;

ಅಕ್ರಮ ಗೋವು ಸಾಗಾಣಿಕೆಗೆ ಕಡಿವಾಣ ಹಾಕಲು ಚೆಕ್ ಪೋಸ್ಟ್ ನಿರ್ಮಿಸಲು ಮನವಿ…!!!

ಅಕ್ರಮ ಗೋವು ಸಾಗಾಣಿಕೆಗೆ ಕಡಿವಾಣ ಹಾಕಲು ಚೆಕ್ ಪೋಸ್ಟ್ ನಿರ್ಮಿಸಲು ಮನವಿ

ಬೆಳಗಾವಿ ಜಿಲ್ಲೆಗೆ ಗಡಿ ಹೊಂದಿಕೊಂಡ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ಪಟ್ಟಣದ ಬುದ್ನಿ ಪಿ.ಡಿಯ ರಾಜ್ಯ ಹೆದ್ದಾರಿಯಲ್ಲಿ ಪೋಲೀಸ್ ಚೆಕ್ ಪೋಸ್ಟ್ ನಿರ್ಮಿಸಲು ಭಾರತಿಯ ಜನತಾ ಪಕ್ಷದ ಜಿಲ್ಲಾ ಯವಮೋರ್ಚಾ ಘಟಕ ಮತ್ತು ಹಿಂದೂಪರ ಸಂಘಟನೆಗಳಿಂದ ಸ್ಥಳೀಯ ಪೋಲೀಸ ಠಾಣೆಯ ಠಾಣಾಧಿಕಾರಿಗಳಿಗೆ ಇಂದು ಮನವಿ ಸಲ್ಲಿಸಿದರು. ಬರುವ ಬಕ್ರಿದ ಹಬ್ಬಕ್ಕೆ ಗೋವುಗಳ ಹತ್ಯೆ ನಡೆಯುವುದು. ಈ ಗೋಹತ್ಯೆ ತಡೆಗೆ ಹಲವು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಮುಖಂಡರು ಸೇರಿ ಮಹಾಲಿಂಗಪುರ ನಗರದ ಮುಖಾಂತರ ಹಾದು ಹೋಗುವ ರಾಜ್ಯ ಹೆದ್ದಾರಿ ಅಂತರ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುದಾಗಿದ್ದು ಆಕ್ರಮವಾಗಿ ಗೋವುಗಳ ಸಾಗಾಣಿಕೆ ಹೆಚ್ಚಿನ ರೀತಿಯಲ್ಲಿ ನಡೆಯುತ್ತದೆ ಆದುದರಿಂದ ಸ್ಥಳೀಯ ಮುಧೋಳ್ ನಿಪ್ಪಾಣಿ ರಾಜ್ಯ ಹೆದ್ದಾರಿಯಲ್ಲಿ ಪೋಲೀಸ್ ಇಲಾಖೆ ನಿಗಾ ವಹಿಸಿ ಅಕ್ರಮ ಗೋವು ಸಾಗಾಟ ಮಾಡುವವರ ಕಠಿಣ ವಿರುದ್ಧ ಕ್ರಮ ಜರುಗಿಸಿ ಬಂದಿಸುವಂತೆ ಆಗ್ರಹಿಸಿದರು. ಇದೇ ಸಂದರ್ಭದಲ್ಲಿ ಮಖಂಡರಾದ ಮಹಾಲಿಂಗ ಕಂಕಣವಾಡಿ,ಶಿವಲಿಂಗ ಟಿರಕಿ, ಶಂಭುಲಿಂಗ ಬಡಿಗೇರ,ರವಿ ಜವಳಗಿ,ತಿಪ್ಪಣ್ಣ ಬಂಡಿವಡ್ಡರ, ಚನ್ನಪ್ಪ ರಾಮೊಜ್ಜಿ,,ವೀರಭದ್ರ ಮುಗಿಲ್ಯಾಳ, ಶೇಖರ ಮಗದುಮ,ಸಚೀನ ಕಲ್ಮಡಿ, ಸಂಗಮೇಶ ಅಂಬಲ್ಯಾಳ, ಅರ್ಜುನ ಪವಾರ, ಸುವರ್ಣಾ ಆಸಂಗಿ, ಮೀನಾಕ್ಷಿ ಹಿರೇಮಠ,ನಂದೇಶ ಲಾತುರ,ಮಹಾಲಿಂಗ ಜಡಿ, ಮಹಾಂತೇಶ ಪಾತ್ರೋಟ, ಮಹಾಲಿಂಗ ಪಂಚಕಟ್ಟಿಮಠ,ರಾಹುಲ ಅಂಬಿ, ಸಂಗಮೇಶ ವಂದಾಲ,ಬಸು ಗಿರಿಸಾಗರ, ಆನಂದ ಮಾಳವಾದೇ, ಮಹಾಲಿಂಗ ದೇಸಾಯಿ, ಶಿವಾನಂದ ಹುಣಸ್ಯಾಳ, ಅಕ್ಷಯ ಕಲಾಲ, ಸಂತೋಷ ಬುದ್ನಿ, ಮಾಹತೆಂಶ ಶಿವಣಗಿ,ರಾಜು ಬಂಡಿವಡ್ಡರ,ಚೇತನ ಬಂಡಿವಡ್ಡರ ಉಪಸ್ಥಿತರಿದ್ದರು.

ವರದಿ.
ಬಸವರಾಜ ನಂದೆಪ್ಪನವರ
ಮಹಾಲಿಂಗಪುರ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;