ಶಂಕರನಹಳ್ಳಿ ಡಾ.ಉಮೇಶ್ ಬಾಬು ಅವರ ನೇತತ್ವದಲ್ಲಿ ಕೆಲವು ಬಿಜೆಪಿ ಮುಖಂಡರುಗಳು ಕಾಂಗ್ರೆಸ್ಗೆ ಸೇರ್ಪಡೆಗೊಂಡರು…
ಹರಪನಹಳ್ಳಿ ರಾಜ್ಯ ಮತ್ತು ಕೇಂದ್ರ ಬಿಜೆಪಿ ಸರ್ಕಾರ ದುರಾಡಳಿತಕ್ಕೆ ಬೇಸತ್ತು ಇಂದು ಜೆಡಿಎಸ್ ಮತ್ತು ಬಿಜೆಪಿಯ 30ಕ್ಕೂ ಹೆಚ್ಚು ಕಾರ್ಯಕರ್ತರು ನಮ್ಮ ಪಕ್ಷದ ಬಾವುಟ ಹಿಡಿದು ಅಧಿಕೃತವಾಗಿ ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿದ್ದಾರೆ ಎಂದು ಕೆಪಿಸಿಸಿ ಒಬಿಸಿ ಘಟಕದ ರಾಜ್ಯ ಉಪಾಧ್ಯಕ್ಷ ಶಂಕರನಹಳ್ಳಿ ಡಾ. ಉಮೇಶ್ ಬಾಬು ಹೇಳಿದರು.
ತಾಲೂಕಿನ ಕಂಚಿಕೇರಿ ಗ್ರಾಮದ ಕೋಡಿ ಸಿದ್ದೇಶ್ವರ ಸಮುದಾಯದ ಭವನದಲ್ಲಿ ಕಂಚಿಕೇರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಹಳ್ಳಿಕೇರಿ ಅಳಿಗಂಜಿಕೆರೆ ಬೆಂಡಿಗೇರಿ ಸೇರಿದಂತೆ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಅಧಿಕೃತವಾಗಿ ಕಾಂಗ್ರೆಸ್ಸಿಗೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯಮತ್ತು ಕೇಂದ್ರ ಬಿಜೆಪಿ ಸರ್ಕಾರ ಚುನಾವಣೆಗೂ ಮುನ್ನ ನೀಡಿದ ಭರವಸೆಗಳು ಈಡೇರಲಿಲ್ಲ ಪ್ರಧಾನಿ ನರೇಂದ್ರ ಮೋದಿಯವರು ಹೊರದೇಶದಲ್ಲಿ ಕಪ್ಪು ಹಣವನ್ನು ತಂದು ಜನ್ ಧನ್ ಖಾತೆಗೆ 15 ಲಕ್ಷ ರೂ ಹಾಕುತ್ತೇನೆ ಎಂದು ಸುಳ್ಳು ಭರವಸೆ ನೀಡಿ ಅಧಿಕಾರ ಹಿಡಿದು ಇದುವರೆಗೂ ನಯಪೈಸೆ ಹಾಕಿಲ್ಲ ಯುವಕರಿಗೆ ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಸೃಷ್ಟಿಸುತ್ತೇವೆ ಎಂದು ಹೇಳಿ ಅಗ್ನಿಪಥ್ ಯೋಜನೆಯ ಮೂಲಕ ಯುವಕರನ್ನು ಕಡೆಗಣಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು .
ಬಿಜೆಪಿಯಿಂದ ದೇಶದ ಅಭಿವೃದ್ಧಿ ಕುಂಠಿತವಾಗಿದ್ದು ಬರೀ ಶಾಸಕರನ್ನು ಖರೀದಿ ಮಾಡುವ ಬ್ರೋಕರ್ ಗಳನ್ನು ಹುಟ್ಟು ಹಾಕುವ ಕೆಲಸ ಮಾಡುತ್ತಿದೆ ಶಾಸಕ ಜಿ ಕರುಣಾಕರ ರೆಡ್ಡಿ ಅವರು ಕರೋನಾ ಸಮಯದಲ್ಲಿ ಜನರ ಬಳಿ ಬರದೆ, ಬಳ್ಳಾರಿ ನಿವಾಸದಲ್ಲಿ ಇದ್ದುಕೊಂಡು ಜನರಿಗೆ ಕಣ್ಣು ಒರೆಸುವ ತಂತ್ರ ಮಾಡುತ್ತಾ ಕಾಲರಣ ಮಾಡಿದ್ದಾರೆ ಇಂತಹ ಶಾಸಕರು ನಮ್ಮ ತಾಲೂಕುಗೆ ಹರಪನಹಳ್ಳಿಯ ಜನತೆಗೆ ಬೇಕಾ???.
ಹಾಗಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಕರೆ ನೀಡಿದರು.
ಈ ಕ್ಷೇತ್ರದಲ್ಲಿ ಹೊರಗಿನವರೆಗೆ ಶಾಸಕರಾಗುತ್ತಿದ್ದಾರೆ ಆದರೆ ಸ್ಥಳೀಯರು ಯಾರು ಇಲ್ಲಿ ಗೆಲ್ಲಲು ಸಾಧ್ಯವಾಗುತ್ತಿಲ್ಲ ಡಾಕ್ಟರ್ ಉಮೇಶ್ ಬಾಬು ಅವರು ತಾಲೂಕಿನ ಮತದಾರರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿ ಹೊರಗಿನವರಿಗೆ ತಕ್ಕ ಪಾಠ ಕಲಿಸಿ ಸ್ಥಳೀಯ ಸೂಕ್ತ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಬಿಜೆಪಿ ತೊರೆದು ಕಾಂಗ್ರೆಸ್ಗೆ ಸೇರ್ಪಡೆಯಾದ ಹಳ್ಳಿಕೇರಿ ರಾಹುಲ್ ಮಾತನಾಡಿ ನಾನು ಕಳೆದ ಹತ್ತು ವರ್ಷಗಳಿಂದ ಬಂದಿದ್ದೇನೆ.
ಆದರೆ ಬಿಜೆಪಿಯಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತವಾಗಿದ್ದು ಮತ್ತು ಶಾಸಕ ಕರ್ಣಾಕರ ರೆಡ್ಡಿ ಅವರ ದುರಾಡಳಿತಕ್ಕೆ ಬೇಸತ್ತು ಸ್ಥಳೀಯರಾದ ಶಂಕರನಹಳ್ಳಿ ಉಮೇಶ್ ಬಾಬು ಅವರು ಕರೋನ ಸಮಯದಲ್ಲಿ ಮಾಡಿದ ಜನ ಸೇವೆಯನ್ನು ಮೆಚ್ಚಿ ಇಂದು ನಾವು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವುದರ ಜೊತೆಗೆ ಹಲವು ಮುಖಂಡರನ್ನು ಕರೆತಂದಿದ್ದೇನೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲುಸುವುದೇ ನಮ್ಮ ಗುರಿ ಎಂದರು.
ಈ ಸಂದರ್ಭದಲ್ಲಿ ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಮುಖಂಡರಾದ ನಾಗರಾಜ್. ಬಸವರಾಜ್. ಶಂಕರ್ನಳ್ಳಿ ರವಿ. ಬಾಬು. ಗಣೇಶ್. ಕರಿಬಸಪ್ಪ. ಮಂಜುನಾಥ್. ನಿಂಗರಾಜ್. ಹನುಮಂತಪ್ಪ. ಸಾರಥಿ ಮಂಜಣ್ಣ. ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು…

ವರದಿ. ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
