ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸಿ ಬೃಹತ್ ಪ್ರತಿಭಟನ
ಕೂಡ್ಲಿಗಿ ಪಟ್ಟಣದಲ್ಲಿ ಎಸ್ಸಿ ಎಸ್ಟಿ ಮೀಸಲಾತಿ ಹೋರಾಟ
ಸಮಿತಿ ವತಿಯಿಂದ ಇಂದು ಪಟ್ಟಣದಲ್ಲಿ ಮೀಸಲಾತಿ ಜಾರಿಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ ನೆಡೆಸಿದರು. ರಾಜ್ಯ ಸರ್ಕಾರವು ಪರಿಶಿಷ್ಟ ಪಂಗಡಕ್ಕೆ ಶಿಕ್ಷಣ, ಉದ್ಯೋಗ ಕ್ಷೇತ್ರಗಳಲ್ಲೂ ಶೇ.7.5 ರಷ್ಟು ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ, ತಾಲೂಕ್ ವಾಲ್ಮೀಕಿ ನಾಯಕ ಸಂಘ, ತಾಲೂಕ್ ಡಾಕ್ಟರ್ ಬಿಆರ್ ಅಂಬೇಡ್ಕರ್ ಸಂಘದ ನೇತೃತ್ವದಲ್ಲಿ ಪಟ್ಟಣದ ಮುಖ್ಯ ಬೀದಿಗಳಲ್ಲಿ ಪ್ರತಿಭಟನೆ ಮೂಲಕ ಬೃಹತ್ ಪ್ರತಿಭಟನೆ ನಡೆಸಿದರು. ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನನಂದ ಪುರಿ ಸ್ವಾಮಿಗಳು ಕಳೆದ 100 ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಸುತ್ತಿದ್ದು,ಹೋರಾಟವನ್ನು ಬೆಂಬಲಿಸುವ ನಿಟ್ಟಿನಲ್ಲಿ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಅಯೋಗವನ್ನು ರಚಿಸಿ ವರದಿಯನ್ನು ಪಡೆದುಕೊಂಡಿದ್ದು ವರದಿಯಂತೆ ಮೀಸಲಾತಿಯನ್ನು ನಿಗದಿ ಪಡಿಸಲು ಶೇ 7.5 ರಷ್ಟು ಮೀಸಲಾತಿ ನೀಡಬೇಕೆಂದು ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯಲ್ಲಿ ವಾಲ್ಮೀಕಿ ಮುಖಂಡರಾದ ಜಯರಾಂನಾಯಕ, ಮುಖಂಡ ಕಾವಲ್ಲಿ ಶಿವಪ್ಪ ನಾಯಕ ಬಿ.ಕೆ.ಮಂಜುನಾಥ, ಕಾರ್ಮಿಕ ಮುಖಂಡರಾದ ಹೆಚ್.ವೀರಣ್ಣ,ಗುನ್ನಳ್ಳಿ ರಾಘವೇಂದ್ರ, ಪಪಂ ಸದಸ್ಯ ಸಿರಿಬಿ ಮಂಜುನಾಥ, ಎಂ.ಚಂದ್ರಶೇಖರ, ಬಾಸುನಾಯ್ಕ, ಯುವ ಮುಖಂಡರಾದ ಬಂಗಾರು ಹನುಮಂತು, ಗುರಿಕಾರ ರಾಘವೇಂದ್ರ,ದಲಿತ ಮುಖಂಡರಾದ ಗುಣಸಾಗರ ಕೃಷ್ಣಪ್ಪ, ಡಿ.ಹೆಚ್.ದುರುಗೇಶ, ವಾಲ್ಮೀಕಿ ಹಿರಿಯ ಮಹಿಳಾ ಮುಖಂಡ ರಾದ ಜಿಂಕಾಲ್ ನಾಗಮಣಿ. ವಾಲ್ಮೀಕಿ ಸಮುದಾಯದ ಪದಾಧಿಕಾರಿಗಳು, ವಿವಿದ ದಲಿತ ಸಮುದಾಯದ ಮುಖಂಡರು ಇದ್ದರು…
ವರದಿ.ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
