ಚುರುಕುಗೊಂಡ ಮಹಾಲಿಂಗಪುರ
ತಾಲೂಕು ಹೋರಾಟ
ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಮಾಡಬೇಕೆಂದು ಕಳೆದ ಎರಡು ಮೂರು ದಶಕಗಳಿಂದ ಬೇಡಿಕೆ ಇದ್ದು ನಿರಂತರ ಹೋರಾಟ ಮಾಡುತ್ತಾ ಬಂದಿರುವುದು ಆದರೆ ಇಲ್ಲಿಯವರೆಗೆ ತಾಲೂಕವನ್ನಾಗಿ ಮಾಡದಿರುವುದು ಜನರ ಬೇಸರಕ್ಕೆ ಕಾರಣವಾಗಿದೆ ಎಂದು ಮಹಾಲಿಂಗಪುರ ತಾಲೂಕು ಹೋರಾಟ ಸಮಿತಿ ಅನಿರ್ಧಿಷ್ಠ ನಿರಂತರ ಮುಷ್ಕರವನ್ನು ಮಹಾಲಿಂಗಪುರ ಆರಾಧ್ಯ ದೈವ ಶ್ರೀ ಗುರು ಮಹಾಲಿಂಗೇಶ್ವರ ದೇವಸ್ಥಾನದಿಂದ ನಗರದ ಪ್ರಮುಖ ಬೀದಿಗಳಲ್ಲಿ ಹಾದು ಕಾಲ್ನಡಿಗೆಯಲ್ಲಿ ಡಾ॥ ಬಿ ಆರ್ ಅಂಬೇಡ್ಕರ್ ವೃತಕ್ಕೆ ಆಗಮಿಸಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು.
ನಂತರ ಅಲ್ಲಿಂದ ತೆರಳಿ ನೇರವಾಗಿ ಮಹಾಲಿಂಗಪುರದ ಪ್ರಮುಖ ವೃತ್ತವಾದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಅನಿರ್ಧಿಷ್ಠ ನಿರಂತರ ಮುಷ್ಕರವನ್ನು ಪ್ರಾರಂಭಿಸಲಾಯಿತು.
ಮುಷ್ಕರವನ್ನು ಉದ್ದೇಶಿಸಿ ಮಾತನಾಡಿದ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಮಹಾಲಿಂಗಪ್ಪ ಕೋಳಿಗುಡ್ಡ ಸುಮಾರು ವರ್ಷಗಳಿಂದ ತಾಲೂಕಿಗಾಗಿ ಹೋರಾಟ ಮಾಡುತ್ತಿದ್ದೆವೆ ಆದರೆ ತಾಲೂಕು ಆಗದೆ ಇರುವ ಕಾರಣ ಇವತ್ತು ಈ ಅನಿರ್ಧಿಷ್ಠ ನಿರಂತರ ಮುಷ್ಕರವನ್ನು ಪ್ರಾರಂಬಿಸಿದ್ದೆವೆ ಸರ್ಕಾರ ಆದಷ್ಟು ಬೇಗ ತಾಲೂಕುವನ್ನಾಗಿ ಮಾಡಬೇಕೆಂದು ಒತ್ತಾಯಿಸಿದರು. ಮಾಜಿ ಎಪಿಎಮ್ ಸಿ ಅಧ್ಯಕ್ಷ ಧರೆಪ್ಪ ಸಾಂಗ್ಲಿಕರ ಮಾತನಾಡಿ ಮಹಾಲಿಂಗಪುರ ಪಟ್ಟಣವು ವಾಣಿಜ್ಯ ಮಾರುಕಟ್ಟೆಯಾಗಿ ಬೆಳದಿದ್ದು ಸುತ್ತ ಹತ್ತಾರು ಹಳ್ಳಿಗಳು ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು ಮಹಾಲಿಂಗಪುರ ನಗರವನ್ನೆ ಅವಂಬಿಸಿರುವುದರಿಂದ ತಾಲೂಕು ಮಾಡಲು ಪಟ್ಟಣ ಸಮರ್ಥವಾಗಿದೆ ಈ ಎಲ್ಲ ಹಳ್ಳಿಗಳನ್ನು ಒಗ್ಗೂಡಿಸಿ ಮಹಾಲಿಂಗಪುರ ಪಟ್ಟಣವನ್ನು ತಾಲೂಕುವಾಗಿ ಮಾಡಬೇಕು ಎಂದು ಆಗ್ರಹಿಸಿದರು. ಮುಷ್ಕರದಲ್ಲಿ ನೇಕಾರರ ರಾಜ್ಯ ನಾಯಕರಾದ ಶಿವಲಿಂಗ ಟೀರಕಿ, ಊರಿನ ಹಿರಿಯರು ಬಸನಗೌಡ ಪಾಟೀಲ್, ಶ್ರೀಶೈಲಪ್ಪ ಉಳ್ಳಾಗಡ್ಡಿ, ಮಹಾಲಿಂಗಪ್ಪ ಸನದಿ, ನಿಂಗಪ್ಪ ಬಾಳಿಕಾಯಿ, ಗಂಗಾಧರ ಮೇಟಿ,ಬಂದು ಪಕಾಲಿ, ಮಹಾಲಿಂಗಪ್ಪ ಜಕ್ಕನ್ನವರ, ಅನೀಲ ಮಮದಾಪುರ, ಪಟ್ಟಣದ ಅಂಗಡಿ ವ್ಯಾಪಾರಸ್ಥರು, ಮಹಾಲಿಂಗಪುರ ಹಾಗೂ ಸತ್ತಮುತ್ತಲಿನ ಹಳ್ಳಿಗಳ ಜನರು ಅನಿರ್ಧಿಷ್ಠ ನಿರಂತರ ಮುಷ್ಕರ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ವರದಿ
ಬಸವರಾಜ ನಂದೆಪ್ಪನವರ
ಮಹಾಲಿಂಗಪುರ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
