ನ್ಯೂ ಬೃಂದಾವನ ಪಾನ್ ಶಾಪ್ ನಲ್ಲಿ ಅಂಬೇಡ್ಕರ್ ಗೆ ಅವಮಾನ, ದಲಿತ ಮುಖಂಡರು ಆಕ್ರೋಶ…!!!

ನ್ಯೂ ಬೃಂದಾವನ ಪಾನ್ ಶಾಪ್ ನಲ್ಲಿ ಅಂಬೇಡ್ಕರ್ ಗೆ ಅವಮಾನ, ದಲಿತ ಮುಖಂಡರು ಆಕ್ರೋಶ.

ಸಿಂಧನೂರು : ಮೇ.11.ಇಂದು ನಗರದ ಬಸ್ ನಿಲ್ದಾಣದ ನ್ಯೂ ಬ್ರಂದಾವನ ಹೋಟೆಲ್ ಮುಂಭಾಗದ ಪಾನ್ ಬೀಡಾ ಶಾಪ್ ನಲ್ಲಿ ಅಂಬೇಡ್ಕರ್ ಭಾವಚಿತ್ರಯಿರುವ ಕರಪತ್ರದಲ್ಲಿ ಪಾನ ಕಟ್ಟುತ್ತಿರುವುದು ಗಮನಿಸಿದ ದಲಿತ ಮುಖಂಡ ಗುರುರಾಜ್ ಮುಕ್ಕುಂದಾ ಆಕ್ರೋಶ ವ್ಯಕ್ತಪಡಿಸಿದರು.

ಮೇ 8 ರಂದು ದಲಿತ, ಹಿಂದುಳಿದ,ಅಲ್ಪಸಂಖ್ಯಾತ ಪ್ರಗತಿಪರ ಒಕ್ಕೂಟ ಸಿಂಧನೂರು ನಲ್ಲಿ ನಡೆದ ಭಾವೈಕ್ಯತಾ ಸಮಾವೇಶ ಸಮಾರಂಭ ಕರಪತ್ರದಲ್ಲಿ ಪಾನ್ ಬೀಡಾ ಹಾಕುತ್ತಿರುವದನ್ನು ಗಮನಿಸಿದ ಸಂಘಟನೆಯ ಮುಖಂಡರಾದ ಗುರುರಾಜ ಮುಕ್ಕುಂದಾ ಈ ಕರಪತ್ರವನ್ನು ತಂದು ಕೊಟ್ಟವರು ಯಾರು, ಯಾಕೆ ಇದರಲ್ಲಿ ಕಟ್ಟುತ್ತಿಯಾ ಎಂದು ಕೇಳಿದಾಗ ನಾನೇನು ಮಾಡಲಿ ದುಡ್ಡು ಕೊಟ್ಟಿದ್ದಿವಿ ತಂದು ಕೊಟ್ಟಿದ್ದಾರೆ ಹಾಗಾಗಿ ನಾನು ಕಟ್ಟುತ್ತಿದ್ದೇನೆ ಎಂದು ದುರಹಂಕಾರದ ಮಾತುಗಳನ್ನು ಹಾಡಿದಾಗ ದಲಿತ ಮುಖಂಡರು ಅವನನ್ನು ಅಂಗಡಿಯಿಂದ ಹೊರಗೆ ಎಳೆದು ತಳ್ಳಾಟ, ನೂಕಾಟ, ಮಾಡಿದಾಗ ಪಾನ್ ಶಾಪ್ ಮುಚ್ಚಿ ಹೊರಗಡೆ ಹೋದನು.

ಪತ್ರಿಕೆ ಜೊತೆ ಮಾತನಾಡಿದ ದಲಿತ ಮುಖಂಡ ಗುರುರಾಜ್ ಮುಕ್ಕುಂದಾ ಅವರು, ಬುದ್ದ, ಬಸವ, ಅಂಬೇಡ್ಕರ್, ರವರಿಗೆ ಅವಮಾನ ಮಾಡಿದ್ದಲ್ಲದೆ, ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಪ್ರಗತಿಪರ ಒಕ್ಕೂಟದ ಮುಖಂಡರಿಗೆ, ಮತ್ತು ಹಿಂದೂ ಮುಸ್ಲಿಂ ಸಮುದಾಯಕ್ಕೆ ಅವಮಾನ ಮಾಡಿದ್ದಾನೆ,ಇಂತಹ ವ್ಯಕ್ತಿಗಳಿಗೆ ಅಟ್ರಾಸಿಟಿ ಆ್ಯಕ್ಟ್ ನಲ್ಲಿ ಪ್ರಕರಣ ದಾಖಲಿಸಿ,ಅವನನ್ನು ಬಂದಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸುದ್ದಿ ತಿಳಿಯುತ್ತಿದ್ದಂತೆ ಅನೇಕ ದಲಿತ ಮುಖಂಡರಾದ ಎಚ್. ಎನ್. ಬಡಿಗೇರ, ಡಿ. ಎಚ್. ಕಂಬಳಿ, ಹನುಮಂತ ಗೋಮರ್ಸಿ, ವಿರುಪಣ್ಣ ಬೂದಿಹಾಳ, ಹಂಸರಾಜ ಭೋವಿ ಮಾಡಶಿರವಾರ, ವಿರೇಶ ಹೊಸಳ್ಳಿ, ಬಸವರಾಜ ವಿಠಲಾಪೂರು, ಇನ್ನೂ ಅನೇಕ ಮುಖಂಡರು ಹೋಟೆಲ್ ನಲ್ಲಿ ಬೃಂದಾವನ ಹೋಟೆಲ್ ಮಾಲೀಕ, ಪಾನ್ ಶಾಪ್ ಮಾಲೀಕನ ಜೊತೆ ಚರ್ಚೆ ನಡೆಸಿದರು.
ದಲಿತ ಮುಖಂಡರು ಪ್ರಕರಣ ದಾಖಲಿಸುತ್ತಾರೋ ಅಥವಾ ಆ ಪಾನ ಶಾಪ್ ಮಾಲೀಕನಿಗೆ ಬುದ್ದಿ ಹೇಳಿ ಕೈ ಬಿಡುತ್ತಾರೆ ಕಾದು ನೋಡಬೇಕಾಗಿದೆ….

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend