ಚಿತ್ರದುರ್ಗ ಜಿಲ್ಲೆಯ, ಚಳ್ಳಕೆರೆಯಲ್ಲಿ ಮಳೆರಾಯನದ್ದೆ ಕಾರು ಬಾರು…!!!

ರಾತ್ರಿ 7 ಗಂಟೆ ಸುಮಾರಿಗೆ ಚಿತ್ರದುರ್ಗ (chitradurga ) ಜಿಲ್ಲೆಯಾದ್ಯಂತ ಶುರುವಾದ ಮಳೆರಾಯನ (Rain) ಆರ್ಭಟ ಇಡೀ ರಾತ್ರಿಯೂ ಬಿಟ್ಟು ಬಿಡದೇ ಅಬ್ಬರಿಸಿರೋ ಹಿನ್ನೆಲೆ ಜನರ ಜೀವನ ಅಸ್ತವ್ಯಸ್ತವಾಗಿದೆ.ಚಳ್ಳಕೆರೆ ತಾಲ್ಲೂಕಿನಾದ್ಯಂತ ತಡರಾತ್ರಿ ಸುರಿದಿರೋ‌ ಮಳೆಗೆ ತಾಲ್ಲೂಕಿನ ದುರ್ಗಾವರ ಗ್ರಾಮದ ಬಳಿ ಇದ್ದ ಜಿಯೋ ಕಂಪನಿಯ ಟವರ್ ಕೂಡ ಗಾಳಿ ಸಮೇತ ಬಿರುಗಾಳಿ ಮಳೆಗೆ ನೆಲಕ್ಕುರುಳಿದೆ. ಪಕ್ಕದಲ್ಲೇ ಇದ್ದ ಹಲವು ಮನೆಗಳಿಗೆ ಯಾವುದೇ ಹಾನಿಯಾಗಿಲ್ಲ. ಮೇಲಾಗಿ, ಟವರ್ ಪಕ್ಕದಲ್ಲಿ ಇದ್ದ ಗೂಡಂಗಡಿ ಮೇಲೆ ಉರುಳಿ ಬಿದ್ದಿದ್ದು ತಡರಾತ್ರಿ ಆಗಿರೋದ್ರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ.

ಇನ್ನೂ ಗೂಡಂಗಡಿಯ ಮೇಲೆ ಟವರ್ ಬಿದ್ದಿರೋ ಪರಿಣಾಮ ಸಂಪೂರ್ಣ ಜಖಂ ಆಗಿದ್ದು ಸಾವಿರಾರು ರೂ ಮೌಲ್ಯದ ಪೀಠೋಪಕರಣಗಳು ಹಾಗೂ ವಸ್ತುಗಳು ನಾಶವಾಗಿವೆ. ಇಷ್ಟೆಲ್ಲಾ ಘಟನೆಯ ಮಾಹಿತಿ ತಿಳಿದ ಕೂಡಲೇ ಬೆಳಗ್ಗೆ ಚಳ್ಳಕೆರೆ ತಹಶಿಲ್ದಾರ್ ರಘುಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಕುರಿತು ಸೂಕ್ತ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು…

ವರದಿ. ಶಶಿಕುಮಾರ್ ಚಳ್ಳಕೆರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend