ಎ ಸಿ ಬಿ ಬಲೆಗೆ ಬಿದ್ದ ಭ್ರಷ್ಟ ಅಬಕಾರಿ ತಿಮಿಂಗಲ…!!!

ಎಸಿಬಿ ಬಲೆಗೆ ಬಿದ್ದ ಅಬಕಾರಿ ತಿಮಿಂಗಲು.

ಕೊಪ್ಪಳ ಜಿಲ್ಲೆಯ ಅಬಕಾರಿ ಉಪ ಆಯುಕ್ತೆ ಸಿ.ಸೆಲಿನಾ ಅವರು ಕುಷ್ಟಗಿ ಪಟ್ಟಣದಲ್ಲಿ ಲಂಚಕ್ಕೆ ಕೈವೊಡ್ಡಿ ಎಸಿಬಿ ಗಾಳಕ್ಕೆ  ಸಿಕ್ಕಿಬಿದ್ದಿದ್ದಾರೆ.ಕುಷ್ಟಗಿ ಪಟ್ಟಣದಲ್ಲಿ ಸಿಎಲ್ 7 ಬಾರ್&ರೆಸ್ಟೊರೆಂಟ್ ನ ಸನ್ನದು ಪಡೆಯುವುದರಸಲುವಾಗಿ ಶೈಲಜಾ ಪ್ರಭಾಕರ್ ಎನ್ನುವವರು ಅಬಕಾರಿ ಇಲಾಖೆಗೆ ಅರ್ಜಿಯನ್ನು ಹಾಕಿದ್ದರು .ಈ ಅರ್ಜಿಯನ್ನು ಪರಿಶೀಲಿಸಿ ನಂತರ ಇದರ ಪರವಾನಗಿ ನೀಡುವುದರ ಸಲುವಾಗಿ  ಹತ್ತು ಲಕ್ಷಕ್ಕೆ ಬೇಡಿಕೆ ಇಟ್ಟು 3ಲಕ್ಷಕ್ಕೆ ಬಗೆಹರಿಸಿಕೊಂಡು 1ಲಕ್ಷ₹ಲಂಚವನ್ನು ಮುಂಚಿತವಾಗಿ  ಪಡೆದುಕೊಳ್ಳುತ್ತಿರುವಾಗ ಎಸಿಬಿ ಗಾಳಕ್ಕೆ ಬಿದ್ದಿದ್ದಾರೆ .ಎಸಿಬಿ ಡಿಎಸ್ಪಿ ಆದಂತಹ ಶಿವಕುಮಾರ್ ರವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿರುತ್ತದೆ.ಈ ಲಂಚದ ಹಣದ ಜೊತೆಗೆ ಲಂಚಕ್ಕೆ ಸಹಕಾರ ನೀಡಿದ ಖಾಸಗಿ ಬಾರ್ ರೆಸ್ಟೋರೆಂಟ್ ನ ಸಿಬ್ಬಂದಿ ಹೊನ್ನೂರ್ ಭಾಷಾ ರವರನ್ನು ಎಸಿಬಿ ತನ್ನ ವಶಕ್ಕೆ ಪಡೆದುಕೊಂಡು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ .ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿ  ಎಸ್ಪಿ ಆದಂತಹ ನ್ಯಾಮಗೌಡರು ,ಡಿಎಸ್ ಪಿ ಶಿವಕುಮಾರ್ ,ರವರ ತಂಡ ಯಶಸ್ವಿಯಾಗಿ ಅಬಕಾರಿ ಇಲಾಖೆಯ ತಿಮಿಂಗಿಲವನ್ನು ಬಲೆಗೆ ಪಡೆದುಕೊಂಡಿದೆ…

ವರದಿ.ಮಂಜುನಾಥ್ ದೊಡ್ಡಮನಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend