;

ಸರ್ಕಾರಿ ನೌಕರರ ದಿನಾಚರಣೆ : 18 ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ…!!!

ಸರ್ಕಾರಿ ನೌಕರರ ದಿನಾಚರಣೆ : 18 ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ
ಶೀಘ್ರವಾಗಿ ಕಡತ ವಿಲೇವಾರಿ ಮಾಡಿ, ಕಪ್ಪು ಚುಕ್ಕೆ ಬರದ ಹಾಗೆ ಕರ್ತವ್ಯ ನಿರ್ವಹಿಸಿ:
ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ
ಚಿತ್ರದುರ್ಗ: ಪ್ರತಿ ಕಡತವನ್ನು ಜೀವಂತ ವ್ಯಕ್ತಿಯ ಹಾಗೆ ಭಾವಿಸಿ, ಮಾನವೀಯ ನೆಲೆಗಟ್ಟಿನೊಂದಿಗೆ ಶೀಘ್ರವಾಗಿ ಕಡತ ವಿಲೇವಾರಿ ಮಾಡಿ. ಕಪ್ಪು ಚುಕ್ಕೆ ಬರದ ಹಾಗೆ ಕರ್ತವ್ಯ ನಿರ್ವಹಿಸಿ ಎಂದು ಜಿಲ್ಲಾಧಿಕಾರಿ ಕವಿತಾ.ಎಸ್.ಮನ್ನಿಕೇರಿ ಹೇಳಿದರು.
ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಗುರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಹಾಗೂ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರ್ದಾರ್ ವಲ್ಲಭಾಯಿ ಪಟೇಲ್ ಅವರು ನಾಗರಿಕ ಸೇವಾ ವರ್ಗವನ್ನು ಭಾರತದ ಉಕ್ಕಿನ ಚೌಕಟ್ಟು ಎಂದು ಬಣ್ಣಿಸಿದ್ದಾರೆ. ಸರ್ಕಾರಿ ನೌಕರಿ ಲಕ್ಷದಲ್ಲಿ ಒಬ್ಬರಿಗೆ ಲಭಿಸುತ್ತದೆ. ಸಾರ್ವಜನಿಕ ಸೇವೆ ಮಾಡಲು ಇದು ಉತ್ತಮ ಅವಕಾಶವಾಗಿದೆ. ಕಚೇರಿಗಳಲ್ಲಿ 10 ಕಡತಗಳಲ್ಲಿ ಎರೆಡು ಕಷ್ಟದ ಕಡತಗಳು ನಿಮ್ಮೆದುರು ಬರಬಹುದು. ಮೊದಲಿಗೆ ಸರಳವಾಗಿ ಇರುವ ಕಡತಗಳನ್ನು ಬಗೆಹರಿಸಿ. ಇದರಿಂದ ಕಾರ್ಯ ಒತ್ತಡ ಕಡಿಮೆಯಾಗುತ್ತದೆ. ನಂತರ ಕಷ್ಟದ ಕಡತಗಳನ್ನು ನಿರ್ವಹಿಸುವ ಆತ್ಮವಿಶ್ವಾಸವು ನಿಮ್ಮಲ್ಲಿ ಮೂಡಿ ಬರುವುದು. ಅನಗತ್ಯವಾಗಿ ಸಾರ್ವಜನಿಕರಿಗೆ ತೊಂದರೆ ನೀಡಿ ಕಚೇರಿಗೆ ಅಲೆದಾಡಿಸಬೇಡಿ. ಭ್ರಸ್ಟಾಚಾರಕ್ಕೆ ಅವಕಾಶ ಇಲ್ಲ ದಂತೆ ಕರ್ತವ್ಯ ನಿರ್ವಹಿಸಿ ಎಂದು ತಿಳಿಸಿದರು.

ಜಿ.ಪಂ.ಸಿಇಓ ಡಾ.ಕೆ.ನಂದಿನಿದೇವಿ ಮಾತನಾಡಿ, ಸರ್ಕಾರಿ ನೌಕರರು ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು. ಕಚೇರಿ ಜೊತೆಗೆ ಕುಟುಂಬದೊಂದಿಗೆ ಸಮಯ ಕಳೆಯಿರಿ. ವ್ಯಾಯಾಮ, ಕ್ರೀಡಾಕೂಟ ಹಾಗೂ ಮನರಂಜನೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಿ. ಇದರಿಂದ ಕರ್ತವ್ಯ ಒತ್ತಡದ ನಡುವೆ ಬಿಡುವು ದೊರೆತು, ಪುನಃ ಉಲ್ಲಾಸದಿಂದ ಕೆಲಸದಲ್ಲಿ ತೊಡಗಲು ಸಹಾಯಕವಾಗುತ್ತದೆ. ಸರ್ವೋತ್ತಮ ಪ್ರಶಸ್ತಿಗೆ ನೌಕಕರು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಬೇಕು ಎಂದರು.
ಜಿಲ್ಲಾ ರಕ್ಷಣಾಧಿಕಾರಿ ಕೆ.ಪರಶುರಾಮ ಮಾತನಾಡಿ, ಸರ್ಕಾರದಲ್ಲಿ ಕಾಯಾರ್ಂಗ ಬಹಳ ಮುಖ್ಯ ಅಂಗವಾಗಿದೆ, ಶಾಸಕಾಂಗ ರೂಪಿಸುವ ಯೋಜನೆಗಳನ್ನು ಕಾಯಾರ್ಂಗ ಸರ್ವಾಜನಿಕರಿಗೆ ತಲುಪಿಸುತ್ತದೆ. ಇಂದು ಸರ್ಕಾರದ ಆಡಳಿತ ವೈಖರಿ ಬದಲಾಗಿದೆ. ಆರ್.ಟಿ.ಐ. ಕಾಯ್ದೆ ನೌಕರರನ್ನು ಹೆಚ್ಚು ಜಬ್ದಾರಿಯಿಂದ ಕಾರ್ಯನಿರ್ವಹಿಸುವಂತೆ ಮಾಡಿದೆ. ಸರ್ಕಾರಿ ನೌಕರರು ಪ್ರಶ್ನಾತೀತರಲ್ಲ. ಮಾಧ್ಯಮ ಕ್ಷೇತ್ರದಲ್ಲಿ ಬದಲಾವಣೆಯಾಗಿದೆ. ಸರ್ಕಾರಿ ನೌಕರರು ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಹಾಗೇ ದೌರ್ಜನ್ಯ ಎಸಗುವ ಉದಾಹರಣೆಗಳು ಇವೆ. ನೌಕರರು ಎಚ್ಚರ ಹಾಗೂ ಜವಬ್ದಾರಿ ಅರಿತು ಕೆಲಸ ಮಾಡಬೇಕು ಎಂದರು.
ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಮಂಜುನಾಥ ಪ್ರಸ್ತಾವಿಕವಾಗಿ ಮಾತನಾಡಿ, ನೌಕರರ ದಿನಾಚರಣೆಗೆ ಚಿತ್ರದುರ್ಗ ಜಿಲ್ಲಾ ಘಟಕದಿಂದ ಪ್ರಥಮವಾಗಿ ಮನವಿ ಮಾಡಲಾಗಿತ್ತು . ಇದಕ್ಕೆ ರಾಜ್ಯಾಧ್ಯಕ್ಷರು ಸ್ಪಂದಿಸಿ ಸರ್ಕಾರದ ಮಟ್ಟದಲ್ಲಿ ಚರ್ಚಿಸಿದರು. ಕಳೆದ ವರ್ಷ ರಾಜ್ಯ ನೌಕರರ ದಿನಾಚರಣೆ ಆಚರಣೆಗೆ ಸರ್ಕಾರ ಆದೇಶ ಹೊರಡಿಸಿತು. ಕೋವಿಡ್ ಹಿನ್ನೆಲೆಯಲ್ಲಿ ಕಳೆದ ವರ್ಷ ಕಾರ್ಯಕ್ರಮ ಆಯೋಜನೆ ಮಾಡಿರಲಿಲ್ಲ. ಈ ವರ್ಷ ಮೊದಲ ಬಾರಿಗೆ ಸರ್ಕಾರಿ ನೌಕರರು ದಿನಾಚರಣೆ ಆಚರಿಸಲಾಗುತ್ತಿದೆ. ನೌಕರರ ಬೇಡಿಕೆಗಳಾದ ಕೇಂದ್ರ ಸರ್ಕಾರ ನೌಕರರ ಸರಿಸಮಾನದ ವೇತನ ಹಾಗೂ ಏಳನೇ ವೇತನ ಆಯೋಗ ರಚನೆಗೆ ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದಾರೆ. ಎನ್.ಪಿ.ಎಸ್ ರದ್ದತಿಗೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಶೀಘ್ರವೇ ನೌಕರರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ಆದೇಶ ಹೊರಡಿಸಲಾಗುವುದು. ಇದರಿಂದ ನೌಕರರು ಹಾಗೂ ಕುಟುಂಬದವರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದರು. ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಗೆ ನೌಕರರ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಉಪವಿಭಾಗಧಿಕಾರಿ ಚಂದ್ರಯ್ಯ, ಜಿ.ಪಂ.ಕಾರ್ಯದರ್ಶಿ ಡಾ.ರಂಗಸ್ವಾಮಿ, ರಾಜ್ಯ ನೌಕರರ ಸಂಘದ ತಾಲ್ಲೂಕು ಮಟ್ಟದ ಅಧ್ಯಕ್ಷರುಗಳಾದ ಲೋಕೇಶ್, ಜಗನ್ನಾಥ ಡಿ.ಟಿ, ಕೆ.ಈರಣ್ಣ, ಶಿವಕುಮಾರ್, ಶಶಿಧರ ಉಪಸ್ಥಿತರಿದ್ದರು.
18 ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ: ಕಾರ್ಯಕ್ರಮದಲ್ಲಿ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಆಯ್ಕೆಯಾದ 18 ನೌಕರರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.
2020-21 ಸಾಲಿನ ಪ್ರಶಸ್ತಿ ಪಡೆದವರ ವಿವರ: ಕೃಷಿ ಇಲಾಖೆ ಜಂಟಿ ನಿರ್ದೇಶಕ ಸದಾಶಿವ.ವಿ, ಪಶು ವೈದ್ಯಾಧಿಕಾರಿ ಡಾ.ಮುರುಗೇಶ.ವಿ.ಟಿ . ತೋಟಗಾರಿಕೆ ಇಲಾಕೆ ಹಿರಿಯ ಸಹಾಯಕ ನಿರ್ದೇಶಕ ದೇವರಾಜು.ಬಿ , ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎನ್.ಸುಧಾ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪ್ರದೀಪ್ ಕುಮಾರ್.ಎಂ , ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವ್ಯವಸ್ಥಾಪಕ ಆರ್.ನಾಗೇಂದ್ರಬಾಬು , ಆಹಾರ ಶಿರಸ್ತೇದಾರ್ ಶಿವಾಜಿ.ಟಿ, ತೋಟಗಾರಿಕೆ ಸಹಾಯಕ ಅಂಜುಂ.ಎನ್.ಎಂ .
2021-22 ಸಾಲಿನ ಪ್ರಶಸ್ತಿ ಪಡೆದವರ ವಿವರ:ಕೃಷಿ ಸಂಶೋಧನಾ ನಿರ್ದೇಶಕ ಶರಣಪ್ಪ ಜಂಗಂಡಿ, ಪಶು ಇಲಾಖೆ ಉಪನಿರ್ದೇಶಕ ಡಾ.ಬಿ.ಪ್ರಸನ್ನ ಕುಮಾರ್, ಭೂ ದಾಖಲೆಗಳ ಉಪನಿರ್ದೇಶಕ ಹಾಗೂ ತಾಂತ್ರಿಕ ಸಹಾಯಕ ಎಂ.ಎಸ್.ಕೃಷ್ಣಪ್ರಸಾದ್, ಜಿಲ್ಲಾ ಆಸ್ಪತ್ರೆ ಸಲಹಾ ವೈದ್ಯ ಹಾಗೂ ನೆಫ್ರಾಲಜಿಸ್ಟ್ ಡಾ.ಡಿ.ಪ್ರಕಾಶ್, ರಾಜಸ್ವ ನಿರೀಕ್ಷಕ ಎನ್.ಪಾಲಾಕ್ಷಪ್ಪ, ಪಿಡಿಓ ಆರ್.ಪಾತಣ್ಣ, ಎಫ್.ಡಿ.ಎ ಹೆಚ್.ಆರ್.ದಿವಾಕರ್, ಪರಿಸರ ಅಭಿಯಂತರ ತಿಮ್ಮರಾಜು, ಆರೋಗ್ಯ ನಿರೀಕ್ಷಣಾಧಿಕಾರಿ ಗಂಗಾಧರ.ಎ, ವಾಹನ ಚಾಲಕ ಆರ್.ರಮೇಶ್. ಉಪಸ್ಥಿತರಿದ್ದರು…

ವರದಿ.ಶಶಿಕುಮಾರ್ ಚಳ್ಳಕೆರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;