;

ಜ್ಞಾನ ಎಂಬುದು ನಿಂತ ನೀರಲ್ಲ, ಹರಿಯುವ ನದಿಯಿದ್ದಂತೆ – ಶ್ರೀಮತಿ ಸುನೀತಾ ಚಂದ್ರಡ್ಡಿ…!!!

ಜ್ಞಾನ ಎಂಬುದು ನಿಂತ ನೀರಲ್ಲ, ಹರಿಯುವ ನದಿಯಿದ್ದಂತೆ – ಶ್ರೀಮತಿ ಸುನೀತಾ ಚಂದ್ರಡ್ಡಿ.

ಸಿಂಧನೂರು :ಜೂನ್ 19.ಸಾಹಿತ್ಯ ಮಾನವೀಯ ಗುಣಗಳನ್ನು ಬೆಳೆಸುತ್ತದೆ.ಜ್ಞಾನ ಎಂಬುದು ನಿಂತ ನೀರಲ್ಲ,ಹರಿಯುವ ನದಿಯಿದ್ದಂತೆ ಎಂದು ಸುನೀತಾ ಚಂದ್ರಡ್ಡಿ ಹಿರಿಯ ಮೇಲ್ವಿಚಾರಕಿ ಶಿಶು ಅಭಿವೃದ್ದಿ ಯೋಜನೆ ತುರುವಿಹಾಳ ರವರು ಮಾತನಾಡಿದರು.

ನಗರದ ಸರಕಾರಿ ನೌಕರರ ಭವನದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು (ರಿ)ರಾಜ್ಯ ಘಟಕ ಹಾಸನ,ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು (ರಿ) ಜಿಲ್ಲಾ ಘಟಕ ರಾಯಚೂರು
ಚೆಲುವ ಚಿಣ್ಣರು ಮಕ್ಕಳ ಸಾಹಿತ್ಯ ಪತ್ರಿಕೆ ಸಿಂಧನೂರು ಸಹಯೋಗದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ೫೦ನೇ ಮಕ್ಕಳ ಕವಿಗೋಷ್ಠಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಜ್ಞಾನವನ್ನು ಹಣದಿಂದ ಕೊಂಡುಕೊಳ್ಳಲು ಸಾಧ್ಯವಿಲ್ಲ,ಜ್ಞಾನ ಗುಡಿಸಲಿನಲ್ಲಿ ಹುಟ್ಟಿ ಅರಮನೆಯಲ್ಲಿ ಸಾಯುತ್ತದೆ.ವಿದ್ಯಾರ್ಥಿಗಳಿಗೆ ಸಾಹಿತ್ಯ ಪ್ರಜ್ಞೆಯನ್ನು ಬೆಳೆಸುವ ನಿಟ್ಟಿನಲ್ಲಿ ಸರ್ವರು ಪ್ರಯತ್ನ ಮಾಡಬೇಕು. ತಂತ್ರಜ್ಞಾನದ ಇಂದಿನ ಯುಗದಲ್ಲಿ ಮಕ್ಕಳು ಸೃಜನಾತ್ಮಕತೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಟಿವಿ,ಮೊಬೈಲ್,ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋಗಿ ಸಂಬಂಧಗಳನ್ನು ಮರೆಯುತ್ತಿದ್ದಾರೆ. ಕತೆ, ಕವನ, ಕವಿತೆಗಳು ಮಕ್ಕಳಿಗೆ ನೈಜ ಬದುಕನ್ನು ಕಟ್ಟಿಕೊಡುತ್ತವೆ. ಸಾಹಿತ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರನ್ನು ಗುರುತಿಸಿದಕ್ಕೆ ಧನ್ಯವಾದಗಳನ್ನು ತಿಳಿಸಿದರು.

ಪ್ರಾಸ್ತಾವಿಕ ವಾಗಿ ಮಾತನಾಡಿದ ವಿರುಪಾಕ್ಷಪ್ಪ ಅವರು ಮಕ್ಕಳ ಸಾಹಿತ್ಯ ಪರಿಷತ್ತು ಕವನ ವಾಚನ, 22 ಕೃತಿ ಲೋಕಾರ್ಪಣೆ, ಹಸಿರು ಕವಿಗೋಷ್ಠಿ, ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಸನ್ಮಾನ, ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಭಾಗಿ, ಲಾಕಡೌನ್ ಸಂದರ್ಭದಲ್ಲಿ ಆನ್ ಲೈನ್ ಮೂಲಕ ತರಬೇತಿ, ಮೊಟ್ಟ ಮೊದಲ ಬಾರಿಗೆ ಸಾವಿತ್ರಿ ಭಾಯಿ ಪುಲೆ ಪ್ರಶಸ್ತಿ,ಮಕ್ಕಳಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಕ್ಕಳ ಪ್ರತಿಭೆಗೆ ವೇದಿಕೆ ನೀಡುವುದು ಮಕ್ಕಳ ಸಾಹಿತ್ಯ ಪರಿಷತ್ತಿನ ಉದ್ದೇಶ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಂಕರ ದೇವರು ಹಿರೇಮಠ ಜಿಲ್ಲಾಧ್ಯಕ್ಷರು, ಮ.ಸಾ.ಪ. ರಾಯಚೂರು.ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಹೆಚ್.ಜಿ.ಹಂಪಣ್ಣನಿವೃತ್ತ ಸಮನ್ವಯಾಧಿಕಾರಿಗಳು, ಅಶೋಕ ಬೆನ್ನೂರು, ಪಂಪಾಪತಿ ಹೂವಿನಬಾವಿ, ಇನ್ನೂ ಅನೇಕರು ಮಾತನಾಡಿದರು.

ಸ್ವಾಗತವನ್ನು ದುರುಗಪ್ಪ ಗುಡದೂರು ನೆರವೇರಿಸಿದರು.ಕುಮಾರಿ ರಂಗು ಗಲಗ ಪ್ರಾರ್ಥಿಸಿದರು.ಇದೇ ಸಂದರ್ಭದಲ್ಲಿ ಚೆಲುವ ಚಿಣ್ಣರು ಮಕ್ಕಳ ಸಾಹಿತ್ಯ ಪತ್ರಿಕೆ ಲೋಕಾರ್ಪಣೆ ಮಾಡಲಾಯಿತು.ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಆಗಮಿಸಿದ ಮಕ್ಕಳು ಕವಿಗೋಷ್ಠಿಯಲ್ಲಿ ಭಾಗವಹಿಸಿ ಕವನ ವಾಚನ ಮಾಡಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಇಸ್ಮಾಯಿಲ್ ಸಾಬ್,ಪಂಪಯ್ಯ ಸ್ವಾಮಿ ಸಾಲಿಮಠ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು.ಡಾ. ಹುಸೇನಪ್ಪ ಅಮರಾಪುರ ಅಧ್ಯಕ್ಷರು, ದಲಿತ ಸಾಹಿತ್ಯ ಪರಿಷತ್ತು,ಬಸವರಾಜ್ ನಾಯಕ ಅಧ್ಯಕ್ಷರು, ಜನಪದ ಸಾಹಿತ್ಯ ಪರಿಷತ್ತು ಸರ್ವ ಸದಸ್ಯರು ಮುದ್ದು ಮಕ್ಕಳು ಇದ್ದರು…

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend