;

ಸಂಚಾರಿ ಪೋಲಿಸ್ ಚೌಕಿ ಉದ್ಘಾಟಿಸಿದ – ಜಿಲ್ಲಾ ವರಿಷ್ಠಾಧಿಕಾರಿ ನಿಖಿಲ್. ಬಿ…!!!

ಸಂಚಾರಿ ಪೋಲಿಸ್ ಚೌಕಿ ಉದ್ಘಾಟಿಸಿದ – ಜಿಲ್ಲಾ ವರಿಷ್ಠಾಧಿಕಾರಿ ನಿಖಿಲ್. ಬಿ.

ಸಿಂಧನೂರು : ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಬಿಸಿಲಿನ ತಾಪಮಾನ 40 ಡಿಗ್ರಿ ಯಿಂದ 43 ಡಿಗ್ರಿ ಸೆಲ್ಸಿಯಸ್ ಇರುವುದರಿಂದ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಟ್ರಾಫಿಕ್ ಪೋಲಿಸ್ ನವರು ಸುಡು ಬಿಸಿಲನ್ನು ಲೆಕ್ಕಿಸದೆ ಕರ್ತವ್ಯದಲ್ಲಿ ನಿರತರಾಗಿರುತ್ತಾರೆ.ಅವರು ಕೂಡ ಮಾನಸಿಕವಾಗಿ, ದೈಹಿಕವಾಗಿ ಒತ್ತಡದಲ್ಲಿ ಸಿಲುಕಿರುತ್ತಾರೆ. ಅವರ ಕಾರ್ಯ ಕ್ಷಮತೆಯನ್ನು ಹೆಚ್ಚಿಸಲು ನೆರಳಿನ ವ್ಯವಸ್ಥೆ ಮಾಡಲಾಗಿದೆ. ಈ ಚೌಕ ನಿರ್ಮಾಣ ಮಾಡಲಿಕ್ಕೆ ಕಾರಣೀಭೂತರಾದ ದಾನಿಗಳಿಗೆ ಧನ್ಯವಾದಗಳು ತಿಳಿಸುತ್ತಾ, ಬಿಸಿಲಿನ ತಾಪಮಾನ ದಿಂದ ಕಣ್ಣಿಗೂ ಕುಕ್ಕುವದರಿಂದ ಕೆಟ್ಟ ಪರಿಣಾಮ ಬೀರಬಾರದು ಎಂಬ ಉದ್ದೇಶದಿಂದ ಸಂಚಾರಿ ಪೋಲಿಸ್ ಸಿಬ್ಬಂದಿಗಳಿಗೆ ಉತ್ತಮ ಗುಣಮಟ್ಟದ ಕೂಲಿಂಗ್ ಗ್ಲಾಸ್ ನೀಡಲಾಗಿದೆ.
ಡಿ.ವಾಯ್.ಎಸ್ಪಿ. ಹಾಗೂ ಸಿಪಿಐ,ಸಂಚಾರಿ ಪಿಎಸ್ ಐ ಅವರ ತಂಡದ ಕಾರ್ಯ ಶ್ಲಾಘನೀಯ. ಸಿಂಧನೂರು ತಾಲೂಕು ರಾಯಚೂರು ಜಿಲ್ಲೆಯಲ್ಲಿ ವಿಭಿನ್ನ ರೀತಿಯಲ್ಲಿ ಉತ್ತಮ ಸಾಮಾಜಿಕ ಸೇವೆಯಲ್ಲಿ ಮುಂದೆ ಇದೆ, ಇಲ್ಲಿಂದಲೇ ರಾಜ್ಯದ ತುಂಬೆಲ್ಲ ಹರಡಲಿ ಎಂದರು.

ನಗರದ ಮಿನಿ ವಿಧಾನಸೌಧದ ಮುಂಭಾಗದ ಗಾಂಧಿ ವೃತ್ತದಲ್ಲಿ ಸಂಚಾರಿ ಪೋಲಿಸ್ ಚೌಕಿ ಉದ್ಘಾಟಿಸಿ ಎಲ್ಲಾ ಸಂಚಾರಿ ಪೋಲಿಸ್ ಸಿಬ್ಬಂದಿಗಳಿಗೆ ಈ ಸಂದರ್ಭದಲ್ಲಿ ಕೂಲಿಂಗ್ ಗ್ಲಾಸ್ ವಿತರಣೆ ಮಾಡಿ ಜಿಲ್ಲಾ ವರಿಷ್ಠಾಧಿಕಾರಿ ನಿಖಿಲ್ ಬಿ.ರವರು ಮಾತನಾಡಿದರು.

ಈ ಸಂದರ್ಭದಲ್ಲಿ ಡಿ.ವಾಯ್.ಎಸ್.ಪಿ.ವೆಂಕಟಪ್ಪ ನಾಯಕ, ಸಿ.ಪಿ.ಐ.ಉಮೇಶ ಕಾಂಬಳೆ, ಸಂಚಾರಿ ಪಿ.ಎಸ್.ಐ. ಬಸವರಾಜ ಹೆಚ್,ನಗರ ಪಿ. ಎಸ್.ಐ. ಸೌಮ್ಯ ಹಿರೇಮಠ, ಗ್ರಾಮೀಣ ಪಿ. ಎಸ್. ಐ. ಎರಿಯಪ್ಪ, ತುರ್ವಿಹಾಳ ಪಿ.ಎಸ್.ಐ. ಚಂದ್ರಪ್ಪ, ಬಳಗನೂರು ಪಿ.ಎಸ್.ಐ. ಶಂಕರಗೌಡ, ಪೋಲಿಸ್ ಸಿಬ್ಬಂದಿಗಳು ಸಂಘ ಸಂಸ್ಥೆಯ ಮುಖಂಡರು, ವನಸಿರಿ ಅಧ್ಯಕ್ಷ ಅಮರೇಗೌಡ ಮಲ್ಲಾಪೂರು ಸೇರಿದಂತೆ ಇದ್ದರು…

 

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;