ಬಡರೋಗಿಗಳಿಗೆ ಸ್ಪಂದಿಸದ ಶಾಸಕ,ಅವರ ಸ್ಥಾನಕ್ಕೆ ರಾಜೀನಾಮೆ ನೀಡಲಿ – ಡಾ.ನಾಗವೇಣಿ…!!!

ಬಡರೋಗಿಗಳಿಗೆ ಸ್ಪಂದಿಸದ ಶಾಸಕ,ಅವರ ಸ್ಥಾನಕ್ಕೆ ರಾಜೀನಾಮೆ ನೀಡಲಿ – ಡಾ.ನಾಗವೇಣಿ.

ಸಿಂಧನೂರು : ಏ.17 ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರು ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡದಿರುವುದು ಶಾಸಕ ವೆಂಕಟರಾವ್ ನಾಡಗೌಡರ ಗಮನಕ್ಕೆ ಇದ್ದು ವೈದ್ಯರ ಮೇಲೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಸಮಾಜ ಸೇವಕಿ ಹಾಗೂ ಕುರುಬ ಸಮಾಜದ ಮಹಿಳಾ ಘಟಕ ಜಿಲ್ಲಾ ಅಧ್ಯಕ್ಷರಾದ ಡಾ. ನಾಗವೇಣಿ ಎಸ್ ಪಾಟೀಲ್ ಪತ್ರಿಕೆ ಹೇಳಿಕೆ ಮುಖಾಂತರ ಒತ್ತಾಯಿಸಿದರು.

ನಗರ ಸೇರಿದಂತೆ ಗ್ರಾಮೀಣ ಪ್ರದೇಶದಿಂದ ಬಡವರು, ಕೂಲಿಕಾರರು, ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆಂದು ಬರುತ್ತಾರೆ. ಆದರೆ ಇಲ್ಲಿ ಮುಖ್ಯ ವೈದ್ಯಾಧಿಕಾರಿನೇ ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗದೇ ಹಾಗೂ ವೈದ್ಯರು ಕೂಡಾ ಸರಿಯಾಗಿ ಕಾರ್ಯನಿರ್ವಹಿಸದೇ ಇರುವುದರಿಂದ ಪ್ರತಿದಿನ ರೋಗಿಗಳು ಪರದಾಡುವವಂತಹ ಸ್ಥಿತಿ ನಿರ್ಮಾಣವಾಗಿದೆ. ಗರ್ಭಿಣಿ ಮಹಿಳೆಯರ ಸ್ಥಿತಿ ತುಂಬಾ ಚಿಂತಾಜನಕವಾಗಿದೆ.ಸರಕಾರಿ ಆಸ್ಪತ್ರೆಗೆ ಮುಖ್ಯ ವೈದ್ಯಾಧಿಕಾರಿ ಹನುಮಂತರೆಡ್ಡಿ ಅವರು ಹಾಗೂ ಕೆಲವರು ಕಾರ್ಯನಿರ್ವಹಿಸದೇ ತಮ್ಮ ಸ್ವಂತ ಕ್ಲಿನಿಕ್ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಾರೆ. ಇದರ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿಗಳ ಗಮನಕ್ಕೆ ತಂದಾಗ ಅವರು ಆಸ್ಪತ್ರೆಗೆ ಭೇಟಿ ನೀಡಿ ಮುಖ್ಯ ವೈದ್ಯಾಧಿಕಾರಿಯನ್ನು ಒಂದು ವಾರದ ಒಳಗೆ ಬದಲಾವಣೆ ಮಾಡುತ್ತೇನೆಂದು ಭರವಸೆ ನೀಡಿದ್ದಾರೆ. ಸ್ವತಃ ಪತ್ರಿಕೆಯವರು ಸಾಕ್ಷ್ಯ ಆಧಾರಗಳ ಸಹಿತ ವರದಿ ಮಾಡಿ ಜಿಲ್ಲಾ ವೈದ್ಯಾಧಿಕಾರಿ ಗಮನಕ್ಕೆ ತಂದರು,ಮತ್ತು ತಾವೇ ಖುದ್ದಾಗಿ ಭೇಟಿ ನೀಡಿದಾಗಲೂ ಆಸ್ಪತ್ರೆಯ ಅವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿದಾಗಲೂ ಅಲ್ಲಿನ ಸಮಸ್ಯೆಗಳು ಕಂಡರೂ ಬದಲಾವಣೆಗೆ ಒಂದು ವಾರ ಕಾಲಾವಕಾಶ ಬೇಕೆ ಎಂದು ಡಾ.ನಾಗವೇಣಿಯವರು ಪ್ರಶ್ನಿಸಿದ್ದಾರೆ?.

ಶಾಸಕರಾದ ವೆಂಕಟರಾವ್ ನಾಡಗೌಡ ಅವರು ಬಡರೋಗಿಗಳ ಕಡೆ ಗಮನ ಹರಿಸದೆ ಸರಕಾರಿ ಆಸ್ಪತ್ರೆಯಲ್ಲಿ ಸರಿಯಾಗಿ ಕರ್ತವ್ಯ ನಿರ್ವಹಿಸದೆ ಇರುವ ವೈದ್ಯರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಆದ್ದರಿಂದ ಶಾಸಕ ಸ್ಥಾನಕ್ಕೆ ಹಾಗೂ ಮುಖ್ಯ ವೈದ್ಯಾಧಿಕಾರಿ ಹನುಮಂತರಡ್ಡಿ ಮುಖ್ಯ ವೈದ್ಯ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಡಾ.ನಾಗವೇಣಿ ಎಸ್ ಪಾಟೀಲ್ ಆಗ್ರಹಿಸಿದ್ದಾರೆ…

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend