ಗೊರೇಬಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಭಾರೀ ಮಟ್ಟದ ಅವ್ಯವಹಾರ – ಹುಲುಗಪ್ಪ ಮಲ್ಕಾಪೂರು ಆರೋಪ.
ಸಿಂಧನೂರು : ತಾಲೂಕಿನ ಗೊರೇಬಾಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಭಾರೀ ಮಟ್ಟದ ಅವ್ಯವಹಾರ ನಡೆಯುತ್ತಿದೆ ಎಂದು ಬಹುಜನ ಸಮಾಜ ಪಕ್ಷದ ತಾಲೂಕು ಅಧ್ಯಕ್ಷ ಹುಲುಗಪ್ಪ ಮಲ್ಕಾಪೂರು ಗಂಭೀರ ಆರೋಪ ಮಾಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಹಳೆಯ ಗೋದಾಮಿನ ಕಲ್ಲು,ಕಬ್ಬಿಣ ಮತ್ತುಇನ್ನಿತರ ವಸ್ತುಗಳನ್ನು ಕಾಳ ಸಂತೆಯಲ್ಲಿ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಕೆಲವರು ಸೇರಿಕೊಂಡು ಮಾರಾಟ ಮಾಡಿಕೊಂಡಿದ್ದು, ಈ ವಿಷಯಕ್ಕಾಗಿ ಯಾವುದೇ ಪೂರ್ವಾನುಮತಿ ಇರುವದಿಲ್ಲ,ಆಡಳಿತಾತ್ಮಕ ತೀರ್ಮಾನ ತೆಗೆದುಕೊಂಡಿರುವದಿಲ್ಲ.
ಈ ಸಂಸ್ಥೆಯು ರೈತರು ಮತ್ತು ಸಾರ್ವಜನಿಕರ ಸ್ವತ್ತಾಗಿದ್ದು, ಈ ಸಂಸ್ಥೆಯಲ್ಲಿ 3392 ನ ಸದಸ್ಯರು ಇದ್ದು,ನಿಯಮಗಳನ್ನು ಉಲ್ಲಂಘನೆ ಮಾಡಿ ತೀರ್ಮಾನಗಳನ್ನು ತೆಗೆದುಕೊಂಡು ತಮ್ಮ ಈ ಸಂಸ್ಥೆಯು ಸ್ವಂತ ಆಸ್ತಿ ಎಂದು ಪರಿಗಣಿಸಿಕೊಂಡು ಸರ್ವಾಧಿಕಾರಿ (ರಾಜಪ್ರಭುತ್ವ) ಧೋರಣೆಯನ್ನು ಅನುಸರಿಸುತ್ತಿದ್ದಾರೆ. ಅನಧಿಕೃತವಾಗಿ ಸಂಘದಲ್ಲಿ ಸಿಬ್ಬಂದಿಗಳನ್ನು ನೇಮಿಸಿಕೊಂಡು ರೈತರೊಂದಿಗೆ ಸಾಲಗಾರರೊಂದಿಗೆ ಅಸಭ್ಯವಾಗಿ ವರ್ತಿಸುವದು, ಸರಿಯಾದ ಮಾಹಿತಿ ನೀಡದೆ ಇರುವುದು. ಮತ್ತು ತೆಗೆದುಕೊಂಡ ತಪ್ಪು ನಿರ್ಣಯಗಳಿಂದ ಸಂಘದ ಆಸ್ತಿಗೆ ಹಾನಿ ಉಂಟು ಮಾಡುವುದು ಇವರ ಮುಖ್ಯ
ಕಾಯಕವಾಗಿದೆ.
ಹಳೆ ಗೋದಾಮಿನ ಸ್ಥಳದಲ್ಲಿ ಹೊಸದಾಗಿ 150-00 ಲಕ್ಷ ಮೊತ್ತದಲ್ಲಿ ಹೊಸ ಕಟ್ಟಡಕ್ಕಾಗಿ ಇ.ಟೆಂಡರ ಮೂಲಕ ಗುತ್ತಿಗೆದಾರರನ್ನು ನೇಮಕ ಮಾಡಿದ್ದು, ಇದರಲ್ಲಿ ಬ್ಯಾಂಕ ಅಧಿಕಾರಿಗಳು, ಆಡಳಿತ ಮಂಡಲಿಯವರು, ಮತ್ತು ಗುತ್ತಿಗೆದಾರರು ಹಾಗೂ ಸಿಬ್ಬಂದಿ ಎಲ್ಲಾರೂ ಅಕ್ರಮ ಕೂಟ ಕಟ್ಟಿಕೊಂಡು ಅವ್ಯವಹಾರ ಮಾಡುವದು, ಅಂದರೆ ಕಳಪೆ ಕಾಮಗಾರಿ, ಅಂದಾಜು ಪತ್ರಿಕೆಯಲ್ಲಿ ನಿಗದಿ ಪಡಿಸಿದ ಹಾಗೆ ಸಾಮಗ್ರಿಗಳನ್ನು ಬಳಸದೆ ಇರುವದು, ಒಟ್ಟಾರೆ ಯಾಗಿ ಈ ಸಂಸ್ಥೆ ಒಂದು ಇವರಿಗೆ ಹಣ ಕೊಡುವ ಕಾಮದೇನು ಆಗಿ ಪರಿವರ್ತನೆಗೊಂಡಿದ್ದು, ಈ ಸಂಸ್ಥೆಯ ಸಮಗ್ರ ತನಿಖೆ ಮಾಡುವುದು ಅವಶ್ಯವಾಗಿದೆ. ಯಾಕೆಂದರೆ ಎಲ್ಲಾ ರೀತಿಯ ಖಾತೆಗಳಲ್ಲಿ ಅಂದರೆ ಸಾಲ ಕೊಡುವದರಿಂದ ಹಿಡಿದು ಸಾಲ ಪಡೆಯುವವರೆಗೆ ಸಾಲಗಾರರನ್ನು ಶೋಷಣೆ ಮಾಡುವದು ನಿರಂತರವಾಗಿ ನಡೆಯುತ್ತಿದೆ, ಈ ಎಲ್ಲ ವಿಷಯವನ್ನು ಸಂಬಂಧಪಟ್ಟ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಸಿಂಧನೂರು ಮತ್ತು ನಿರ್ದೇಶಕರು ಆರ್ಡಿಸಿಸಿ ಬ್ಯಾಂಕ್ ರಾಯಚೂರು ವ್ಯವಸ್ಥಾಪಕರು ಆರ್ಡಿಸಿಸಿ ಬ್ಯಾಂಕ್ ಸಿಂಧನೂರು ಇನ್ನು ಹಲವು ಅಧಿಕಾರಿಗಳಿಗೆ ಲಿಖಿತವಾಗಿ ಮನವಿ ಮಾಡಿಕೊಂಡರು ಸಹ ಕ್ರಮ ಕೈಗೊಂಡಿಲ್ಲ
ಈ ಹಿನ್ನೆಲೆಯಲ್ಲಿ ಒತ್ತಾಯಿಸುವದೇನೆಂದರೆ, ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸಮಗ್ರ ತನಿಖೆ ಮಾಡಿ, ಭ್ರಷ್ಟಾಚಾರಕ್ಕೆ ಸಹಕಾರ ನೀಡುತ್ತಿರುವ ಆಡಳಿತ ಮಂಡಳಿಯನ್ನು ರದ್ದು ಪಡಿಸಬೇಕು. ದಿನಾಂಕ 27 -05- 2022ರಂದು ಕಳಪೆ ಮಟ್ಟದ ಕಾಮಗಾರಿಯ msc ಕಟ್ಟಡವನ್ನು ಉದ್ಘಾಟನೆ ಮಾಡುವುದನ್ನು ನಿಲ್ಲಿಸಬೇಕು .ಸಂಪೂರ್ಣ ತನಿಖೆಯಾಗಬೇಕು. ಗುತ್ತಿಗೆದಾರರ ಲೈಸನ್ಸ್ ಅನ್ನೋ ಕಪ್ಪುಪಟ್ಟಿಗೆ ಸೇರಿಸಬೇಕು. ತಪ್ಪಿದರೆ ಬಹುಜನ ಸಮಾಜ ಪಕ್ಷ ಸಿಂಧನೂರು ವಿಧಾನಸಭಾ ಕ್ಷೇತ್ರದ ಪದಾಧಿಕಾರಿಗಳು ಮತ್ತು ಈ ಸಂಸ್ಥೆಯ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ರೈತರೊಂದಿಗೆ ಸಂಬಂಧಪಟ್ಟ ಇಲಾಖೆಯ ಮುಂದೆ ನಿರಂತರ ಹೋರಾಟ ಮಾಡಲಾಗುವದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಎಸ್. ಐ. ಸಾಲುಗುಂದಾ, ನಗರ ಘಟಕ ಉಪಾಧ್ಯಕ್ಷರು ಅಬ್ದುಲ್ ಸಾಭ್, ನಿಸಾರ್ ಅಹ್ಮದ್ ಇದ್ದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
