ಗುಡೇಕೋಟೆ ಸಂಕ್ಲಾಪುರ ಸಿಲಿಂಡರ್ ಸ್ಪೋಟ ಇಬ್ಬರು ಯುವಕರು ಸಾವು…!!!

ಗುಡೇಕೋಟೆ ಸಂಕ್ಲಾಪುರ ಸಿಲಿಂಡರ್ ಸ್ಪೋಟ ಇಬ್ಬರು ಯುವಕರು ಸಾವು

ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಸಮೀಪದ ಬೆಳ್ಳಿಗಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಕ್ಲಾಪುರ ಗ್ರಾಮದಲ್ಲಿ ಭಾನುವಾರ ಸಂಜೆ 4.30 ರ ವೇಳೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಎಗ್ ರೈಸ್ ಅಂಗಡಿಗೆ ಬೆಂಕಿ ತಗುಲಿದ್ದು.ಬೆಂಕಿಯನ್ನು ನೋಡಲು ಬಂದ ಇಬ್ಬರು ಯುವಕರಿಗೆ ಸಿಲಿಂಡರ್ ಸ್ಪೋಟಗೊಂಡು ಇಬ್ಬರು ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ನಡೆದಿದೆ.ಬೆಳ್ಳಿಗಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಕ್ಲಾಪುರ ಗ್ರಾಮದ ಶ್ರೀಕಾಂತ್ (23). ಶಿವಣ್ಣ (31) ಗ್ಯಾಸ್ ತುಂಡು ತಗುಲಿ ಮೃತ ಪಟ್ಟ ದುರ್ದೈವಿ ಯುವಕರಾಗಿದ್ದಾರೆ.ಬೆಂಕಿ ಅನಾಹುತದಿಂದ ಎಗ್ ರೈಸ್ ಅಂಗಡಿ ಮತ್ತು ಪಕ್ಕದಲ್ಲೇ ನಿಲ್ಲಿಸಿದ ಬೈಕ್ ಸಂಪೂರ್ಣ ಸುಟ್ಟಿದ್ದು.ಆಗ್ನಿಶಾಮಕದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.ಸ್ಥಳಕ್ಕೆ ಕೂಡ್ಲಿಗಿ ತಹಶೀಲ್ದಾರ್ ಟಿ.ಜಗದೀಶ್.ಕೂಡ್ಲಿಗಿ ಡಿವೈಎಸ್ಪಿ ಹರೀಶ್ ರೆಡ್ಡಿ.ಗುಡೇಕೋಟೆ ಪಿಎಸ್ಐ ಶಾಂತಮೂರ್ತಿ.ಗುಡೇಕೋಟೆ ಕಂದಾಯ ನಿರೀಕ್ಷಕರಾದ ಯಜಮಾನಪ್ಪ.ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಗುಡೇಕೋಟೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

ವರದಿ. ಡಿ.ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend