;

ಆಧಾರ ಕಾರ್ಡಗಾಗಿ ವಿದ್ಯಾರ್ಥಿನಿ ಪರದಾಟ…!!!

ಆಧಾರ ಕಾರ್ಡಗಾಗಿ ವಿದ್ಯಾರ್ಥಿನಿ ಪರದಾಟ
ಸಿಂಧನೂರ : ಮೇ.25.ಸೂಕ್ತ ದಾಖಲಾತಿಗಳನ್ನು ನೀಡಿದರು ಸಹ ಆಧಾರ ಕಾರ್ಡ್ ಸಿಗದೇ ವಿದ್ಯಾರ್ಥಿನಿ ಮಸ್ಕಿ ಮತ್ತು ಸಿಂಧನೂರು ತಹಸೀಲ್ದಾರ ಕಚೇರಿ ಹಾಗೂ ಆಧಾರ ಕೇಂದ್ರಗಳಿಗೆ ಅಲೆದಾಡಿದರು ಸಹ ಆಧಾರ ಕಾರ್ಡ್ ಸಿಗುತ್ತಿಲ್ಲ. ಇದರಿಂದ ವಿದ್ಯಾರ್ಥಿನಿಯ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ.
ಮಸ್ಕಿ ತಾಲ್ಲೂಕಿನ ಗೌಡನಬಾವಿ ಗ್ರಾಮದ ವಿದ್ಯಾರ್ಥಿನಿ ಬಸವಲೀಲಾ ನಾಲ್ಕನೆಯ ತರಗತಿ ಓದುತ್ತಿರುವಾಗಲೆ ಆಧಾರ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದ್ದು ಈಗ ಹತ್ತನೇಯ ತರಗತಿ ಪಾಸಾದರು ಸಹ ಇಲ್ಲಿತನಕ ಆಧಾರ ಕಾರ್ಡ್ ಬಂದಿರುವದಿಲ್ಲ ಯಾಕೆ ಆಧಾರ ಕಾರ್ಡ್ ಬರುತ್ತಿಲ್ಲ ಎಂದು ಆಧಾರ ಕಾರ್ಡ್ ನೀಡುವ ಕೇಂದ್ರವರನ್ನು ಕೇಳಿದರೆ ನಿಮ್ಮ ಪಿಂಗರ ಪ್ರಿಂಟ್ ಬರುತ್ತಿಲ್ಲ ಎಂಬ ಕಾರಣ ನೀಡುತ್ತಾರೆ. ಬೆಂಗಳೂರಿನ ಆಧಾರ ಕಾರ್ಡ್ ನೀಡುವ ಕೇಂದ್ರ ಕಚೇರಿಗೆ ದೂರು ನೀಡಿದರು ಯಾವುದೆ ಪ್ರಯೋಜನವಾಗಿಲ್ಲ.ಆಧಾರ ಕಾರ್ಡ್ ಇಲ್ಲದೆ ವಿದ್ಯಾರ್ಥಿನಿ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಸರ್ಕಾರ ಸೇರಿದಂತೆ ಯಾವುದೆ ರೀತಿಯ ಸ್ಕಾಲರ್‌ಶಿಪ್ ಹಾಗೂ ಸರಕಾರಿ ಸೌಲಭ್ಯ ಸಿಗದೆ ವಂಚಿತಳಾಗಿದ್ದೆನೆ ಎಂಬುದುವಿದ್ಯಾರ್ಥಿನಿಯ ಅಳಲಾಗಿದೆ. ಮುಂದೆ ನಾನು ವೈದ್ಯಳಾಗುವ ಕನಸ್ಸು ಹೊಂದಿದ್ದು ನನ್ನ ವಿದ್ಯಾಭ್ಯಾಸ ಹಾಗೂ ಸರ್ಕಾರದ ಸೌಲಭ್ಯಕ್ಕಾಗಿ ಆಧಾರ ಕಾರ್ಡ್ ಅವಶ್ಯಕ ವಾಗಿದೆ ಎಂದು ವಿದ್ಯಾರ್ಥಿನಿ ಬಸವಲೀಲಾ ಹೇಳಿದಳು.
ಇತ್ತೀಚಿಗೆ ಪ್ರಕಟವಾದಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 624 ಅಂಕಗಳನ್ನು ಬಸವಲೀಲಾ ಪಡೆದುಕೊಂಡಿದ್ದು ಈಗ ತನ್ನ ಮುಂದಿನ ವಿಧ್ಯಾಭ್ಯಾಸಕ್ಕಾಗಿ,ಆಧಾರಕಾರ್ಡ್ ಗಾಗಿ ಕಛೇರಿಯನ್ನು ಅಲೆದಾಡಬೇಕಾಗಿದೆ. ತಾಲ್ಲೂಕಿನ ಒಳಬಳ್ಳಾರಿಯ ತಮ್ಮ ಸಂಬಂಧಿಕರ ಮನೆಯಲ್ಲಿ ಇದ್ದು ಅಭ್ಯಾಸ ಮಾಡಿ ಎಸ್.ಎಸ್.ಎಲ್. ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾಳೆ
ಪ್ರತಿಭಾವಂತ ವಿದ್ಯಾರ್ಥಿನಿ ಬಸವಲೀಲಾ ಗೆ ಇನ್ನೂ ಮುಂದೆಯಾದರು ಶಿಕ್ಷಣ ಹಾಗು ಕಂದಾಯ ಇಲಾಖೆಯ ಅಧಿಕಾರಿಗಳು ಆಧಾರ ಕಾರ್ಡ್ ಒದಗಿಸಿ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿಗಳ ಮನೆಗೆ ಆಯಾ ತಾಲ್ಲೂಕಿನ ಅಧಿಕಾರಿಗಳು.ಜನಪ್ರತಿನಿದಿಗಳು ಬೇಟಿ ನೀಡಿ ಶಿಕ್ಷಣ ಕ್ಕೆ ಪ್ರೋತ್ಸಾಹ ನೀಡಿ ವಿದ್ಯಾರ್ಥಿನಿಗೆ ಅಭಿನಂದನೆ ತಿಳಿಸಿದರು…

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;