;

ಮಹಾಲಿಂಗಪುರ ತಾಲ್ಲೂಕು ಹೋರಾಟಕ್ಕೆ ಪಂಚಮಸಾಲಿ ಸಮುದಾಯ ಬೆಂಬಲ…!!!

ಮಹಾಲಿಂಗಪುರ ತಾಲ್ಲೂಕು ಹೋರಾಟಕ್ಕೆ ಪಂಚಮಸಾಲಿ ಸಮುದಾಯ ಬೆಂಬಲ

ಮಹಾಲಿಂಗಪುರ ತಾಲ್ಲೂಕುಗಾಗಿ ಮುಂದುವರಿದ ಅನಿರ್ದಿಷ್ಟ ಹೋರಾಟ ಸತತ ಅರವತ್ತು ನಾಲ್ಕು ದಿನಕ್ಕೆ ಕಾಲಿಟ್ಟು ಮಾಡು ಇಲ್ಲವೆ ಮಡಿ ಎಂಬ ಪ್ರಯತ್ನದೊಂದಿಗೆ ಸುಮಾರು ಎರಡು ತಿಂಗಳು ಹೆಚ್ಚಿಗೆ ದಿನಗಳಿಂದ ಪ್ರತಿಭಟಿಸುತ್ತಾ ಪ್ರತಿ ದಿನ ಬೇರೆ ಬೇರೆ ಸಮುದಾಯಗಳಿಂದ ಬೆಂಬಲ ಸೂಚಿಸಿ ಇವತ್ತಿನ ದಿನ ಪಂಚಮಸಾಲಿ ಸಮಾಜದಿಂದ ಮುಂದುವರೆದಿದೆ.
ಮಹಾಲಿಂಗಪುರ ನಗರ ಬಾಗಲಕೋಟೆ ಜಿಲ್ಲೆಯಲ್ಲಿ ಅತಿಹೆಚ್ಚು ಜನನಿಬಿಡ ವಾಣಿಜ್ಯ ನಗರ ಆಗಿರುವುದರಿಂದ ತಹಸಿಲ್ದಾರ ಕಛೇರಿ ಬನಹಟ್ಟಿಯಲ್ಲಿ ಮತ್ತು ಸರ್ಕಾರಿಯ ಹಲವು ಕಛೇರಿಗಳು ಮುಧೋಳ, ರಬಕವಿ-ಬನಹಟ್ಟಿ,ತೇರದಾಳ ನಗರಗಳಲ್ಲಿ ವಿಂಗಡನೆ ರೂಪದಲ್ಲಿದ್ದಂತಾಗಿದೆ ಇದರಿಂದ ಜನರು ಸರ್ಕಾರಿ ಕಛೇರಿಗಳಲ್ಲಿನ ಕೆಲಸಗಳಿಗೆ ಅಲೆದಾಡುವಂತಾಗಿದೆ. ಸುತ್ತ ಹಳ್ಳಿಯ ಮತ್ತು ಸ್ಥಳಿಯ ಜನಸಂಖ್ಯೆ ಲಕ್ಷಕ್ಕೂ ಹೆಚ್ಚು, ಸುತ್ತ ಹಳ್ಳಿಗಳು ಕೂಡಿ ಭೌಗೋಳಿಕವಾಗಿ ಕ್ಷೇತ್ರ ವಿಸ್ತೀರ್ಣ, ವೇಗವಾಗ ಬೆಳೆಯುತ್ತಿರುವ ವಾಣಿಜ್ಯ ನಗರ ಆಗಿರುವುದರಿಂದ ಜನರ ಅನುಕೂಲಕ್ಕಾಗಿ ಮಹಾಲಿಂಗಪುರ ಪಟ್ಟಣವನ್ನು ತಾಲ್ಲೂಕು ಕೇಂದ್ರವಾಗಿ ಘೋಷಿಸಿ ಜನರ ಪರದಾಟವನ್ನು ತಗ್ಗಿಸಲು ಅನಿರ್ದಿಷ್ಟವಾಗಿ ಮಾಡುತ್ತಿರುವ ಹೋರಾಟಕ್ಕೆ ಪ್ರತಿ ದಿನ ಬೇರೆ ಬೇರೆ ಸಮುದಾಯಗಳು,
ಸಂಘಟನೆಗಳು,ಮಹಿಳಾ ಸಂಘಗಳು,ಜಾನಪದ ಕಲಾವಿದರು,ಅಂಗಡಿ ಮುಂಗಟ್ಟು,ವಕೀಲರ ಸಂಘ,ವೈದ್ಯರ ಒಕ್ಕೂಟ ಹೀಗೆ ಹಲವಾರು ಸಂಘಟನೆ ಸಮುದಾಯಗಳು ಸತತ ಪ್ರಯತ್ನವಾಗಿ ಮಹಾಲಿಂಗಪುರ ತಾಲ್ಲೂಕು ಹೋರಾಟದಲ್ಲಿ ಭಾಗವಹಿಸಿ ಸರ್ಕಾರ ಗಮನ ಸೆಳೆದು ಒತ್ತಡ ತರುವುಕ್ಕೆ ಕೈ ಜೋಡಿಸಿವೆ.

ವರದಿ.
ಬಸವರಾಜ ನಂದೆಪ್ಪನವರ
ಮಹಾಲಿಂಗಪುರ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;