;

ಮೂರ್ತಿ ಪ್ರತಿಷ್ಠಾಪನೆ ಹಾಗೂ ನೂತನ ದೇವಾಲಯ ಲೋಕಾರ್ಪಣೆ ಮಹೋತ್ಸವ…!!!

ಮೂರ್ತಿ ಪ್ರತಿಷ್ಠಾಪನೆ ಹಾಗೂ ನೂತನ ದೇವಾಲಯ ಲೋಕಾರ್ಪಣೆ ಮಹೋತ್ಸವ.

ಸಿಂಧನೂರು: ತಾಲೂಕಿನ ಬೊಮ್ಮನಾಳ ಇ.ಜೆ ಗ್ರಾಮದಲ್ಲಿ ಈಶ್ವರ, ಗಣಪತಿ, ನಂದಿ, ಆಂಜನೇಯ, ವೆಂಕಟೇಶ್ವರ, ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ದೇವರುಗಳ ಮೂರ್ತಿ ಪ್ರತಿಷ್ಠಾಪನೆ ಹಾಗೂನೂತನ ದೇವಾಲಯ ಲೋಕಾರ್ಪಣೆ ಮಹೋತ್ಸವ ಹಾಗೂ ಮದ್ಗಿರಿರಾಜ್ ಸೂರ್ಯ ಸಿಂಹಾಸನಾಧೀಶ್ವರ ಶ್ರೀ 1008 ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ದೇವಾಲಯ ಉದ್ಘಾಟನೆಯಾಗಲಿದೆ ಎಂದು ಸೋಮನಾಥ ಶಿವಚಾರ್ಯರು ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಮೇ 6 ಶುಕ್ರವಾರ ಉದಯ 5 ಘಂಟೆಗೆ ಗೋಪೂಜೆ, ದೇವಾಲಯ ಪ್ರವೇಶ, ಬೆಳಿಗ್ಗೆ 8 ಗಂಟೆಗೆ ಗಂಗಾ ಪೂಜೆಯೊಂದಿಗೆ ಸುಮಂಗಲಿಯರಿಂದ ಕುಂಭ, ಕಳಸದೊಂದಿಗೆ ಭಾಜ ಭಜಂತ್ರಿ ವೀರಗಾಸೆಯೊಂದಿಗೆ ಶ್ರೀ ಶೈಲ ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಮಹೋತ್ಸವ ಮತ್ತು ನೂತನ ಶಿಲಾಮೂರ್ತಿಗಳು ಗೋಪುರ ಕಳಸಗಳ ಮೆರವಣಿಗೆ ಯೊಂದಿಗೆ ಪುರ ಪ್ರವೇಶ ಹಾಗೂ ದೇವಾಲಯ ಉದ್ಘಾಟನೆ ಧರ್ಮಸಭೆ ಜರುಗುವವು.10:30 ಕ್ಕೆ “ಸದ್ಬಾವನಾ ಜನ ಜಾಗ್ರತೆ ಸಮಾವೇಶ”ದಲ್ಲಿ ದಿವ್ಯಾ ಸಾನಿಧ್ಯ 1008 ಶ್ರೀ ಶೈಲ್ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಭಗವತ್ಪಾದರ, ಮೇ 7 ಶನಿವಾರ ರಂದು ನೂತನ ಶಿಲಾ ವಿಗ್ರಹಗಳಿಗೆ ಕ್ಷೀರಾಧಿವಾಸ, ಸಂಜೆ ರಕ್ಷೋಜ್ಞ ಹೋಮ ಕಳಸ ಸ್ಥಾಪನೆ, ದಿವ್ಯಾ ಸಾನಿಧ್ಯ : ಮಹಾಲಿಂಗ ಮಹಾಸ್ವಾಮಿಗಳು ಯದ್ದಲದೊಡ್ಡಿ, ಮೇ 8 ರವಿವಾರ ದಂದು ನೂತನ ಶಿಲಾ ಮೂರ್ತಿಗಳಿಗೆ ಧಾನ್ಯ ದಿವಸ ಯೋಗ ಶಾಲಾ ಮಂಟಪ ಪೂಜೆ ಪಾವನ ದಿವ್ಯಾ ಸಾನಿಧ್ಯ : ಮರಿ ಬಸವರಾಜ ದೇಶಿಕೇಂದ್ರ ಮಹಾಸ್ವಾಮಿಗಳು ಉಟಕನೂರು, ಮೇ 9 ಸೋಮವಾರ ದಂದು ನೂತನ ಶಿಲಾ ಮೂರ್ತಿಗಳಿಗೆ ಪತ್ರಿ ಪುಷ್ಪ ದಿವಾಸ ಹಾಗೂ ಸಕಲ ಪರಿವಾರ ದೇವತೆಗಳ ಪೂಜಾ ಮತ್ತು ಗಣಪತಿ ಹೋಮ, ರುದ್ರ ಹೋಮ, ವಾಸ್ತು ಶಾಂತಿ ಹೋಮ, ಸಂಜೆ 6:30ಕ್ಕೆ ಅಧ್ಯಾತ್ಮಿಕ ಪ್ರವಚನ ದಿವ್ಯಾ ಸಾನಿಧ್ಯ : ಮಹಾಂತ ಮಹಾಸ್ವಾಮಿಗಳು ಹಾಲ್ವಿ, ಮೇ10 ಮಂಗಳವಾರ ಶಿಲಾ ಮೂರ್ತಿಗಳಿಗೆ ತೈಲಾದಿವಾಸ ಮತ್ತು ಶ್ರೀಲಕ್ಷ್ಮೀನಾರಾಯಣ ನವಗ್ರಹ, ಅಷ್ಟದಿಕ್ ಪಾಲಕ ಪೂಜೆ ಹಾಗೂ ಹೋಮ ಸಂಜೆ ನೂತನ ವಿಗ್ರಹಗಳಿಗೆ ಪ್ರತಿಮಾ ಶೋಧನ ಅಷ್ಟ ತ್ರಿಶತ್ ಕಲಾನ್ಯಾಸ ನಂತರ ಪೀಠ ಸಂಸ್ಕಾರ ಪೂಜಾ ಕಾರ್ಯಕ್ರಮ ದಿವ್ಯ ಸಾನಿಧ್ಯ : ಷಡಕ್ಷರಿ ಶಿವಯೋಗಿ ಮುರುಘ ರಾಜೇಂದ್ರ ಮಹಾಸ್ವಾಮಿಗಳು ಸಿದ್ದರಾಮೇಶ್ವರ ಮಠ ಯರಡೋಣಿ, ಮೇ 11 ಬುಧವಾರ ನೂತನ ವಿಗ್ರಹಗಳಿಗೆ ಮಹಾ ರುದ್ರಾಭಿಷೇಕ ಪ್ರಾಣ ಪ್ರತಿಷ್ಠಾಪನ ಕಳಸಾರೋಹಣ ಪೂರ್ಣಾಹುತಿ ದಿವ್ಯ ಸಾನಿಧ್ಯ : ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಗವಿಮಠ ಕೊಪ್ಪಳ ವಹಿಸುವವರು ಎಂದು ಕಾರ್ಯಕ್ರಮದ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ತಿಳಿಸಿದರು. ಮತ್ತು ಈ ಆರು ದಿನಗಳಲ್ಲಿ ಹಾಸ್ಯ ಸಂಜೆ ಕಾರ್ಯಕ್ರಮ, ಶಾಲಾ ಮಕ್ಕಳಿಂದ ಸಂಗೀತ ಕಾರ್ಯಕ್ರಮ,ಇನ್ನೂ ಅನೇಕ ಕಾರ್ಯಕ್ರಮಗಳು ಜರುಗುವವು, ರಾಯಚೂರಿನ ಸಮಸ್ತ ಸ್ವಾಮಿಗಳು , ರಾಜಕಾರಣಿಗಳು, ಜನಪ್ರತಿನಿಧಿಗಳು ಭಾಗವಹಿಸುವರು. ಸಮಸ್ತ ನಾಡಿನ ಭಕ್ತಾದಿಗಳು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದರು. ಸ್ಥಳೀಯ ಗ್ರಾಮಸ್ಥರು ದೇವಸ್ಥಾನಕ್ಕೆ ಸುತ್ತಲೂ ಸ್ಥಳಾವಕಾಶ ಮಾಡಿಕೊಟ್ಟಿದ್ದಾರೆ ವಿಶಾಲ ದೇವಾಲಯ ನಿರ್ಮಾಣಕ್ಕೆ ಸಹಕರಿಸಿದ್ದಾರೆಂದು ತಿಳಿಸಿದರು.

ಈ ಸಂದರ್ಭದಲ್ಲಿ ದೇವರಡ್ಡೆಪ್ಪ ನಗನೂರು ಅಮರೇಗೌಡ, ಶರಣಪ್ಪ ಗೌಡಬಾವಿ , ಪಂಪನಗೌಡ ಪೋ.ಪಾ, ಈರನಗೌಡ ಗುಂಡಪ್ಪ ಗೌಡ, ಆನಂದ ಗೌಡ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;