;

ಕಾನೂನು ಬಾಹಿರವಾಗಿ ಸಾಗುವಳಿ ಮಾಡುತ್ತಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಮನವಿ…!!!

ಕಾನೂನು ಬಾಹಿರವಾಗಿ ಸಾಗುವಳಿ ಮಾಡುತ್ತಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಮನವಿ.

ಸಿಂಧನೂರು: ಜೂನ್ 15. ಗೋರೆಬಾಳ ಗ್ರಾಮದಲ್ಲಿ ಡಾ‌‌. ಬಿ.ಆರ್ ಅಂಬೇಡ್ಕರ ವಸತಿ ಶಾಲೆಯ ಭೂಮಿಯನ್ನು ಅನಧಿಕೃತವಾಗಿ ಮತ್ತು ಕಾನೂನು ಬಾಹಿರವಾಗಿ ಸಾಗುವಳಿ ಮಾಡುತ್ತಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಂಡು ಸರಕಾರಆಸ್ತಿಯನ್ನು ಉಳಿಸಿಕೊಡುವಂತೆ ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಬಿ.ಪಾಟೀಲ್ ಮುನೇನಕೊಪ್ಪ ಅವರಿಗೆ ಬಹುಜನ ಸಮಾಜ ಪಕ್ಷದಿಂದ ಮನವಿ ಪತ್ರ ಸಲ್ಲಿಸಿದರು.

ನಗರದ ನೀರಾವರಿ ಮೈದಾನದಲ್ಲಿ ಸಚಿವರು ಸರ್ಕಾರಿ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಮನವಿ ಪತ್ರ ಸಲ್ಲಿಸಿದ ಅವರು 3 ಏಪ್ರಿಲ್ 2022 ರಂದು ತಹಶೀಲ್ದಾರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಗಳಿಗೆ ಒಂದು ದಿನದ ಸಾಂಕೇತಿಕ ಪ್ರತಿಭಟನೆ ಮೂಲಕ ಮನವಿ ಮಾಡಿಕೊಂಡರು ಯಾವುದೇ ಕಾನೂನು ಕ್ರಮ ತೆಗೆದುಕೊಂಡಿರುವುದಿಲ್ಲ ಎಂದು ಸಚಿವರಿಗೆ ತಿಳಿಸಿದರು.

ನಂತರ ಮಾತನಾಡಿದ ಅವರು ಕರ್ನಾಟಕ ಸರಕಾರದ ಆಯವ್ಯಯ ಬಜೆಟ್ ನಲ್ಲಿ ನಿರ್ಣಯದಂತೆ ಹೋಬಳಿಗೆ ಒಂದರಂತೆ ಡಾ.ಬಿ ಆರ್ ಅಂಬೇಡ್ಕರ್ ವಸತಿ ಶಾಲೆ (ಪರಿಶಿಷ್ಠ ಜಾತಿ 825 )ಗಳು ಮಂಜೂರು ಆಗಿದ್ದು ಅದಕ್ಕೆ ತಕ್ಕಂತೆ ಗೋರೆಬಾಳ ಗ್ರಾಮದಲ್ಲಿ ಜಮೀನು ಸರ್ವೆ ನಂ: 22/*/1 ಎಂಟು ಎಕರೆ 21 ಗುಂಟೆ ಜಮೀನನ್ನು ರೂ1,86,96,000-00 (ರೂಪಾಯಿ ಒಂದು ಕೋಟಿ ಎಂಬತ್ತಾರು ಲಕ್ಷ ತೊಂಭತಾರು ಸಾವಿರ ಮಾತ್ರ ) ಗಳನ್ನು ಚೆಕ್ ಮೂಲಕ ಶಿವನಗೌಡ ನೆಟಕಲ್ ತಂದೆ ಹನುಮಪ್ಪ ಗೊರೇಬಾಳ ಇವರಿಗೆ ಹೆಸರಲ್ಲಿ ಖರೀದಿ ಮಾಡಲಾಗಿರುತ್ತದೆ.ಸದರಿ ಭೂಮಿಯನ್ನು ರಾಜ್ಯಪಾಲರು ಕರ್ನಾಟಕ ಸರ್ಕಾರ ಬೆಂಗಳೂರು ಇವರ ಪರವಾಗಿ ಪ್ರಾಚಾರ್ಯರು ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ಗೊರೇಬಾಳ ಇವರ ಹೆಸರಿನಲ್ಲಿ ಆರ್.ಟಿ.ಸಿ ಮತ್ತು ವರ್ಗಾವಣೆ ಆಗಿರುತ್ತದೆ. ಆದರೆ ಖಾಸಗಿ ವ್ಯಕ್ತಿ ಶಿವನಗೌಡ ನೆಟೆಕಲ್ ತಂದೆ ಹನುಮಪ್ಪ ಗೊರೇಬಾಳ ಇವರು ಕಾನೂನು ಬಾಹೀರವಾಗಿ ಅನಧಿಕೃತವಾದ ಶಾಲೆಗೆ ಮೀಸಲಿಟ್ಟ ಜಮೀನಿನಲ್ಲಿ ಸಾಗುವಳಿ ಮಾಡುತ್ತಾ ಬಂದಿರುತ್ತಾರೆ. ಈ ವಿಷಯವಾಗಿ ಅನೇಕ ರೀತಿಯ ಬೀದಿಯಲ್ಲಿ ಹೋರಾಟಗಳ ಮುಖಾಂತರ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು ಮತ್ತು ಅನಧಿಕೃತವಾಗಿ ಕಾನೂನು ಬಾಹಿರವಾಗಿ ಸಾಗುವಳಿ ಮಾಡುತ್ತಿರುವದನ್ನು ಒಪ್ಪಿಕೊಂಡರು ತಪ್ಪಿತಸ್ಥರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಕೊಂಡಿರುವುದಿಲ್ಲ ಇದನ್ನೆಲ್ಲ ನೋಡಿದರೆ ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ. ಅದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದ್ದೇವೆ.ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕಾನೂನು ಕ್ರಮ ಜರಗಿಸಬೇಕು, ಮತ್ತು ಶಾಲೆಯ ಆಸ್ತಿಯನ್ನು ಉಳಿಸಿಕೊಡಬೇಕು ಒಂದು ವೇಳೆ ತಾವುಗಳು ಯಾವುದೇ ಕ್ರಮ ತೆಗೆದುಕೊಳ್ಳದೆ ಹೋದಲ್ಲಿ ನಮ್ಮ ಬಹುಜನ ಸಮಾಜ ಪಕ್ಷವು ಸಾರ್ವಜನಿಕರ ಸಹಯೋಗದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವ ಅನಿವಾರ್ಯವಾಗುತ್ತದೆ ಪತ್ರಿಕೆಗೆ ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರಾದ ಹುಲುಗಪ್ಪ ಮಲ್ಕಾಪೂರು, ಚನ್ನಪ್ಪ ಏಳುರಾಗಿ ಕ್ಯಾಂಪ್, ನಿಂಗರಾಜ ಮಲ್ಲಾಪೂರು,ಇದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;