ಮ, ನಿಂಗಮ್ಮ, ಸಹೇರಾಬಾನು, ಹೆಚ್. ಕೊಟ್ರೇಶ್, ಹಾಗೂ ಎಪಿಎಂಸಿ ಮಾಜಿ ಅಧ್ಯಕ್ಷ ತಾವರ್ಯಾನಾಯಕ್, ಪಟ್ಟಾಮದ ಪರಶುರಾಮ್, ಅಲ್ತಾಫ್, ತಳವಾರ್ ಅಜ್ಜಯ್ಯ, ಮಲ್ಲಪ್ಪ, ಉಳ್ಳಂಗಿ ಮಲ್ಲಿಕಾರ್ಜುನ್,ಗಿರೀಶ್, ಎಡಿ ಅಂಜಿನಪ್ಪ,ಸೇರಿದಂತೆ ಇತರರು ಇದ್ದರು..

ವರದಿ.ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;