ಕೆಪಿಸಿಸಿ ಮಾಜಿ ಕಾರ್ಯದರ್ಶಿ ಕೆ.ಕರಿಯಪ್ಪ ಜನ್ಮ ದಿನಾಚರಣೆಯಂದು ಅನ್ನ ಸಂತರ್ಪಣೆ – ಎಚ್ ಸೂಲಂಗಿ ….!!!!

ಕೆಪಿಸಿಸಿ ಮಾಜಿ ಕಾರ್ಯದರ್ಶಿ ಕೆ.ಕರಿಯಪ್ಪ ಜನ್ಮ ದಿನಾಚರಣೆಯಂದು ಅನ್ನ ಸಂತರ್ಪಣೆ – ಎಚ್ ಸೂಲಂಗಿ .

ಸಿಂಧನೂರು. ಮೇ.29.ಕೆಪಿಸಿಸಿ ಮಾಜಿ ಕಾರ್ಯದರ್ಶಿಗಳು ಬಡವರ ಬಂದು, ದೀನ ದಲಿತರ ಹಿಂದುಳಿದ ವರ್ಗಗಳ ಹರಿಕಾರ, ಅಹಿಂದ ಮುಖಂಡರಾದ ಕೆ ಕರಿಯಪ್ಪ ಅವರ ಜನ್ಮ ದಿನಾಚಾರಣೆ ನಿಮಿತ್ಯ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೆ. ಕರಿಯಪ್ಪ ಅಭಿಮಾನಿ ಬಳಗದ ಗೌರವಾಧ್ಯಕ್ಷರಾದ ಎಚ್ ಸೂಲಂಗಿ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜೂನ್ 1 ರಂದು ಕಾಂಗ್ರೆಸ್ ಮುಖಂಡ ಕೆ. ಕರಿಯಪ್ಪ ನವರ ಜನ್ಮ ದಿನಾಚರಣೆ ನಿಮಿತ್ಯ ಬೆಳಿಗ್ಗೆ ನಗರದ ಜೋಳದರಾಶಿ ಆಂಜನೇಯ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ಬರುವ ಭಕ್ತರಿಗೆ ಹಾಗೂ ಸಾರ್ವಜನಿಕರಿಗೆ ಅಂದು ಅನ್ನ ಸಂತರ್ಪಣೆ ಮಾಡಲಾಗುತ್ತದೆ ಎಂದರು.

ಜೋಳದ ರಾಶಿ ಆಂಜನೇಯ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮ ಮುಗಿದ ನಂತರ ನಗರದ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಗೂ ಬಾಣಂತಿಯರಿಗೆ ಹಣ್ಣು, ಹಾಲು,ಬ್ರೆಡ್,ವಿತರಿಸಿ ನಗರದ ಕಾರುಣ್ಯ ಆಶ್ರಮದಲ್ಲಿ ಅನಾಥರು,ಅಂಗವಿಕಲರು,ವೃದ್ಧರಿಗೆ ಧೈರ್ಯ ತುಂಬುವ ಜೊತೆಗೆ ಅವರ ಆಶೀರ್ವಾದ ಪಡೆದು ನಂತರ ನಗರದ ದೇವರಾಜ್ ಅರಸು ಮಾರುಕಟ್ಟೆಯಲ್ಲಿ ಬಹಿರಂಗ ಸಭೆಯನ್ನು ಏರ್ಪಡಿಸಲಾಗಿದ್ದು ಕೆ.ಕರಿಯಪ್ಪ ಅಣ್ಣನವರ ಅಭಿಮಾನಿಗಳು ,ಹಿತೈಷಿಗಳು, ಹಾಗೂ ಕ್ಷೇತ್ರದ ದೀನ ದಲಿತರು,ಅಹಿಂದ ವರ್ಗದ ಜನರು ಮುಖಂಡರು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು.ಅಂದು ಕಾರ್ಯಕ್ರಮಕ್ಕೆ ಬರುವ ಸರ್ವರಿಗೂ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ ಎಂದು ಎಚ್ ಸೂಲಂಗಿ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.

ಕೆ. ಕರಿಯಪ್ಪ ಅಭಿಮಾನಿ ಬಳಗದ ಪದಾಧಿಕಾರಿಗಳಾದ ಮಲ್ಲಿಕಾರ್ಜುನ .ಕೆ.ರಾಜು ಅಡವಿಭಾವಿ,ಮುತ್ತು ಬರಸಿ, ಬಾಷಾ ಸುಲ್ತಾನಪುರ, ಭಾಷಾ, ಜಂಗಮರಹಟ್ಟಿ ಕಟ್ಟೆಪ್ಪ, ರಾಘವೇಂದ್ರ, ನಿಂಗಪ್ಪ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು…

 

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend