ಇಟ್ಟಿಗಿ ಸೋಲಾರ್ ಪ್ಲಾಂಟ್ ನಲ್ಲಿ ‘ವಿಶ್ವ ಪರಿಸರ ದಿನ’ ಆಚರಣೆ.
ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿಯ ಸೋಲಾರ್ ಪ್ಲಾಂಟ್ ಎಂಬಸಿ ಎನರ್ಜಿ ಪ್ರೈವೇಟ್ ಲಿಮಿಟೆಡ್ ನಲ್ಲಿ ದಿನಾಂಕ:5/6/2022ರಂದು ಗಿಡ ನೆಟ್ಟು ನೀರು ಎರೆಯುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿದರು. ಈ ಕಾರ್ಯಕ್ರಮದಲ್ಲಿ ಸತೀಶ್ ಕುಂಚೂರ್, ಪ್ರಕಾಶ್ ಸೋಗಿ, ಜಯಣ್ಣ ಮೋರಿಗೇರಿ, ಉಮೇಶ್ ನೆಲ್ಕುದ್ರಿ ಹಾಗೂ ರಾಜಶೇಖರ ಅಂಗಡಿ, ವೆಂಕಟೇಶ್ ಕೊಟ್ಟೂರು,
ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಗೌಡ್ರು ಸಿದ್ದಪ್ಪ, ಚಿಕ್ಕಣ್ಣನವರ ಬೆಟ್ಟಪ್ಪ ಹಾಗೂ ಸೋಲಾರ್ ನ ಸಿಬ್ಬಂದಿ ಹಾಗೂ ಕೂಲಿ ಕಾರ್ಮಿಕರಾದ ಕೆ.ದೊಡ್ಡಬಸಪ್ಪ, ಎಸ್.ಮಾರುತಿ,ಎಸ್.ಕೊಟ್ರೇಶ್, ಎಚ್.ಮಹೇಶ್,ಕೆ.ಮಲ್ಲಪ್ಪ ಹಾಗೂ ಇನ್ನಿತರರು ಭಾಗವಹಿಸಿದ್ದರು. ವಿಶ್ವ ಪರಿಸರ ದಿನವನ್ನು 1974 ರಲ್ಲಿ ವಿಶ್ವಸಂಸ್ಥೆಯ ಅನುಮೋದನೆಯೊಂದಿಗೆ ಆರಂಭಿಸಲಾಯಿತು. ಈ ಕುರಿತು 1972 ರಲ್ಲಿಯೇ ಚರ್ಚೆಗಳು ಆರಂಭವಾಗಿತ್ತು. ಆದರೆ ಎರಡು ವರ್ಷಗಳ ಕಾಲ ಈ ಚರ್ಚೆ ನಡೆಸಿ, 1974 ಜೂನ್ 5 ರಂದು ಮೊದಲು ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿ ವರ್ಷ ವಿಶ್ವ ಪರಿಸರ ದಿನವನ್ನು ಒಂದು ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತದೆ. ಮಾನವ ಸೇರಿದಂತೆ ಇತರೆ ಪ್ರಾಣಿ,ಪಕ್ಷಿಗಳಿಗೆ ಸೇರಿದಂತೆ ಭೂಮಿ ಮೇಲೆ ಹುಟ್ಟಿರುವ ಪ್ರತಿಯೊಂದು ಜೀವ ಸಂಕುಲಕ್ಕೂ ಆಹಾರ, ಗಾಳಿ,ನೀರುಗಳನ್ನು ನೀಡುವುದು ಪರಿಸರ ಇಂತಹ ಪರಿಸರವನ್ನು ಮಾನವರಾದ ನಾವುಗಳು ಆಧುನಿಕತೆಯ ಗೀಳಿಗೆ ಬಿದ್ದು ಗಾಳಿ,ನೀರು ಮಣ್ಣು ಇನ್ನೂ ಮುಂತಾದ ಪರಿಸರದ ಪ್ರತಿಯೊಂದು ಅಂಶವನ್ನು ಕಲುಷಿತ ಮಾಡ್ತಾ ಇದ್ದೆವೆ.ಇದು ಹೀಗೆ ಮುಂದುವರೆದರೆ ನಮ್ಮ ಮುಂದಿನ ಪೀಳಿಗೆಗೆ ಉಸಿರಾಡಲು ಗಾಳಿ ಸಿಗದಂತಾಗಬಹುದು. ಅದಕ್ಕಾಗಿಯೇ ಹೇಳಿರೊದು ‘ಮನೆಗೊಂದು ಮರ ಊರಿಗೊಂದು ವನ’, ಕಾಡು ಬೆಳೆಸಿ ನಾಡು ಉಳಿಸಿ’ ಅಂತಾ.ಇದನ್ನರಿತ ನಾವು ಇಂದಿನಿದಲೇ ಒಬ್ಬೊಬ್ಬರೊಂದು ಮರವನ್ನು ಬೆಳೆಸಲೆಂದು ನಮ್ಮ ಪತ್ರಿಕೆಯ ಆಶಯ.

ವರದಿ-ಪ್ರಕಾಶ್ ಆಚಾರ್ ಇಟ್ಟಿಗಿ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
