ಕು.ಕಾರ್ತಿಕ್ ಆಚಾರ್ ಗೆ ಕರ್ನಾಟಕ ಸೇವಾ ರತ್ನ ಪ್ರಶಸ್ತಿ.
ದಿನಾಂಕ 03.07.2022 ರಂದು ಪುಣ್ಯಪವಿತ್ರ ಬಾದಾಮಿ ಕ್ಷೇತ್ರದಲ್ಲಿ ಶ್ರೀ ಲಕ್ಕಮ್ಮ ಕಲಾಪೋಷಕ ತಂಡದಿಂದ ಅಖಿಲ ಕರ್ನಾಟಕ ಜಾನಪದ ನೃತ್ಯ ಕಲಾಮೇಳದಲ್ಲಿ ನಡೆದ ಜಾನಪದ ಕಲೆಗಳ ವೈಭವ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಾಗೂ ಸಾಧನೆಮಾಡುತ್ತಿರುನ ಸಾಧಕರಿಗೆ ಕರ್ನಾಟಕ ಸೇವಾ ರತ್ನ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ,ಸದರಿ ಅದ್ದೂರಿ ಕಾರ್ಯಕ್ರಮದಲ್ಲಿ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕಿನ ಎಂ.ಕಲ್ಲಹಳ್ಳಿ ಗ್ರಾಮದ
ಶೋಭಾ ಬಸವರಾಜ ಆಚಾರ್ಯರ ಸುಪುತ್ರರಾದ ಗ್ರಾಮೀಣಭಾಗದ ಭಾಗದ ಕು.ಕಾರ್ತಿಕ ಆಚಾರ್ಯ ಇವರು ಅನೇಕ ಕಡೆ ಸಾಹಿತ್ಯಿಕವಾಗಿ, ಸಂಘಟನಾತ್ಮಕವಾಗಿ,ನಿರೂಪಕರಾಗಿ,ತೆರೆ ಮತ್ತು ತೆರೆಮರೆಯಲ್ಲಿ ಸೇವೆ ಸಲ್ಲಿಸುತ್ತಾ ಕನ್ನಡ ಸಾಹಿತ್ಯ ಬೆಳೆಸುವಲ್ಲಿ ಕಾರ್ಯನಿರತರಾಗಿದ್ದಾರೆ ಈ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಪೂಜ್ಯರ ಸಾನಿಧ್ಯದಲ್ಲಿ ಅನೇಕ ಗಣ್ಯಮಾನ್ಯರ ಸಮ್ಮುಖದಲ್ಲಿ ಕರ್ನಾಟಕ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದ್ದಾರೆ. ಅನೇಕ ಸಾಹಿತ್ಯಿಕ ಬಳಗಗಳು ಸ್ನೇಹಬಳಗ ಕನ್ನಡದ ಮನಸ್ಸುಗಳು ಅಭಿನಂದಿಸಿ ಹಾರೈಸಿ ಹರಸುತ್ತಿವೆ.

ವರದಿ-ಪ್ರಕಾಶ್ ಆಚಾರ್ ಇಟ್ಟಿಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
