ವಸತಿ ಯೋಜನೆ ಮನೆ ಹಂಚಿಕೆ ಅಧಿಕಾರ ಶಾಸಕಗಳಿಗೆ ಇಲ್ಲ ……
ಡಾ. ಬಿ. ಆರ್. ಅಂಬೇಡ್ಕರ್ ನಿವಾಸ್ ಹಾಗೂ ಇತರೆ ವಸತಿ ಯೋಜನೆ ಫನುಭವಿಗಳ ಪಟ್ಟಿಯನ್ನು ಗ್ರಾಮಸಭೆಯೇ ಸಿದ್ದಪಡಿಸಬೇಕು ಮತ್ತು ಆ ಪಟ್ಟಿ ಅಂತಿಮ ಗೊಳಿಸುವ ಅಧಿಕಾರ ಗ್ರಾಮಸಭೆಗೆ ಮಾತ್ರವೇ ಸೇರಿದೆ ಎಂದು ಹೈಕೋರ್ಟ್ ಸ್ಪಷ್ಠ ಆದೇಶ ನೀಡಿ ಅರ್ಜಿ ಇತ್ಯಾರ್ಥ ಗೊಳಿಸಿದೆ ಗ್ರಾಮಸಭೆ ವ್ಯಾಪ್ತಿಯಲ್ಲಿ ವಸತಿ ಯೋಜನೆ ಫಲನುಭವಿಗಳ ಪಟ್ಟಿ ಸಿದ್ದಪಡಿಸಲು ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಜಾಗೃತಿ ಸಮಿತಿ ರಚನೆ ಮಾಡಿದ್ದ ಸರ್ಕಾರದ ಕ್ರಮ ಪ್ರಶ್ನಿಸಿ ಮುಖರ್ಜಿ ಹಾಗೂ ನ್ಯಾಯಮೂರ್ತಿ ಪಿ ಎಸ್. ದಿನೇಶ್ ಕುಮಾರ್ ಅವರಿಂದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.
ಡಾ. ಬಿ.ಆರ್. ಅಂಬೇಡ್ಕರ್ ನಿವಾಸ ಸೇರಿದಂತೆ ವಿವಿಧ ವಸತಿ ಯೋಜನೆಗಳು ಅರ್ಹ ಫಲನುಭವಿಗಳ ಪಟ್ಟಿಯನ್ನು ಅಂತಿಮ ಗೊಳಿಸುವ ಅಧಿಕಾರ ಗ್ರಾಮಸಭೆಗೆ ಇದೆ.
ಗ್ರಾಮಸಭೆಯೇ ಪಟ್ಟಿಯನ್ನು ಸಿದ್ದಪಡಿಸಬೇಕು. ಫಲನುಭವಿಗಳಿಗೆ ಪಟ್ಟಿಯನ್ನು ಗ್ರಾಮಪಂಚಾಯಿತಿ ಮುಂದೆ ಮಂಡಿಸುವ ಮೂಲಕ ಯೋಜನೆಗೆ ಲಾಭವು ಹೆಚ್ಚಿನ ಪ್ರಮಾಣದಲ್ಲಿ ಜನರಿಗೆ ಸೇವೆಯನ್ನು ನೀಡಿದಂತಾಗುತ್ತದೆ…
ವರದಿ. ಪ್ರತಾಪ್. ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

