;

ಶ್ರಮಿಕರಿಂದಲೇ ದೇಶ ನಿರ್ಮಾಣವಾಗಿದ್ದು – ಶಂಕರ ವಾಲಿಕಾರ…!!!

ಶ್ರಮಿಕರಿಂದಲೇ ದೇಶ ನಿರ್ಮಾಣವಾಗಿದ್ದು – ಶಂಕರ ವಾಲಿಕಾರ

ಸಿಂಧನೂರು : ಜೂನ್ 20.ಶ್ರಮಿಕರಿಂದಲೇ ದೇಶ ನಿರ್ಮಾಣವಾಗಿದ್ದು. ದೇಶ ಕಟ್ಟಲು ಶ್ರಮಪಟ್ಟ ಸೃಷ್ಟಿಕರ್ತರಾದ ಶ್ರಮಜೀವಿಗಳ ಐಕ್ಯತೆಯನ್ನು ಚಳುವಳಿಯಿಂದಲೇ ಆಳುವ ವರ್ಗಗಳಿಗೆ ಪಾಠ ಕಲಿಸಿ ಶ್ರಮಿಕ ವರ್ಗವು ಅಧಿಕಾರಕ್ಕೆಬರಬೇಕೆಂದು ಹೇಳಿದ್ದೇ ಕಮ್ಯೂನಿಸ್ಟ್ ಪಕ್ಷ ಎಂದು ಸಮ್ಮೇಳನದ ಉದ್ಘಾಟನಾ ಅಧಿವೇಶನದಲ್ಲಿ ಮುಖ್ಯ ಭಾಷಣಕಾರರಾಗಿ ಉಪನ್ಯಾಸಕ ಶಂಕರ ವಾಲಿಕಾರ ಮಾತನಾಡಿದರು.

ನಗರದ ಎಪಿಎಂಸಿಯ ಶ್ರಮಿಕ ಭವನದಲ್ಲಿ ಸಿಪಿಐ(ಎಂಎಲ್)ರೆಡ್ ಸ್ಟಾರ್ ಪಕ್ಷದ 11ನೇ ತಾಲೂಕು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಮಾಜದ ಕಟ್ಟಕಡೆಯ ಮನುಷ್ಯನ ನೋವಿನ ಕೂಗೆ ಕಾರ್ಲ್ ಮಾರ್ಕ್ಸ್‌. ಬಂಡವಾಳವಾದ, ಭೂಮಾಲೀಕರ ವಿರುದ್ಧ, ದುಡಿಯುವ ವರ್ಗಗಳನ್ನು ಸಂಘಟಿಸಿ ಗಟ್ಟಿಯಾದ ಸಂಘರ್ಷವನ್ನು ನಡೆಸಬೇಕೆಂದರು.

ಮೊದಲಿಗೆ ಕಾರ್ಪೊರೇಟ್ ಪರವಾದ ಕೋಮುವಾದಿ ಸರಕಾರಗಳ ವಿರುದ್ಧ ಹೋರಾಡೋಣ ! ರೈತ-ಕಾರ್ಮಿಕರ ಐಕ್ಯತೆ ಚಿರಾಯುವಾಗಲಿ ! ಸಾಮ್ರಾಜ್ಯಶಾಹಿ ವಿರೋಧಿ ಪ್ರಜಾ ಪ್ರಭುತ್ವ ಕ್ರಾಂತಿ ಚಿರಾಯುವಾಗಲಿ ! ಇಂಕ್ವಿಲಾಬ್ ಜಿಂದಾಬಾದ್ ಎಂಬ ಕ್ರಾಂತಿಕಾರಿ ಘೋಷಣೆಗಳೊಂದಿಗೆ ಸಮ್ಮೇಳನದ ಧ್ವಜಾರೋಹಣವನ್ನು ಪಕ್ಷದ ತಾಲೂಕು ಕಾರ್ಯದರ್ಶಿ ಮಾಬುಸಾಬ ಬೆಳ್ಳಟ್ಟಿ ನೆರವೇರಿಸಿದರು. ನಂತರ ” ಎದ್ದೇಳಿ ಹಸಿವಿನ ಖೈದಿಗಳೆ ಸಿಡಿದೇಳಿ ಲೋಕದ ಶೋಷಿತರೆ ಶ್ರಮಿಕರು ತೋರಿದ ಮಾರ್ಗವು ಅದುವೇ ವಿಮುಕ್ತಿಯ ಸನ್ಮಾರ್ಗವು” ಎಂಬ ಅಂತರಾಷ್ಟ್ರೀಯ ಕಮ್ಯೂನಿಸ್ಟ್ ಗೀತೆಯನ್ನು ಹಾಡಲಾಯಿತು. ಹೋರಾಡಿ ಮಡಿದ ಕ್ರಾಂತಿಕಾರಿಗಳ ಸ್ಥೂಪಕ್ಕೆ ಪುಷ್ಪಗಳನ್ನು ಹಾಕಿ 2 ನಿಮಿಷಗಳ ಕಾಲ ಮೌನಾಚರಣೆಯನ್ನು ಕೈಗೊಳ್ಳಲಾಯಿತು.

ಸಮ್ಮೇಳನದ ಉದ್ಘಾಟನಾ ಅಧಿವೇಶನ ಉದ್ದೇಶಿಸಿ ಮಾತನಾಡಿದ, ಕೇಂದ್ರ ಸಮಿತಿ ಸದಸ್ಯರಾದ ಎಂ.ಡಿ.ಅಮೀರ ಅಲಿ ರೈತ-ಕಾರ್ಮಿಕರು ಹಾಗೂ ಶೋಷಿತ ಜನತೆ ಒಂದಾಗಿ ಬಲಾಢ್ಯ ಚಳುವಳಿಯನ್ನು ಕಟ್ಟುವತ್ತ ಸಮ್ಮೇಳನ ಯಶಸ್ವಿಯಾಗಲಿ ಎಂದರು.

ನಂತರ ಹೋರಾಟಗಾರರಾದ, ನಾರಾಯಣ ಬೆಳಗುರ್ಕಿ ಮಾತನಾಡಿ, ಕೋಮುವಾದಿ ಬಿಜೆಪಿ ಪಕ್ಷವು ದೇಶದಲ್ಲಿ ಜಾತಿ, ಧರ್ಮ, ಮತ ಪಂಥಗಳ ಹೆಸರಿನಲ್ಲಿ ಕೋಮು ದಳ್ಳುರಿಯನ್ನು ಹಚ್ಚಿ ಜನರನ್ನು ದಿಕ್ಕು ತಪ್ಪಿಸಲಾಗುತ್ರಿದೆ. ಇದರ ವಿರುದ್ಧ ಶೋಷಿತ ಸಮುದಾಯಗಳು ಅದರಲ್ಲಿ ಸಮಾನ ಮನಸ್ಕ ಸಂಘಟನೆಗಳು ಜೊತೆಗೂಡಿ ಐಕ್ಯ ಹೋರಾಟವನ್ನು ಸಂಘಟಿಸುವುದರೊಂದಿಗೆ ಆಳುವ ದಲ್ಲಾಳಿ ಸರಕಾರಗಳಿಗೆ ಬಲಾಢ್ಯ ಪ್ರತಿರೋಧವನ್ನು ಒಡ್ಡಬೇಕೆಂದರು.

ನಂತರ ಜಿಲ್ಲಾ ಕಾರ್ಯದರ್ಶಿ ಜಿ.ಅಮರೇಶ, ರಾಜ್ಯ ಸಮಿತಿ ಸದಸ್ಯ ಎಂ.ಗಂಗಾಧರ ಮಾತನಾಡಿದರು. ಮಾಬುಸಾಬ ಬೆಳ್ಳಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು. ಹೆಚ್.ಆರಂ.ಹೊಸಮನಿ ನಿರೂಪಿಸಿದರು. ರುಕ್ಮೀಣಿಯಮ್ಮ ವೇದಿಕೆ ಮೇಲೆ ಉಪಸ್ಥಿತರಿದ್ದರು.

ರೈತ-ಕಾರ್ಮಿಕ ವಿರೋಧಿ, ವಿದ್ಯಾರ್ಥಿ-ಯುವಜನ ವಿರೋಧಿ, ದಲಿತ-ಮಹಿಳೆಯರ ವಿರೋಧಿ ಮನುವಾದಿ ಸರಕಾರಗಳ ವಿರುದ್ಧ, ಕಾರ್ಪೋರೇಟ್ ಬಂಡವಾಳಶಾಹಿಗಳ ವಿರುದ್ಧ ಬಲಾಢ್ಯ ಚಳುವಳಿ ಸಂಘಟಿಸಿ,ಅಗ್ನಿಪಥ ಯೋಜನೆಯನ್ನು ಕೈ ಬಿಡುವಂತೆ ವಿರೋಧಿಸಿ,ಪಠ್ಯ ಪುಸ್ತಕಗಳ ವಿಷಯ ಬದಲಾವಣೆ ಮಾಡಿರುವುದನ್ನು ವಿರೋಧಿಸಿ ಜಾತಿವಾದ, ಕೋಮುವಾದ, ಲಿಂಗ ತಾರತಮ್ಯದ ವಿರುದ್ಧ ರೈತ ವಿರೋಧಿ ಹಾಗೂ ಕಾರ್ಮಿಕರ ಕತ್ತು ಕೊಯ್ಯುವ ಕಾಯ್ದೆಗಳ ರದ್ದತಿಗಾಗಿ ಹೆಚ್ಚುತ್ತಿರುವ ದಲಿತರ ಮೇಲಿನ ದೌರ್ಜನ್ಯ ಹಾಗೂ ಹತ್ಯೆ, ಅತ್ಯಾಚಾರಗಳ ವಿರುದ್ಧ ಇನ್ನಿತರ ಸಮಸ್ಯೆಗಳ ವಿರುದ್ಧ ಹೋರಾಡುವುದು ಸಮ್ಮೇಳನದಲ್ಲಿ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ನಂತರ 9 ಜನರ ನೂತನ ತಾಲೂಕು ಸಮಿತಿಯನ್ನು ಸಮ್ಮೆಳನದಲ್ಲಿ ಆಯ್ಕೆಗೊಳಿಸಲಾಯಿತು. ಮಾಬುಸಾಬ ಬೆಳ್ಳಟ್ಟಿಯವರನ್ನು ನೂತನ ತಾಲೂಕು ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು.

ಕೊನೆಗೆ ಕ್ರಾಂತಿಕಾರಿ ಘೋಷಣೆಗಳ ಮೂಲಕ ಧ್ವಜಾ ಅವರೋಹಣ ಮಾಡಲಾಯಿತು.

ಈ ಸಂದರ್ಭದಲ್ಲಿ ಮುದಿಯಪ್ಪ ಹನುಮನಗರ ಕ್ಯಾಂಪ್, ರಾಜಾ ನಾಯ್ಕ, ಮಹಾದೇವಪ್ಪಗೌಡ ರೌಡಕುಂದ, ನಾಗಮ್ಮ ಗಿರಿಜಾಲಿ, ಅಂಬಮ್ಮ ಬಸಾಪೂರ, ಲಕ್ಷ್ಮಮ್ಮ, ಚನ್ನಮ್ಮ, ದುರುಗಪ್ಪ, ಖಾಸಿಂ ಸಾಬ, ಪರಸಪ್ಪ ಅರಳಳ್ಳಿ, ನಾಗಪ್ಪ ಉಮಲೂಟಿ, ಪರಶುರಾಮ್ ಗೋಪಾಲನಗರ, ರಮೇಶ ಹಟ್ಟಿ, ದವಲಸಾಬ, ಭಾಷಾ, ಕನಕಪ್ಪ ಪೂಜಾರಿ, ಜಿಲಾನಿ ಸೇರಿದಂತೆ ಸಮ್ಮೇಳನದಲ್ಲಿ 200ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು…

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;