ಹೊಸಳ್ಳಿ ಇಜೆ ಗ್ರಾಮದಲ್ಲಿ ಬಾಲ್ಯ ವಿವಾಹ ತಡೆದ ಅಧಿಕಾರಿಗಳು…!!!

ಹೊಸಳ್ಳಿ ಇಜೆ ಗ್ರಾಮದಲ್ಲಿ ಬಾಲ್ಯ ವಿವಾಹ ತಡೆದ ಅಧಿಕಾರಿಗಳು.

ಸಿಂಧನೂರು : ತಾಲೂಕಿನ ಹೊಸಳ್ಳಿ ಇಜೆ ಗ್ರಾಮದಲ್ಲಿ ಮದುವೆ ಸಿದ್ಧತೆಯಲ್ಲಿದ್ದ ಬಾಲಕಿಯೊಬ್ಬಳ  ಬಾಲ್ಯ ವಿವಾಹ ನೆರವೇರುವುದಕ್ಕೂ ಎರಡೂ ದಿನಗಳ ಮೊದಲೇ ಗ್ರಾಮಸ್ಥರಿಂದ ಮಹಿಳಾ ಮತ್ತು ಮಕ್ಕಳ ಸಹಾಯವಾಣಿಗೆ ಕರೆ ಮಾಡಿದ ಹಿನ್ನೆಲೆ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಗುಂಜಳ್ಳಿ ಗ್ರಾಮದ ಲಿಂಗರಾಜ ತಂದೆ ಅಮರೇಶಪ್ಪ ವಯಸ್ಸು 26 ಜೊತೆಗೆ ಹೊಸಳ್ಳಿ ಇಜೆ ಗ್ರಾಮದ ಸುಸ್ಮಿತಾ ಬಿಂಗಿ ತಂದೆ ಯಂಕಪ್ಪ ಬಿಂಗಿ ವಯಸ್ಸು 17 ವರ್ಷ 6 ತಿಂಗಳು 26 ದಿನಗಳು ಅನಿಕೇತನ ಕಾಲೇಜಿನಲ್ಲಿ ಪಿಯುಸಿ ಒದುತ್ತಿದ್ದು ಅಪ್ರಾಪ್ತ ಬಾಲಕಿಯೊಂದಿಗೆ ರವಿವಾರ ದಂದು ವಿವಾಹ ನಿಶ್ಚಯವಾಗಿತ್ತು.

ಈ ಬಾಲಕಿ ಪಿಯುಸಿ ಒದುತ್ತಿದ್ದು ಅಪ್ರಾಪ್ತ ವಯಸ್ಸಿನಳಾಗಿರುವುದು ಖಚಿತ ಮಾಹಿತಿ ಪಡೆದ ಸಿಡಿಪಿಓ ಗಳಾದ ಲಿಂಗನಗೌಡ, ಶಾಲೆಯ ಮುಖ್ಯ ಗುರುಗಳಾದ ನಾರಾಯಣ, ಯರಿಯಪ್ಪ, ಸುರೇಶ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಾಗಲಿಂಗಪ್ಪ, ಪೋಲಿಸ್ ಸಿಬ್ಬಂದಿ, ಶಿಶು ಅಭಿವೃದ್ಧಿ ಯೋಜನೆ ಇಲಾಖೆಯ ಮೇಲ್ವಿಚಾರಕಿ ಶಾರದಾ ನಾಯಕ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ನೇತೃತ್ವದಲ್ಲಿ ರವಿವಾರ ಮದುವೆ ತಯಾರಿಯಲ್ಲಿದ್ದ ಪೋಷಕರ ಮನವೊಲಿಸಿ ವಿವಾಹ ತಡೆದು ಅಪ್ರಾಪ್ತ ಬಾಲಕಿಯನ್ನು ಮದುವೆ ಮಾಡುವುದು ಕಾನೂನು ಬಾಹಿರವಾಗುತ್ತದೆ. ಒಂದು ವೇಳೆ ಬಲವಂತವಾಗಿ ಮಾಡಿದರೆ ತಮ್ಮ ಮೇಲೆ ಮತ್ತು ವರನ ತಂದೆ ತಾಯಿ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗುವುದು. ಬಾಲ್ಯ ವಿವಾಹದ ದುಷ್ಪರಿಣಾಮ ಮತ್ತು ಶಿಕ್ಷೆಯ ಅರಿವು ಮೂಡಿಸಿ ಅಲ್ಲದೇ ಬಾಲಕಿಯ ಪಾಲಕರಿಂದ ಬಾಲ್ಯ ವಿವಾಹ ಮಾಡುವುದಿಲ್ಲ ಎಂದು ಮುಚ್ಚಳಿಕೆ ಪತ್ರ ಬರೆಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಹುಡುಗಿಯ ಸಂಭಂದಿಕರು ನೋವಿನಿಂದ ಮದುವೆ ಮಾಡುವುದಿಲ್ಲ ಭರವಸೆ ನೀಡಿದರು…

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend