ವಿಜಯನಗರ ಜಿಲ್ಲೆ, ಕೂಡ್ಲಿಗಿ ತಾಲೂಕು.
.74 ಕೆರೆಗಳಿಗೆ ನೀರು ತುಂಬಿಸುವ ಜಾಕ್ ವಲ್ ಕಾಮಗಾರಿಗೆ ಶಾಸಕ ಎನ್ ವೈ ಗೋಪಾಲಕೃಷ್ಣ ರವರಿಂದ ಭೂಮಿಪೂಜೆ.
ಬಹುದಿನಗಳ ಬೇಡಿಕೆ ಹಾಗೂ ಕ್ಷೇತ್ರದ ಮಹತ್ವಾಕಾಂಕ್ಷಿ ಯೋಜನೆ
ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ಸಮಗ್ರ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಹೂವಿನಹಡಗಲಿ ತಾಲ್ಲೂಕು ರಾಜವಾಳ ಸಮೀಪ “ಜಾಕ್ ವಲ್ ” ಕಾಮಗಾರಿಗೆ ಕೂಡ್ಲಿಗಿ ಶಾಸಕರಾದ ಶ್ರೀ ಎನ್ವೈ ಗೋಪಾಲಕೃಷ್ಣ ರವರಿಂದ ಭೂಮಿಪೂಜೆ ನೆರವೇರಿತು.
ಈ ಕಾರ್ಯಕ್ರಮದಲ್ಲಿ ಹೂವಿನಹಡಗಲಿ ಕ್ಷೇತ್ರದ ಶಾಸಕರಾದ ಪಿಟಿ ಪರಮೇಶ್ವರ ನಾಯ್ಕ್ ಭಾಗವಹಿಸಿದ್ದರು. ಪಿಟಿ ಪರಮೇಶ್ವರ ನಾಯ್ಕ್ ರವರು ಮಾತನಾಡಿ ಕೂಡ್ಲಿಗಿ ತಾಲೂಕು ಅತ್ಯಂತ ಬಡತನ ಹೊಂದಿರುವ ತಾಲೂಕು, ಬರದ ನಾಡು ಕೂಡ್ಲಿಗಿ ಈ ಜನರಿಗಾಗಿ ರೈತರಿಗಾಗಿ ನೀವು ಮಾಡುತ್ತಿರುವ ಕೆಲಸವನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ, ಪಕ್ಷಾತೀತವಾಗಿ ನಿಮ್ಮ ಜನಪರ ಕಾಳಜಿಯನ್ನು ಪ್ರಶಂಸಿಸಲೇಬೇಕು. ಅಂತಹ ಮಹಾನ್ ಕಾರ್ಯವನ್ನು ನೀವು ಮಾಡಿದ್ದೀರಿ ಎಂದು, ಭೂಮಿ ಪೂಜೆಗೆ ಆಗಮಿಸಿದ್ದ ಕಾರ್ಯಕರ್ತರ ಸಮ್ಮುಖದಲ್ಲಿ ಮಾನ್ಯ ಶ್ರೀ ಎನ್ವೈ ಗೋಪಾಲಕೃಷ್ಣ ರವರ 74 ಕೆರೆಗಳ ನೀರು ತುಂಬಿಸುವ ಯೋಜನೆಯ ಕುರಿತು ಅವರ ಪಟ್ಟ ಶ್ರಮದ ಬಗ್ಗೆ ಜನಪರ ಕಾಳಜಿಯ ಬಗ್ಗೆ ಪರಮೇಶ್ವರ್ ನಾಯ್ಕ್ ರವರು ಅಭಿನಂದನೆ ಸಲ್ಲಿಸಿದರು.
ನಂತರ ಕೂಡ್ಲಿಗಿ ಶಾಸಕ ಎನ್ ವೈ ಗೋಪಾಲಕೃಷ್ಣ ರವರು ಮಾತನಾಡಿ ಪಿಟಿ ಪರಮೇಶ್ವರ ನಾಯ್ಕ್ ರವರು ಹೂವಿನಹಡಗಲಿ ತಾಲೂಕಿನಿಂದ ಕೂಡ್ಲಿಗಿ ತಾಲೂಕಿಗೆ ನೀರು ಹರಿಸುವ ಯೋಜನೆಗೆ ನಿರಂತರ ಸಹಕಾರ ಇದೆ ಎಂದು ಹೇಳಿದರು. ಅತಿ ಶೀಘ್ರದಲ್ಲಿ ಯೋಜನೆಯನ್ನು ಮುಕ್ತಾಯ ಗೊಳಿಸಬೇಕಾಗಿದೆ ರೈತರು ಹಾಗೂ ಸಾರ್ವಜನಿಕರು ಈ ಕಾಮಗಾರಿಗೆ ಸಹಕರಿಸಬೇಕಾಗಿ ವಿನಂತಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ, ಗುಂಡುಮುಣುಗು ತಿಪ್ಪೇಸ್ವಾಮಿ. ಹುರುಳಿಹಾಳು ರೇವಣ್ಣ, ಕೆ ಹೆಚ್ ವೀರನಗೌಡ, ಗುಂಡುಮುಣುಗು ಪ್ರಕಾಶ್, ಕೆಎಂ ತಿಪ್ಪೇಸ್ವಾಮಿ, ಚಂದ್ರಮೌಳಿ, ಅಂಜಿನಪ್ಪ, ಕೇಟಿ ರವಿಕುಮಾರ ನಾಗರಾಜ್, ರಾಮದುರ್ಗ ಪಾಪಣ್ಣ. ಹೂಡೆಮ್ ಪಾಪನಾಯಕ. ಕೂಡ್ಲಿಗಿ ಎಸ್ ದುರುಗೇಶ. ನಾಗರಕಟ್ಟೆ ಕೊಟ್ರೇಶ್, ನರಸಿಂಹನಗಿರಿ ಮಂಜುನಾಥ್, ರಾಜು ಕುಮಾರನಾಯ್ಕ್. ಎಲ್ ಪವಿತ್ರ, ಬಿಜೆಪಿ ಮುಖಂಡರು ಕಾರ್ಯಕರ್ತರು ಜನಪ್ರತಿನಿಧಿಗಳು. ಪತ್ರಕರ್ತ ಮಿತ್ರರು ಸೇರಿದಂತೆ. ಈ ಕಾಮಗಾರಿಯ ಗುತ್ತಿಗೆದಾರರು. ಸಾರ್ವಜನಿಕರು ಉಪಸ್ಥಿತರಿದ್ದರು..
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
