ದೇವಿಕ್ಯಾಂಪಿನಲ್ಲಿ ಅದ್ದೂರಿಯಾಗಿ ನಡೆದ ಜಾತ್ರಾ ಮಹೋತ್ಸವ.
ಸಿಂಧನೂರು:ಮಾ.03.
ತಾಲೂಕಿನ ದೇವಿಕ್ಯಾಂಪ್ (ದೇವರಗುಡಿ) ಯಲ್ಲಿ ಜರುಗುವ ಶ್ರೀ ಸದ್ಗುರು ನಿರುಪಾದಿ ಬಸವೇಶ್ವರ ಜಾತ್ರಾ ಮಹೋತ್ಸವ ವಿಜ್ರಂಭಣೆಯಿಂದ ಜರುಗಿತು.
ಮಂಗಳವಾರ ಬೆಳಿಗ್ಗೆ ಜಾತ್ರೆಯ ನಿಮಿತ್ತ ದೇವರಿಗೆ ಅಭಿಷೇಕ ವಿಶೇಷ ಪೂಜೆ
ಇನ್ನಿತರ ದಾರ್ಮಿಕ ಕಾರ್ಯಕ್ರಮಗಳು ನಡೆದವು ,ಊರಿನ ಭಕ್ತರು ದೇವರಿಗೆ ದಿಡ್ ನಮಸ್ಕಾರ ಹಾಕಿ ತಮ್ಮ ಹರಕೆಯನ್ನು ದೇವರಿಗೆ ಸಲ್ಲಿಸಿದರು. ನಂತರ ಶ್ರೀ ಸದ್ಗುರು ನಿರುಪಾದಿ ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ 6 ಸಾಮೂಹಿಕ ವಿವಾಹ ಜೋಡಿಗಳ ಮದುವೆಯ ನಡೆಯಿತು.
ಸಾಯಂಕಾಲ 5 ಗಂಟೆಗೆ ಉಚ್ಚಾಯ ರಥೋತ್ಸವ ಕಾರ್ಯಕ್ರಮಕ್ಕೆ ಶ್ರೀಬಸವರಾಜ ತಾತ ಅಂಕಲಿ ಮಠ ರವರಿಂದ ಉಚ್ಚಾಯ ರಥೋತ್ಸವಕ್ಕೆ ಚಾಲನೆ ನೀಡಿದರು. ದೊಳ್ಳು, ಭಾಜ ಭಾಜತ್ರಿ ಹಾಗೂ ಕುಂಭ ಮೇಳಗಳೊಂದಿಗೆ ಉಚ್ಚಾಯ ರಥೋತ್ಸವ ಅದ್ದೂರಿಯಾಗಿ ಜರುಗಿತು.
ಶ್ರೀ ನಿರುಪಾದಿ ಬಸವೇಶ್ವರ ದೇವಸ್ಥಾನ ಟ್ರಸ್ಟ್ ಹಾಗೂ ಸರ್ವ ಸದ್ಭಕ್ತ ಮಂಡಳಿ, ದೇವಿಕ್ಯಾಂಪಿನ ಗ್ರಾಮಸ್ಥರು ಮತ್ತು ಗೀತಾಕ್ಯಾಂಪ್ , ಕುರುಕುಂದಾ, ಬೊಮ್ಮನಾಳ ಚಿರತನಾಳ ಹಾಗೂ ಸುತ್ತ ಮುತ್ತಲಿನ ಗ್ರಾಮಗಳ ಭಕ್ತರು ಆಗಮಿಸಿ ತನು ಮನ ಧನಗಳಿಂದ ಸೇವೆ ಸಲ್ಲಿಸಿ ಶ್ರೀಶ್ರೀ ಬ್ರಹಶ್ರೀ ವೀರಭದ್ರ ಮಹಾಸ್ವಾಮಿಗಳ ದರ್ಶನಾಶೀರ್ವಾದ ಪಡೆದು ತಾತನವರ ಕೃಪೆಗೆ ಪಾತ್ರರಾದರು.ಬಂದಂತಹ ಭಕ್ತಾದಿಗಳು ಮಹಾ ಪ್ರಸಾದ ಸವಿದರು.
ಇದೇ ಸಂದರ್ಭದಲ್ಲಿ ಊರಿನ ಮುಖಂಡರಾದ ಅಮರಪ್ಪ ಯರಡೋಣಿ,ದುಗ್ಗೇಶ ಶಿಕ್ಷಕರು,ಲಕ್ಕಪತಿ,
ಪಕೀರಪ್ಪ ನಾಯಕ, ಅಮರೇಗೌಡ ಹೋಸಪೇಟೆ, ಬಸವರಾಜ ಮೊಲಶೆಟ್ಟಿ, ಸೇರಿದಂತೆ ಗ್ರಾಮಸ್ಥರು ಹಾಗೂ ಪೋಲಿಸ್ ಸಿಬ್ಬಂದಿಗಳು ಇದ್ದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
