ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ತಾಲೂಕು ಘಟಕದಿಂದ ವಾರ್ಷಿಕೋತ್ಸವ ಹಾಗೂ ಸಂಸ್ಕೃತಿಕ ಕಾರ್ಯಕ್ರಮ.
ಮುಂದಿನ ಪೀಳಿಗೆಗಾಗಿ ಕಲಾವಿದರು ಕಲೆಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಮಾಡಬೇಕಿದೆ ಎಂದು ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ರಾಜ್ಯ ಕಾರ್ಯದರ್ಶಿ ಪ್ರಕಾಶ್ ಅಂಗಡಿ ಹೇಳಿದರು.
ಹರಪನಹಳ್ಳಿ ಪಟ್ಟಣದ ಜಗಜೀವನ್ ರಾವ್ ಅವರ ಭವನದಲ್ಲಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ತಾಲೂಕು ಘಟಕದಿಂದ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಹಂಪಿ ಉತ್ಸವ ಕಾರ್ಯಕ್ರಮದಲ್ಲಿ ಸ್ಥಳೀಯರಿಗೆ ಅವಕಾಶ ಕಲ್ಪಿಸಬೇಕು. ಅನ್ಯಾಯವಾಗುತ್ತಿರುವ ಕಲಾವಿದರಿಗೆ ನ್ಯಾಯ ಕೊಡಿಸಬೇಕು, ಕಲಾವಿದರು ಒಗ್ಗಟ್ಟಾಗಿ ಪ್ರತಿಭಟಿಸಬೇಕು ಕೋಲಾಟ ರಂಗಭೂಮಿ ಕಲೆ ಡೊಳ್ಳುಕುಣಿತ ಸೇರಿದಂತೆ ಅನೇಕ ಕಲಾ ಪ್ರಕಾರಗಳು ಇವೆ, ಆದರೆ ಅವರಿಗೆ ಸರಿಯಾದ ಮಾರ್ಗದರ್ಶನ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಿ ಕೊಡುವಲ್ಲಿ ಹಿಂದಿದ್ದೇವೆ ಎಂದರು.
ಎಲ್ಲಾ ತಾಲೂಕು ಜಿಲ್ಲೆಗಳಲ್ಲಿ ಜನಪದ ಕಲೆಗಳ ಪ್ರಕಾರ ಪರಸ್ಪರ ವಿನಿಮಯವಾಗಬೇಕು ಆದರೆ ಆಯಾ ಭಾಗದಲ್ಲಿ ಕೆಲವರಿಗೆ ಮಾತ್ರ ಸೀಮಿತವಾಗಿರುತ್ತವೆ, ಎಂದು ವಿಷಾದ ವ್ಯಕ್ತಪಡಿಸಿದರು ಕಲ್ಯಾಣ ಕರ್ನಾಟಕ ರಾಜ್ಯಾಧ್ಯಕ್ಷ ವಿಜಯಕುಮಾರ್ ಸೋನಾರೆ ಮಾತನಾಡಿ ಕಲಾವಿದರಿಗೆ ಅನೇಕ ಸಮಸ್ಯೆಗಳು ಇವೆ ಅವುಗಳ ಪರಿಹಾರಕ್ಕಾಗಿ 7 ಜಿಲ್ಲೆಗಳನ್ನು ಒಳಗೊಂಡ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ಸ್ಥಾಪಿಸಿದ್ದು, ಕಲಾವಿದರ ವಯೋಮಿತಿ ಇಳಿಸಬೇಕು ಮಾಶಾ ಶಾಸನವನ್ನು 5,000 ಕ್ಕೆ ಹೆಚ್ಚಿಸಬೇಕು, ಆಂಧ್ರದ ಮಾದರಿಯಲ್ಲಿ ಗುರುತಿನ ಕಾರ್ಡ್ ಮಾಶಾ ಶಾಸನ ನೀಡಬೇಕು ಎಂ, ಪಿ, ಪ್ರಕಾಶ್, ಹೆಸರು ಒಳಗೊಂಡು ಹಾಯಾ ಜಿಲ್ಲೆಯ ರಂಗ ಕಲಾವಿದರ ಸಾಧಕರ ಹೆಸರಿನಲ್ಲಿ ಸರ್ಕಾರ ಟ್ರಸ್ಟ್ ಮಾಡಬೇಕು.ಬಸ್ ಪಾಸ್ ವಿಮಾ ಯೋಜನೆ ರೂಪಿಸಬೇಕು ಅಕಲಿಕವಾಗಿ ಮರಣ ಹೊಂದಿದ ಕಲಾವಿದರಿಗೆ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದು ಇವುಗಳ ಪರಿಹಾರಕ್ಕೆ ರಾಜ್ಯಮಟ್ಟದ ಸಮಾವೇಶವನ್ನು ಜುಲೈ 27ಕ್ಕೆ ಆಯೋಜಿಸಲಾಗಿದೆ ಎಂದರು.
ನಂದಿಹಳ್ಳಿ ಹಾಲಪ್ಪ. ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಜಿಲ್ಲಾಧ್ಯಕ್ಷ ರಮೇಶ್ ಅಂಚಿನಮನಿ, ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಅಧ್ಯಕ್ಷ ಎಂ,ಪಿ ವೀಣಾ ಮಹೇಶ್ ಕಾಂಗ್ರೆಸ್ ಮುಖಂಡ ಯಶವಂತ್ ಗೌಡ್ರು ಮಾತನಾಡಿದರು.
ನೀಲಗುಂದ ಗುಡ್ಡದ ಚನ್ನಬಸವ ಶಿವಯೋಗಿ ಕೂಲಹಳ್ಳಿ ಗೋಣಿಬಸವೇಶ್ವರ ಸಂಸ್ಥಾನದ ಮಠದ ಪಟ್ಟದ ಚಿನ್ಮಯಿ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು…

ವರದಿ.ಪ್ರತಾಪ್. ಸಿ. ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
