ಕಾರುಣ್ಯಾಶ್ರಮಕ್ಕೆ ಗುಪ್ತ ದಾನಿಯಿಂದ ಅನ್ನದಾನಕ್ಕೆ ಅಕ್ಕಿ ವಿತರಣೆ – ಚನ್ನಬಸಯ್ಯಸ್ವಾಮಿ ಹಿರೇಮಠ…!!!

ಕಾರುಣ್ಯಾಶ್ರಮಕ್ಕೆ ಗುಪ್ತ ದಾನಿಯಿಂದ ಅನ್ನದಾನಕ್ಕೆ ಅಕ್ಕಿ ವಿತರಣೆ – ಚನ್ನಬಸಯ್ಯಸ್ವಾಮಿ ಹಿರೇಮಠ.

ಸಿಂಧನೂರು : ನಗರದ ಕುಷ್ಟಗಿ ರಸ್ತೆಯಲ್ಲಿರುವ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮಕ್ಕೆ ಗುಪ್ತ ದಾನಿಯೊಬ್ಬರು” ಕಾರುಣ್ಯ ದಾಸೋಹ ಕಾರ್ಯಕ್ರಮ”ದ ಅಡಿಯಲ್ಲಿ ಅಕ್ಕಿಯನ್ನು ವಿತರಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಈ ಸಮಯದಲ್ಲಿ ಮಾತನಾಡಿದ ಆಶ್ರಮದ ಆಡಳಿತಾಧಿಕಾರಿಗಳಾದ ಚನ್ನಬಸಯ್ಯ ಸ್ವಾಮಿ ಹಿರೇಮಠ ಸಿಂಧನೂರು ನಗರದ ಎ.ಪಿ.ಎಂ.ಸಿ. ಯಾರ್ಡ್ ನಲ್ಲಿರುವ ಅಂಗಡಿಯ ಮಾಲೀಕರಾದ ಒಬ್ಬ ಗುಪ್ತ ದಾನಿಯೂ ಅಕ್ಕಿಯನ್ನು ವಿತರಿಸಿದ್ದಾರೆ ಅವರು ಯಾವುದೇ ಕಾರಣಕ್ಕೂ ನಾವು ಮಾಡುತ್ತಿರುವ ಈ ಸಹಾಯವನ್ನು ಸಮಾಜಕ್ಕೆ ತಿಳಿಸಬಾರದು ಎನ್ನುವ ಅಪೇಕ್ಷೆಯ ಮೇರೆಗೆ ಅವರ ಹೆಸರನ್ನು ಪ್ರಸ್ತಾಪ ಮಾಡುವುದಿಲ್ಲ ಈ ಸಹಾಯ ಮಾಡಿದ ದಾನಿಗಳಿಗೆ ಕಾರುಣ್ಯ ಆಶ್ರಮದಲ್ಲಿ ಆಶ್ರಯ ಪಡೆದಿರುವಂತಹ ಅನಾಥ ಹಿರಿಯ ಜೀವಿಗಳು ಹಾಗೂ ವಯಸ್ಕರ ಬುದ್ಧಿಮಾಂಧ್ಯ ಜೀವಿಗಳು ಅವರ ಕುಟುಂಬಕ್ಕೆ ಸಕಲ ದೇವಾನುದೇವತೆಗಳು ಉತ್ತಮ ಆಯಸ್ಸು ಆಯುರಾರೋಗ್ಯ ಸುಖ ಶಾಂತಿ ನೆಮ್ಮದಿಯನ್ನು ಕರುಣಿಸಲಿ ಎಂದುಬೇಡಿಕೊಂಡು ಅವರಿಗೆ ಆಶೀರ್ವದಿಸಿದರು.ಮತ್ತು ನಾವು ನಮ್ಮ ಟ್ರಸ್ಟ್ ನ ಪದಾಧಿಕಾರಿಗಳು ಈ ಗುಪ್ತ ದಾನಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ ಇಂತಹ ಅನೇಕ ದಾನಿಗಳು ಇಂತಹ ಸೇವೆ ಮಾಡುತ್ತಿರುವ ಸಂಘ- ಸಂಸ್ಥೆಗಳಿಗೆ ಸಹಾಯ ಮಾಡುತ್ತಿರುವುದರಿಂದ ಮಾತ್ರ ಇಂತಹ ಸೇವೆಗಳು ಮಾಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಕಾರುಣ್ಯ ಕುಟುಂಬದ ಆಶ್ರಯದಾತರು ಹಾಗೂ ಸಿಬ್ಬಂದಿಗಳಾದ ಸುಜಾತ ಚನ್ನಬಸಯ್ಯ ಸ್ವಾಮಿ ಹಿರೇಮಠ. ರೇಖಾ ಸುಕಾಲಪೇಟೆ. ಕರಿಯಪ್ಪ ನಾಗೇಶ ಸ್ವಾಮಿ ಸಂಗನಗೌಡ ಗೋನವಾರ ಇತರರು ಉಪಸ್ಥಿತರಿದ್ದರು..

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend