ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ವತಿಯಿಂದ ಇಂದು ಕಾರಿಗನೂರು ಗ್ರಾಮದ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಶಾಲೆಯಲ್ಲಿ ಪರಿಸರ ದಿನಾಚರಣೆಯ ನಿಮಿತ್ಯ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮಕ್ಕೆ ಕಾರಿಗನೂರು 23ನೇ ವಾರ್ಡಿನ ನಗರಸಭೆ ಸದಸ್ಯರು ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಕರವೇ ಯುವ ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ ಟಿ ಮಂಜುನಾಥ ಕರವೇ ಯುವ ಸೇನೆಯ ಅಲ್ಪಸಂಖ್ಯಾತರ ಜಿಲ್ಲಾಧ್ಯಕ್ಷರು ಶಬ್ಬೀರ್ ಅಹ್ಮದ್ ಎಸ್ಸಿ ಜಿಲ್ಲಾ ಘಟಕ ಅಧ್ಯಕ್ಷರು ವೆಂಕಟೇಶ್ವರ ಹೊಸಪೇಟೆ ತಾಲೂಕು ಅಧ್ಯಕ್ಷರು ಬಿ ಗಣೇಶ್ ಕೊಂಡನಾಯಕನಹಳ್ಳಿ ಘಟಕ ಅಧ್ಯಕ್ಷರು ಮುಸ್ತಾಫ್ ಇಸ್ಮಾಯಿಲ್ ಭರ್ಮಪ್ಪ ಹೊನ್ನಯ್ಯ ಹಾಗೂ ಗ್ರಾಮದ ಎಲ್ಲಾ ಪದಾಧಿಕಾರಿಗಳು ಸೇರಿಕೊಂಡು ಗಿಡ ನೆಡುವ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು ಈ ಸಂದರ್ಭದಲ್ಲಿ ಕರವೇ ಯುವ ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿಟಿ ಮಂಜುನಾಥ್ ಅವರು ಪರಿಸರವನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವೆಂದು ಗಿಡಗಳು ನಮ್ಮ ಮುಂದಿನ ಪೀಳಿಗೆಗೆ ಒಳ್ಳೆಯ ಪರಿಸರ ಹಾಗೂ ಒಳ್ಳೆಯ ವಾತಾವರಣವನ್ನು ಬರಬೇಕಾದರೆ ನಾವು ಗಿಡಗಳನ್ನು ನೆಟ್ಟು ಬೆಳೆಸಿ ಪೋಷಿಸಿ ನಮ್ಮ ನೆಲ-ಜಲವನ್ನು ಸಂರಕ್ಷಿಸಬಹುದು ಆದಕಾರಣ ಎಲ್ಲರೂ ಪರಿಸರವನ್ನು ರಕ್ಷಿಸಬೇಕೆಂದು ವ್ಯಕ್ತಪಡಿಸಿದರು ಹಸಿರಿದ್ದರೆ ಉಸಿರು ಹಸಿರಿದ್ದರೆ ಜೀವಸಂಕುಲ ನಂತರ ಆಗಮಿಸಿದ ಅತಿಥಿಗಳು ಗಿಡ ನೆಡುವ ಸಂಕಲ್ಪವನ್ನು ಮಾಡಿದರು ಇದೇ ಸಂದರ್ಭದಲ್ಲಿ ಬಿಟಿ ಮಂಜುನಾಥ್ ಅವರು ಮನ ಮನದಲ್ಲಿ ಮನೆ ಮನೆಯಲ್ಲಿ ಖಾಲಿ ಇರುವ ಸ್ಥಳದಲ್ಲಿ ಒಂದು ಗಿಡ ನೆಡಿ ಕೇವಲ ಪ್ರತಿ ಒಬ್ಬರು ಒಂದು ಗಿಡ ನೆಡಿ ಪ್ರಕೃತಿಯ ತಾಯಿಗೆ ನಮಿಸಿ ಭಾವನಾತ್ಮಕ ಮಾತುಗಳನ್ನಾಡಿದರು..

ವರದಿ.ಗಣೇಶ್, ಕೆ, ಹೊಸಪೇಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
