ಇಟ್ಟಿಗಿ ಗ್ರಾಮ ಪಂಚಾಯತಿಗೆ ಅವಿರೋಧವಾಗಿ ಉಪಾಧ್ಯಕ್ಷರಾಗಿ ಅಂಬಳಿ ಮದ್ದಾನಸ್ವಾಮಿ ಆಯ್ಕೆ. ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ಇಟ್ಟಿಗಿ ಗ್ರಾಮ15/06/2022ರಂದು ಪಂಚಾಯತಿಯಲ್ಲಿ ಉಪಾಧ್ಯಕ್ಷರ ಆಯ್ಕೆ ನಡೆಯಿತು. ಈ ಆಯ್ಕೆ ಪ್ರಕ್ರಿಯೆಯಲ್ಲಿ ಅವಿರೋಧವಾಗಿ ಇಟ್ಟಿಗಿ ಗ್ರಾಮ ಪಂಚಾಯತಿಗೆ ಉಪಾಧ್ಯಕ್ಷರಾಗಿ ಅಂಬಳಿ ಮದ್ದಾನಸ್ವಾಮಿಯವರು ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿ ಆಗಮಿಸಿದ್ದ ಹೂವಿನ ಹಡಗಲಿ ತಹಸೀಲ್ದಾರರಾದ ಶ್ರೀಮತಿ ಪ್ರತಿಭಾ ಎಂ ಅವರು ಘೋಷಿಸಿದರು. ನೂತನವಾಗಿ ಆಯ್ಕೆಗೊಂಡಂತಹ ಉಪಾಧ್ಯಕ್ಷರಿಗೆ ಇಟ್ಟಿಗಿ ಗ್ರಾಮ ಪಂಚಾಯತಿಯ ಸರ್ವ ಸದಸ್ಯರು ಹೂವಿನ ಹಾರ ಹಾಕುವುದರ ಮೂಲಕ ಅಭಿನಂದಿಸಿದರು.

ಶಾಂತಿಯುತವಾಗಿ ಚುನಾವಣೆ ಆಯ್ಕೆ ಪ್ರಕ್ರಿಯೆಯನ್ನ ನಡೆಸಿಕೊಟ್ಟ ಚುನಾವಣಾಧಿಕಾರಿಯಾದ ಶ್ರೀಮತಿ ಪ್ರತಿಭಾ ಎಂ (ತಹಶಿಲ್ದಾರ ಹೂವಿನ ಹಡಗಲಿ) ಇವರಿಗೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಪುಷ್ಪಾಶಿವಪ್ಪರವರು ಹಾರ ಹಾಕಿ ಅಭಿನಂದಿಸಿದರು.ಈ ಪ್ರಕ್ರಿಯೆಯಲ್ಲಿ ಇಟ್ಟಿಗಿ ಗ್ರಾಮ ಪಂಚಾಯತಿಯ PDO ಪ್ರಕಾಶ್ ಮಾದೂರು ಹಾಗೂ ಗ್ರಾಮ ಪಂಚಾಯತಿ ಕಾರ್ಯಲಯದ ಸರ್ವ ಸಿಬ್ಬಂದಿಗಳು ಹಾಗೂ ಊರಿನ ಯುವ ಬಿಜೆಪಿ ಕಾರ್ರಕರ್ತರು.ಇಟ್ಟಿಗಿ ಗ್ರಾಮ ಪಂಚಾಯತಿಯ ಸರ್ವ ಸದಸ್ಯರು.ಊರಿನ ಹಿರಿಯರು ಭಾಗವಹಿಸಿದ್ದರು.
ವರದಿ-ಪ್ರಕಾಶ್ ಆಚಾರ್ ಇಟ್ಟಿಗಿ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
