ತಾಲೂಕಾಡಳಿತ ಭ್ರಷ್ಟಾಚಾರದಲ್ಲಿ ಮುಳುಗಿರುವುದನ್ನು ಖಂಡಿಸಿ ಪ್ರತಿಭಟನೆ.
ಸಿಂಧನೂರು :ಏಪ್ರಿಲ್ 23. ತಾಲೂಕಿನಾದ್ಯಂತ ಇತ್ತೀಚಿನ ದಿನಗಳಲ್ಲಿ ಹಲವು ರೀತಿಯ ಸಮಸ್ಯೆಗಳಿದ್ದು ಅದರಲ್ಲಿ ಪ್ರಮುಖವಾಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುವಂತಹ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವುದರಲ್ಲಿ ಎ.ಆರ್.ಸಿ.ಏಜೆನ್ಸಿ, ರಾಯಚೂರು ಮತ್ತು ಜಿಲ್ಲಾ ಆರೋಗ್ಯ ಇಲಾಖೆಯ ಆಡಳಿತ ಮಂಡಳಿ ಗೊಂದಲದಿಂದಾಗಿ ಕಾರ್ಮಿಕರಿಗೆ ಸಮಸ್ಯೆಯಾಗಿದೆ, ಇದರಿಂದ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸರಿಯಾದ ಸ್ಪಂದನೆ ಇಲ್ಲದಿರುವುದರಿಂದ ರೋಗಿಗಳಿಗೆ ಬಹಳ ತೊಂದರೆಯಾಗಿದೆ. ಅದುದರಿಂದ ವಜಾಗೊಳಿಸಿದ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಪುನಃ ತೆಗೆದುಕೊಳ್ಳಬೇಕು ಎಂದು ಬಿ. ಎಸ್. ಪಿ. ತಾಲೂಕು ಅಧ್ಯಕ್ಷ ಹುಲುಗಪ್ಪ ಮಲ್ಕಾಪೂರು ತಿಳಿಸಿದರು.
ಬಹುಜನ ಸಮಾಜ ಪಕ್ಷ, ಸಿಂಧನೂರು ತಾಲೂಕು ಆಡಳಿತ ಭ್ರಷ್ಟಾಚಾರದಲ್ಲಿ ಮುಳುಗಿರುವುದನ್ನು ಖಂಡಿಸಿ ಮತ್ತು ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಗರದ ತಾಲೂಕು ತಹಸೀಲ್ದಾರ ಕಾರ್ಯಾಲಯದ ಮುಂದೆ ಒಂದು ದಿನದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಗೋರೆಬಾಳ ಗ್ರಾಮದಲ್ಲಿ ಅಂಬೇಡ್ಕರ್ ವಸತಿ ನಿಲಯದ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಸರಕಾರಿ ಭೂಮಿಯನ್ನು ಖಾಸಗಿ ವ್ಯಕ್ತಿಗಳು ಅನಧಿಕೃತವಾಗಿ ಸಾಗುವಳಿ ಮಾಡುತ್ತಾ ಬಂದಿರುತ್ತಾರೆ, ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದ್ದು, ಈ ವಿಷಯವಾಗಿ ಮಾನ್ಯ ಜಿಲ್ಲಾಧಿಕಾರಿಗಳು ರಾಯಚೂರು 05/04/2022 ರಂದು ಮನವಿ ಸಲಿಸಿದ್ದು ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಬೇಲೆನೇ ಎದ್ದು ಹೊಲ ಮೇಯದಾಂತಗಿದೆ,
ತಾಲೂಕಿನ ಗ್ರಾಮಗಳಲ್ಲಿ ಹೋಟೆಲ್, ಕಿರಾಣಿ ಅಂಗಡಿಗಳಲ್ಲಿ,ರಾಜಾರೋಷವಾಗಿ ಮದ್ಯ ಮಾರಾಟ ನಡೆಯುತ್ತಿರುವುದರ ಪರಿಣಾಮದಿಂದಾಗಿ ಇಂದು ಅಪ್ರಾಪ್ತ ಬಾಲಕರು ದುಷ್ಕಟಕೆ ಬಲಿಯಾಗುತ್ತಿದ್ದಾರೆ.ಮಹಿಳೆಯರ ಮತ್ತು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆತ್ಯಾಚಾರಗಳು,ಜಾತಿ ಗಲಾಟೆಗಳು ಕೋಮುಗಲಬೆಗಳು ನಡೆಯುತ್ತಿರುವುದಕ್ಕೆ ಮಧ್ಯೆ ಎಂಬುವುದು ಪೂರಕ ವಸ್ತುವಾಗಿದೆ, ಇದನ್ನು ತಡೆಯಲು ಅಬಕಾರಿ ಇಲಾಖೆಯ ಅಧಿಕಾರಿಗಳು ಸಹ ವಿಫಲರಾಗಿದ್ದಾರೆ, ಇದನ್ನ ವಿರೋಧಿಸಿ ಈ ಹಿಂದೆ ಮಹಿಳಾ ಸಂಘಟನೆಗಳು ಬೆಂಗಳೂರು ವರಗೆ ಪಾದಯಾತ್ರೆ ನಡೆಸಿದ್ದು, ಸರ್ಕಾರ ಮತ್ತು. ಅಧಿಕಾರಿಗಳು ಎಚ್ಚತ್ತುಕೊಳ್ಳದೆ ಇರುವುದು ನಾಚಿಕೆಗೇಡಿನ ಸಂಗತಿಯಾಗಿದೆ.
ತಾಲೂಕಿನಾದ್ಯಂತ ಹಗಲು-ರಾತ್ರಿಯೆನ್ನದೆ ಮರಳು ಮಾರಾಟ ಧಂದೆ ಭರ್ಜರಿಯಾಗಿ ನಡೆಯುತ್ತಿದೆ ಅದಕ್ಕೆ ಜೀವಂತ ಸಾಕ್ಷಿಯೆಂದರೆ ಇತ್ತೀಚಿನ ದಿನಮಾನಗಳಲ್ಲಿ ಪೊಲೀಸ್ ಇಲಾಖೆಯಲ್ಲಿ ಪ್ರಕರಣ ದಾಖಲಾಗುತ್ತಿರುವುದು ಸರ್ಕಾರದ ಆದೇಶದ ಮರಳು ಸಂರಕ್ಷಣೆ ಸಮಿತಿಯು ರಾಜಕೀಯ ನಾಯಕರ ಕೈಗೊಂಬೆಯಾಗಿದೆ, ಮತ್ತು ಅಲ್ಲಲ್ಲಿ ರಸ್ತೆ ಅಪಘಾತಗಳು ಸಂಭವಿಸುತ್ತಿರುವುದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಸಂಚಾರಿ ಠಾಣೆಯ ಅಧಿಕಾರಿಗಳು ಒಳಗೊಂಡಂತೆ ಅನೇಕರು ಮೌನವಹಿಸಿದ್ದಾರೆ.ಇದನ್ನು ವಿರೋಧಿಸಿ ಬಹುಜನ ಸಮಾಜ ಪಕ್ಷವು ಸಾರ್ವಜನಿಕ ಸಹಯೋಗದೊಂದಿಗೆ ಸಿಂಧನೂರಿನ ತಹಶೀಲ್ದಾರ ಕಾರ್ಯಲಯದ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ಹಕ್ಕೊತ್ತಾಯಗಳು.1)ವಜಾಗೊಳಿಸಿದ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಪುನ: ತೆಗೆದಕೊಳ್ಳಬೇಕು,
2) ಸರ್ಕಾರಿ ಭೂಮಿಯನ್ನು ಖಾಸಗಿ ವ್ಯಕ್ತಿಗಳು ಕಬ್ಜ ಮಾಡಿಕೊಂಡು ವ್ಯವಸಾಯ ಮಾಡುತ್ತಿರುವವರ ಮತ್ತು ಅಧಿಕಾರಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಭೂಮಿಯನ್ನು ವಶಪಡಿಕೊಳ್ಳಬೇಕು,
3)ಮುಂದಿನ ಯುವ ಪೀಳಿಗೆಗಾಗಿ ಮತ್ತು ಮಹಿಳಾ ಮಕ್ಕಳ ಸಂರಕ್ಷಣೆಗಾಗಿ ಹಳ್ಳಿಗಳಲ್ಲಿ ಸಂಪೂರ್ಣ ಮದ್ಯ ನೀಷೇದ ಮಾಡಬೇಕು,
4) ಮರಳು ಗಣಿಗಾರಿಯನ್ನು ತಡೆಯಲು ಸರ್ಕಾರ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಬೇಕು, ಮರಳು ಸಂರಕ್ಷಣಕ್ಕೆ ಹೆಚ್ಚಿನ ಅಧಿಕಾರ ಕೊಡಬೇಕು.
ಗುಡದೇಶ ಬೇರ್ಗಿ, ಸಮತಾ ದಲಿತ ಮಹಾಸಭಾ ಜಿಲ್ಲಾಧ್ಯಕ್ಷರು, ಸುರೇಶ ಕಟ್ಟಿಮನಿ ಜಿಲ್ಲಾಧ್ಯಕ್ಷರು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಬೆಂಬಲವ್ಯಕ್ತಪಡಿಸಿದವು.
ಈ ಸಂದರ್ಭದಲ್ಲಿ ಎಸ್. ಐ.ಸಾಲುಗುಂದಾ,ಪಂಪಾಪತಿ ಬೂದಿಹಾಳ, ಅಬ್ದುಲ್ ಸಾಬ್, ಸಂತೋಷ, ವಿರುಪಾಕ್ಷಿ ಸಾಸಲಮರಿ,ಮಹಿಳೆಯರು ಭಾಗವಸಿದ್ದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
