;

ಕೂಡ್ಲಿಗಿ:”ಅಮೃತ ಭಾರತಿಗೆ ಕನ್ನಡದಾರತಿ” ಅಭಿಯಾನ…!!!

ಕೂಡ್ಲಿಗಿ:”ಅಮೃತ ಭಾರತಿಗೆ ಕನ್ನಡದಾರತಿ” ಅಭಿಯಾನ.

ಕೂಡ್ಲಿಗಿ :ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ, ಮೇ28ರಂದು ತಾಲೂಕಾಡಳಿತ ನೇತೃತ್ವದಲ್ಲಿ . ವಿವಿದ ಇಲಾಖೆಗಳ ಸಹಯೋಗ ಹಾಗೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಭಾಗಿತ್ವದಲ್ಲಿ. “ಅಮೃತ ಭಾರತಿಗೆ ಕನ್ನಡದಾರತಿ” ಅಭಿಯಾನಕ್ಕೆ ಚಾಲನೆ ನೀಡಲಾಯಿತು. ತಾಯಿ ಭುವನೇಶ್ವರಿ ಹಾಗು ನಾಡದೇವತೆಯ ಬೃಹತ್ ಭಾವಚಿತ್ರ ಹೊಂದಿದ್ದ,ವಾಹನ ಮೆರವಣಿಗೆ ವಿವಿದ ವಾದ್ಯವೃಂದಗಳೊಂದಿಗೆ ಪಟ್ಟಣದೆಲ್ಲೆಡೆ ಸಂಚರಿಸಿತು. ಪಟ್ಟಣದ ಶ್ರೀಬಸವೇಶ್ವರ ವೃತ್ತದಿಂದ ಪ್ರಾರಂಭಗೊಂಡ ಅಭಿಯಾನ ಯಾತ್ರೆ,ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ನಂತರ. ಶ್ರೀಚಂದ್ರಶೇಖರ ಆಜಾದ ವೇದಿಕೆಯಲ್ಲಿನ ಕಾರ್ಯಕ್ರಮದಲ್ಲಿ ಲೀನವಾಯಿತು. ಅಭಿಯಾನದ ಮೆರವಣಿಗೆಯಲ್ಲಿ ನೂರಾರು ಅಂಗನವಾಡಿ ಕಾರ್ಯಕರ್ತರು ಕುಂಬ ಹೊತ್ತು ಸಾಗಿದರು, ದೇಶ ನಾಡು ಕಂಡ ಧೀಮಂತರ ವೇಶಧಾರಿ ವಿದ್ಯಾರ್ಥಿಗಳನ್ನು ಅನೇಕ ಟ್ರ್ಯಾಕ್ಟರ್ ಗಳು,ಹಗಲು ವೇಶಗಾರರ ತಂಡ,ವಿವಿದ ವಾದ್ಯವೃಂಧಗಳನ್ನೊಳಗೊಂಡ ತಂಡ ಮೆರಣಿಗೆಯಲ್ಲಿ ಭಾಗವಹಿಸಿತ್ತು.

ತಹಶಿಲ್ದಾರ್ ಟಿ.ಜಗದೀಶರವರ ನೇತೃತ್ವದಲ್ಲಿ, ಕಂದಾಯ ಇಲಾಖೆಯ ಸಿಬ್ಬಂದಿ ಮತ್ತು ವಿವಿದ ಇಲಾಖಾಧಿಕಾರಿಗಳು ತಮ್ಮ ಸಿಬ್ಬಂದಿಯೊಂದಿಗೆ ಹಾಜರಿದ್ದರು. ಪಟ್ಟಣದ ವಿವಿದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಕಾಲೇಜ್ ಸಿಬ್ಬಂದಿ,ಪಟ್ಟಣ ಪಂಚಾಯ್ತಿ ಅಧಿಕಾರಿ ಹಾಗೂ ಸಿಬ್ಬಂದಿ, ಆರಕ್ಷಕ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿ ನಾಗರೀಕರು ಸಾರ್ವಜನಿಕರು, ವಿವಿದ ಜನಪ್ರತಿನಿಧಿಗಳು, ವಿವಿದ ಸಂಘಟನೆ ಹಾಗೂ ಸಂಸ್ಥೆಗಳ ಪದಾಧಿಕಾರಿಗಳು “ಅಮೃತ ಭಾರತಿಗೆ ಕನ್ನಡದಾರತಿ” ಅಭಿಯಾನದಲ್ಲಿ ಭಾಗವಹಿಸಿದ್ದರು…

ವರದಿ.ಡಿ.ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;