;

ಹರಪನಹಳ್ಳಿ ಪಟ್ಟಣ ಎಸ್. ಜೆ. ಎಂ. ಕಾಲೇಜಿನ ವಿದ್ಯಾರ್ಥಿ ಕಲಾವಿಭಾಗದಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ…!!!

ಹರಪನಹಳ್ಳಿ ಪಟ್ಟಣ ಎಸ್. ಜೆ. ಎಂ. ಕಾಲೇಜಿನ ವಿದ್ಯಾರ್ಥಿ ಕಲಾವಿಭಾಗದಲ್ಲಿ 592 ಪಡೆಯುವುದರ ಮೂಲಕ ರಾಜ್ಯಕ್ಕೆ ಮೂರನೇ ಗಳಿಸಿದ್ದಾನೆ.

ಜೂನ್ 18 ಹರಪನಹಳ್ಳಿ ಪಟ್ಟಣದ ಎಸ್. ಯು. ಜೆ, ಎಂ, ಕಾಲೇಜಿನ ವಿದ್ಯಾರ್ಥಿ ಸಂತೋಷ್ ಅವರು ದ್ವಿತೀಯ ಪಿಯು ಕಲಾ ವಿಭಾಗದಲ್ಲಿ 592 ಅಂಕ ಪಡೆಯುವುದರ ಮೂಲಕ ರಾಜ್ಯಕ್ಕೆ ಮೂರನೇ ರಾಂಕ್ ಗಳಿಸಿದ್ದಾನೆ.

ಕನ್ನಡ 99 ಸಂಸ್ಕೃತ 99 ಐಚಿಕ ಕನ್ನಡ 99 ಇತಿಹಾಸ 98 ಪೊಲಿಟಿಕಲ್ ಸೈನ್ಸ್ 97 ಶಿಕ್ಷಣಶಾಸ್ತ್ರ 100 ಹೀಗೆ ಒಟ್ಟು 592 ಅಂಕಗಳನ್ನು ಕಳಿಸಿದ್ದಾನೆ. ಹಗರಿಬೊಮ್ಮನಹಳ್ಳಿ ತಾಲೂಕಿನ ಕೇಶವ ರಾಯನ ಬಂಡಿ ಗ್ರಾಮದ ಸಂತೋಷ್ ಇಲ್ಲಿಯ ಎಸ್ ಯು,ಜೆ,ಎಂ, ಪದವಿ ಪೂರ್ವ ಕಾಲೇಜಿ ನಲ್ಲಿ ವ್ಯಾಸಂಗ ಮಾಡಿದನು ತಂದೆ ಸಣ್ಣ ಹನುಮಂತಪ್ಪ ತಾಯಿ ನಾಗರತ್ನಮ್ಮ ಬಡ ದಂಪತಿಗಳ ಜೇಷ್ಠ ಪುತ್ರ ಇವರಿಗೆ ಕೇವಲ ಮೂರು ಎಕರೆ ಜಮೀನು ಇದೆ ವ್ಯವಸಾಯ ಮತ್ತು ಕೂಲಿ ಜೀವನ ಸಾಗಿಸಬೇಕು
ಅಂದಾಜು 50 ಕಿಲೋಮೀಟರ್ ದೂರದಿಂದ ಹರಪನಹಳ್ಳಿಯ ಕಾಲೇಜಿಗೆ ಬಸ್ ಪಾಸ್ ಮಾಡಿಸಿಕೊಂಡು ಆಗಮಿಸುತ್ತಿದ್ದು ಪರೀಕ್ಷೆ ಹತ್ತಿರ ಬಂದಾಗ 20 ಕಿಲೋಮೀಟರ್ ದೂರದ ಇಟಗಿ ಗ್ರಾಮದಲ್ಲಿ ಸಂಬಂಧಿಕರ ಮನೆಯಲ್ಲಿ ಇದು ಅಭ್ಯಾಸ ಮಾಡುತ್ತಿದ್ದನು.
4:30 ರಿಂದ 5.30 ರವರೆಗೆ ಸಂಜೆ 6ರಿಂದ 10 ಗಂಟೆಯವರೆಗೆ ವ್ಯಾಸಂಗ ಮಾಡುತ್ತಿದ್ದೆ ಎಂದು ಹೇಳಿಕೊಂಡನು.
ತಂದೆ-ತಾಯಿ ಹಾಗೂ ಉಪನ್ಯಾಸಕರ ಸಹಾಯದಿಂದ ನಾನು ಈ ರೀತಿ ಅಂಕ ಪಡೆಯಲು ಅನುಕೂಲವಾಯಿತು ಎಂದು ಸಂತೋಷ್ ಸ್ಮರಿಸಿದರು.
ಉಜ್ಜಯಿನಿ ಗುರುಪೀಠದ ಎಸ್. ಕೆ. ಹಿರೇಮಠ್ ಪ್ರತಿಕ್ರಿಯೆ ನೀಡಿ ಪ್ರಥಮ ರ್ಯಾಂಕ್ ನಿರೀಕ್ಷೆ ಇಟ್ಟುಕೊಂಡಿದ್ದೆವು ಆದರೂ ಮೂರನೇ ರ್ಯಾಂಕ್ ಬಂದಿದೆ ನಮ್ಮ ಜಿಲ್ಲಾ ಬೋಧಕ ಸಿಬ್ಬಂದಿ ಮಾರ್ಗದರ್ಶನ ನೀಡಿದ ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿ ಸಲ್ಲುತ್ತದೆ ಎಂದು ಹೇಳಿದರು.

ಪ್ರಾಚಾರ್ಯ ಎಸ್, ಕೆ, ಹಿರೇಮಠ್ ಶಿಕ್ಷಣಶಾಸ್ತ್ರ ಉಪನ್ಯಾಸಕ ಕೊಟ್ರೇಶ್ ಹಾಗೂ ಎಚ್ ಬಿ ಸೋಮರೆಡ್ಡಿ, ಪಿಎಂ ಜೈದೀಪ್, ಹಾಗೂ ಬೋಧಕೇತರ ಸಿಬ್ಬಂದಿ ಎಂ, ಜೆ, ರುದ್ರಯ್ಯ, ಸಿದ್ದೇಶ್, ಉಪಸ್ಥಿತರಿದ್ದು ವಿದ್ಯಾರ್ಥಿಗೆ ಸಿಹಿತಿನಿಸು ಶುಭ ಕೋರಿದರು…

ವರದಿ. ಪ್ರತಾಪ್. ಸಿ. ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;