ಪರಿಸರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ಅಮರೇಗೌಡ ಮಲ್ಲಾಪೂರು ಕಾರ್ಯ ಶ್ಲಾಘನೀಯ – ಬಸವರಾಜ ನಾಡಗೌಡ…!!!

ಪರಿಸರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ
ಅಮರೇಗೌಡ ಮಲ್ಲಾಪೂರು ಕಾರ್ಯ ಶ್ಲಾಘನೀಯ – ಬಸವರಾಜ ನಾಡಗೌಡ

ಸಿಂಧನೂರು : ಜೂನ್. 5. ಪರಿಸರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ಇದು ಕೇವಲ ಒಬ್ಬರು ಇಬ್ಬರು ಮಾಡುವ ಕಾರ್ಯ ಅಲ್ಲ ಎಂದು ಜೆಡಿಎಸ್ ತಾಲೂಕು ಅದ್ಯಕ್ಷ ಬಸವರಾಜ ನಾಡಗೌಡ ತಿಳಿಸಿದರು.

ನಗರದ ಪಿ.ಡಬ್ಲ್ಯೂ.ಡಿ.ಕ್ಯಾಂಪಿನ ನೀರಾವರಿ ಇಲಾಖೆಯ ಆವರಣದಲ್ಲಿ ವನಸಿರಿ ಫೌಂಡೇಶನ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಆಚರಿಸಿ ಐದು ಸಾವಿರ ಸಸಿಗಳನ್ನು ವಿತರಿಸಿ ಮಾತನಾಡಿದ ಅವರು ಪ್ರತಿಯೊಬ್ಬ ವ್ಯಕ್ತಿಯೂ ಪರಿಸರವನ್ನು ಉಳಿಸಿ ಬೆಳೆಸುವ ಪ್ರಯತ್ನ ಮಾಡಬೇಕು, ವನಸಿರಿ ಪೌಂಡೇಶನ್ ರುವಾರಿಗಳಾದ ಅಮರೇಗೌಡ ಮಲ್ಲಾಪೂರು ಹಾಗೂ ಅವರ ತಂಡದೊಂದಿಗೆ ರಾಜ್ಯದೆಲ್ಲಡೆ ಸಂಚರಿಸಿ ಜನರಿಗೆ ಪರಿಸರದ ಬಗ್ಗೆ ಅರಿವು ಮೂಡಿಸುತ್ತಿರುವುದು ಕಾರ್ಯ ತುಂಬಾ ಶ್ಲಾಘನೀಯ. ಅವರ ಈ ಕಾರ್ಯ ಇನ್ನೂ ಹೆಚ್ಚಿನ ರೀತಿಯಲ್ಲಿ ಸಾಗಲಿ ಎಂದು ಆಶಿಸುತ್ತಾ ಎಲ್ಲರಿಗೂ ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು.

ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷ ಅಮರೇಗೌಡ ಮಲ್ಲಾಪೂರ ಮಾತನಾಡಿ ನೆಟ್ಟ ಗಿಡಗಳಿಗೆ ನೀರು ಹಾಕುವುದು ಮತ್ತು ಅದಕ್ಕಾಗಿ ನೀರಿನ ಅಭಾವ ಉಂಟಾಗುವುದನ್ನು ಸರಿದೂಗಿಸಲು ಜೂನ್ 5 ರಂದು ವಿಶ್ವ ಪರಿಸರ ದಿನ ವೆಂದು ಆಚರಿಸುತ್ತೇವೆ. ಪರಿಸರದ ಸಂರಕ್ಷಣೆಗೆ ಅದೆಷ್ಟು ಜಾಗೃತಿ ಕಾರ್ಯಕ್ರಮಗಳು, ಹೋರಾಟಗಳು ಮಾಡಿಕೊಂಡು ಬಂದಿದ್ದೀವೆ. ಇನ್ನೂ ಮುಂದೆಯೂ ಪರಿಸರ ರಕ್ಷಣೆಗಾಗಿ ನಮ್ಮ ಸೇವೆ ನಿರಂತರವಾಗಿರಲಿದೆ ಎಂದರು.

ಈ ಸಂದರ್ಭದಲ್ಲಿ ಶಂಕರಗೌಡ ಎಲೆಕೂಡ್ಲಿಗಿ ಗೌರವಾದ್ಯಕ್ಷರು, M ಮರಿಬಸನಗೌಡ, ಅಮರೇಗೌಡ ವಕೀಲ, ಭೀಮನಗೌಡ ವಕೀಲ ( ವಕೀಲರ ಸಂಘದ ಅಧ್ಯಕ್ಷರು),ನಗರಸಭೆ ಸದಸ್ಯರಾದ ವಿಠ್ಠಲರಾವ್, ಟಿ.ಎಚ್.ಓ ಅಯ್ಯನಗೌಡ, ಟ್ರಾಫಿಕ್ ಪಿ. ಎಸ್ ಐ. ಬಸವರಾಜ , ಶರಣೇಗೌಡ ಹೆಡಗಿನಾಳ ರಾಜ್ಯ ಕಾರ್ಯದರ್ಶಿಗಳು, ಚನಪ್ಪ ಜಾಲತಾಣದ ಅದ್ಯಕ್ಷರು, ಶಿವಪ್ಪ ಮೀನುಗಾರಿಕಾ ಇಲಾಖೆ, ವೀರಭದ್ರಯ್ಯ ತಿಮ್ಮಾಪೂರ ಶಿಕ್ಷಕರು, ರಾಜು ಪತ್ತಾರ ಬಳಗಾನೂರ, ಭೀಮನಗೌಡ ಕೋಳಬಾಳ, ಸಂಗೀತ ಸಾರಂಗಮಠ ಜಿಲ್ಲಾಧ್ಯಕ್ಷರು ವನಸಿರಿ ಫೌಂಡೇಶನ್, ದೀಪಾ ಸಾಲಿಮಠ, ಮಮತಾ ಹಿರೇಮಠ, ಭಾರತಿ ತಿವಾರಿ, ಜ್ಯೋತಿ ಹಿರೇಮಠ, ಆನಂದಿ ಲಾಹೋಟಿ,ಬೂದೇಶ ಮರಾಠಿ, ರಂಜಾನ್ ಸಾಬ್,ಮುದಿಯಪ್ಪ ಹೊಸಳ್ಳಿ ಕ್ಯಾಂಪ್, ರಾಜು ಬಳಗಾನೂರ,ಮುತ್ತು ಪಾಟೀಲ್ ಭೂತಲದಿನ್ನಿ ಇನ್ನಿತರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend