;

ರಂಜಾನ್, ಬಸವ ಜಯಂತಿ ಆಚರಣೆ: ನಗರದಲ್ಲಿ ಸಾಮರಸ್ಯ ಸಾರಿದ ಹಿಂದೂ ಮುಸ್ಲಿಂ ಜನರು…!!!

ರಂಜಾನ್, ಬಸವ ಜಯಂತಿ ಆಚರಣೆ: ನಗರದಲ್ಲಿ ಸಾಮರಸ್ಯ ಸಾರಿದ ಹಿಂದೂ ಮುಸ್ಲಿಂ ಜನರು.

ಸಿಂಧನೂರು:ರಂಜಾನ್​ ಹಬ್ಬದ ಹಿನ್ನೆಲೆಯಲ್ಲಿ ತಾಲೂಕಿನ ಈದ್ಗಾ ಮೈದಾನದಲ್ಲಿ ಮುಸ್ಲಿ ಭಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ವಿವಿಧ ಪಕ್ಷದ ಗಣ್ಯರು, ಮುಖಂಡರು ಭಾಗವಹಿಸಿದ್ದರು. ಮತ್ತೊಂದೆಡೆ ಬಸವೇಶ್ವರ ಜಯಂತಿ ವಿಜೃಂಭಣೆಯಿಂದ ಆಚರಿಸಲಾಗಿದ್ದು, ಬುದ್ದ, ಬಸವ,ಅಂಭೇಡ್ಕರ,ಮೆಕ್ಕಾ ಮಧೀನಾ , ಅಡಪದ ಅಪ್ಪಣ್ಣ,ಮಡಿವಾಳ ಮಾಚಿದೇವ, ಮಹರ್ಷಿ ವಾಲ್ಮೀಕಿ, ಸಿದ್ದರಾಮೇಶ್ವರ, ಹೂಗಾರ ಮಾದಯ್ಯ, ಮೇದಾರ ಕಕ್ಕಯ್ಯ, ಅಂಬಿಗರ ಚೌಡಯ್ಯ, ಭಗೀರಥ ಮಹರ್ಷಿ, ಹೇಮರೆಡ್ಡಿ ಮಲ್ಲಮ್ಮ, ಇನ್ನೂ ಅನೇಕರ ಸ್ಥಭ್ದ ಚಿತ್ರಗಳ ಮೆರವಣಿಗೆ ಅದ್ದೂರಿಯಾಗಿ ಮಾಡಲಾಯಿತು.

ನಗರದ ಮಿನಿ ವಿಧಾನಸೌಧದಿಂದ ಬಸವೇಶ್ವರ ವ್ರತ್ತ ,ಟಿಪ್ಪು ಸುಲ್ತಾನ್ ವ್ರತ್ತ , ಹಳೇ ಬಜಾರ್, ಚೆನ್ನಮ್ಮ ಸರ್ಕಲ್, ಕನಕದಾಸರ ವ್ರತ್ತದ ಮೂಲಕ ವಿವಿಧ ಕಲಾ ತಂಡಗಳು ಹಾಗೂ ಹಲಿಗೆ ಮೇಳಾ ದೊಂದಿಗೆ ಈ ಮೆರವಣಿಗೆ ನಡೆದು ನಗರದ ಸಿಪಿಎಸ್ ಪ್ರೈಮರಿ ಶಾಲಾ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಿತು.

ಹಲವೆಡೆ ಭಾವೈಕ್ಯತೆ: ರಂಜಾನ್ ಹಾಗೂ ಬಸವ ಜಯಂತಿ ಎರಡೂ ಒಂದೇ ದಿನ ಬಂದಿರುವುದರಿಂದ ಭಾವೈಕ್ಯತೆ ಸಾರಿದ ಪ್ರಸಂಗಗಳು ನಡೆಯಿತು. ಪ್ರಾರ್ಥನೆ ಮುಗಿಸಿ ಮನೆಗೆ ತೆರಳುವಾಗ ಬಸವೇಶ್ವರ ಸರ್ಕಲ್ ನಲ್ಲಿ ಹಿಂದೂಗಳು ಸಾವಿಗೆ ಪಾಯಸ್, ಶರಬತ್ತು ಕುಡಿಯಲು ನೀರು ಕೊಟ್ಟು ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರಿದರು, ಸಾಯಂಕಾಲ 4:00 ಘಂಟೆಗೆ ಬಸವೇಶ್ವರರ ಮೆರವಣಿಗೆ ಮಾರ್ಗ ಮಧ್ಯೆ ಮುಸ್ಲಿಮರು ಹಳೇ ಬಜಾರ್ ನ ಟಿಪ್ಪು ಸುಲ್ತಾನ್ ಸರ್ಕಲ್ ನಲ್ಲಿ ಹಿಂದೂ ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯ ತಿಳಿಸಿ ವಿನಿಮಯ ಮಾಡಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡರು.

ಡಿವಾಯ್ಎಸ್ ಪಿ ವೆಂಕಟಪ್ಪ ನಾಯಕ, ಸಿಪಿಐ ಉಮೇಶ ಕಾಂಬಳೆ,ನಗರ ಪಿಎಸ್ಐ ಸೌಮ್ಯ ಹಿರೇಮಠ, ಗ್ರಾಮೀಣ ಪಿಎಸ್ಐ ಯರಿಯಪ್ಪ ಸೇರಿದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮೆರವಣಿಗೆಯುದ್ದಕ್ಕೂ ,ಕಾರ್ಯಕ್ರಮವನ್ನು ನಡೆಯಲು ಪೋಲಿಸ್ ಇಲಾಖೆಯ ಜವಾಬ್ದಾರಿ ತುಂಬಾ ಅಚ್ಚುಕಟ್ಟಾಗಿ ನೆರವೇರಿಸಿದರು.

ಈ ಸಂದರ್ಭದಲ್ಲಿ ಸುವರ್ಣಗಿರಿ ವಿರಕ್ತಮಠ ಯದ್ದಲದೊಡ್ಡಿ,ಲಾಲ ಹುಸೇನ್ ಕಂದಗಲ್, ಇಂದುಮತಿ ಸಾಲಿಮಠ, ಶಾಸಕ ಮತ್ತು ಮಾಜಿ ಸಚಿವರಾದ ವೆಂಕಟರಾವ್ ನಾಡಗೌಡ, ಮಾಜಿ ಸಂಸದ ಕೆ.ವಿರುಪಾಕ್ಷಪ್ಪ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಎಂ. ದೊಡ್ಡ ಬಸವರಾಜ, ರಾಜಶೇಖರಗೌಡ, ಬಸನಗೌಡ ಬಾದರ್ಲಿ, ಶಿವನಗೌಡ ಗೋರೆಬಾಳ, ಮಲ್ಲಿಕಾರ್ಜುನ ಪಾಟೀಲ್, ಮುರ್ತುಜಾ ಹುಸೇನ್, ಪಂಪನಗೌಡ ಬಾದರ್ಲಿ, ಟಿ.ಎನ್. ಪಾಟೀಲ್, ಅಶೋಕ ಗದ್ರಟಗಿ,ವಿರಭದ್ರಪ್ಪ ಕುರುಕುಂದಿ, ಅಭಿಷೇಕ್ ನಾಡಗೌಡ, ಚನ್ನಬಸಪ್ಪ ಸಾಹುಕಾರ,ಎಂ ಡಿ. ನದಿಮುಲ್ಲಾ, ಎಚ್. ಎನ್. ಬಡಿಗೇರ, ಪೂಜಪ್ಪ, ವೆಂಕೋಬ ನಾಯಕ, ಹುಸೇನಸಾಬ್, ಜಿಲಾನಿಪಾಷ, ನದಿಮುಲ್ಲಾ, ಖಾದರಸುಭಾನಿ, ತಹಸೀಲ್ದಾರ ಮಂಜುನಾಥ ಭೋಗಾವತಿ, ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು..

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;