ತೇರದಾಳ ಮತಕ್ಷೇತ್ರದಲ್ಲಿ ಶಾಸಕ ಸಿದ್ದು ಸವದಿ ಹೆಸರು ಕೆಡಿಸಲು ಹುನ್ನಾರ ನಡೆಸಿದ್ದು ಖಂಡನೀಯ
ಮಹಾಲಿಂಗಪುರ: ಶಾಸಕರ ಹೆಸರನ್ನು ಕೆಡಿಸುವ ಸಲುವಾಗಿ ತಮ್ಮ ಸ್ವಾರ್ಥ ಮನೋಭಾವದಿಂದ ಮಾಜಿ ಮುಖ್ಯಮಂತ್ರಿಗಳಿಗೆ ಸಿದ್ದು ಸವದಿ ಅವರ ಬಗ್ಗೆ ಇಲ್ಲ ಸಲ್ಲದ ಆಪಾದನೆ ಮನವಿ ಸಲ್ಲಿಸಿದ ಮುಖಂಡರ ನಡೆಯನ್ನು ಕಂಡಿಸಿದ ಢವಳೇಶ್ವರ ಗ್ರಾಮದ ಬಿಜೆಪಿ ಯುವ ಘಟಕ. ಮಹಾಲಿಂಗಪುರ ಪಟ್ಟಣದ JLBC ಐಬಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಯುವಕರು ನಮ್ಮ ಶಾಸಕರ ಎಳ್ಗೆಯನ್ನು ಸಹಿಸದ ನಾಲ್ಕು ಜನ ನಮ್ಮ ಪಕ್ಷ ಬಿಟ್ಟು ಹೋಗಿದ್ದರು ಸಹ ಮತ್ತೆ ಮತ್ತೆ ಅವರಿಗೆ ಕಿರುಕುಳ ಕೋಡುವುದಲ್ಲದೆ ಮೊನ್ನೆ ಮಂಗಳವಾರ ಬೆಳಗಾವಿಯ ಖಾಸಗಿ ಹೊಟೇಲವೊಂದರಲ್ಲಿ ಬಿಜೆಪಿಯ ಕೋರ ಕಮಿಟಿ ಸಭೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆಗಮಿಸಿದ್ದರು ಇದೆ ಸಂದರ್ಭದಲ್ಲಿ ತೇರದಾಳ ಮತಕ್ಷೇತ್ರದ ಕೆಲ ಮುಖಂಡರು ಶಾಸಕ ಸಿದ್ದು ಸವದಿಯವರಿಗೆ ಟಿಕೆಟ್ ನೀಡದೆ ಹೊಸಬರಿಗೆ ಕೋಡಿ ಅಂದರೆ ಮಾತ್ರ ನಾವು ಪಕ್ಷದಲ್ಲಿ ಕೆಲಸ ಮಾಡುತ್ತೆವೆ ಇಲ್ಲ ಬಿಜೆಪಿ ಪಕ್ಷ ಸೋಲುವ ಸ್ಥಿತಿಗೆ ಬರಬಹು ಎಂದು ಎಚ್ಚರಿಕೆ ಮನವಿ ಸಲ್ಲಿಸುವಾಗ ಬಿ.ಎಸ್.ವೈ ಅವರ ಮುಂದೆಯೆ ಅವಾಚ್ಯ ಶಬ್ದಗಳ ಮಾತಿನ ಚಕಮಕಿ ನಡೆಯುದಲ್ಲದೆ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದ ಘಟನೆ ನಡೆದಿತ್ತು ಈ ಘಟನೆಯನ್ನು ತಿರ್ವವಾಗಿ ಖಂಡಿಸಿದ ಢವಳೇಶ್ವರ ಗ್ರಾಮದ ಬಿಜೆಪಿ ಪಕ್ಷದ ಯುವ ಮುಖಂಡರುಗಳು ನಮ್ಮ ಶಾಸಕರು ಎಲ್ಲಾ ವಿಷಯದಲ್ಲು ತಕ್ಷಣ ಸ್ಪಂದಿಸುವ ವ್ಯಕ್ತಿಯಾಗಿದ್ದು ಇವರ ಹೆಸರಿಗೆ ಕಳಂಕ ತಂದು ಅವರ ಘನತೆಯನ್ನು ತೆಜೋವದೆ ಮಾಡುತ್ತಿರುವ ಕ್ಷೇತ್ರದ ನಾಲ್ಕು ಜನ ವ್ಯಕ್ತಿಗಳು ಆದರೆ ಇವುಗಳಿಗೆ ನಾವು ಆಸ್ಪದ ನೀಡದೆ ಮುಂದಿನ ಚುನಾವಣೆಯಲ್ಲಿ ಅತ್ಯಂತ ಬಹುಮತದಿಂದ ಗೆಲ್ಲಿಸಿ ತರುತ್ತೆವೆ ಎಂದು ಹೇಳಿದರು.

ವರದಿ.
ಬಸವರಾಜ ನಂದೆಪ್ಪನವರ
ಮಹಾಲಿಂಗಪುರ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
