ಗೋರೆಬಾಳ ಕೆರೆ ವೀಕ್ಷಣೆ ಮಾಡಿದ ಮಾಜಿ ಸಂಸದ ಕೆ. ವಿರುಪಾಕ್ಷಪ್ಪ.
ಸಿಂಧನೂರು : ತಾಲೂಕಿನ ಗೋರೆಬಾಳ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಕೇಂದ್ರ ಸರ್ಕಾರದ ಸಂಸದರ ಅನುದಾನದ ಜಲ ಜೀವನ ಮಿಷನ್ ಯೋಜನೆ ಅಡಿಯಲ್ಲಿ ಕುಡಿಯುವ ನೀರಿನ ಕೆರೆ ಅಂದಾಜು 1 ಕೋಟಿ 60 ಲಕ್ಷ ರೂಪಾಯಿಗಳಲ್ಲಿ ಮಂಜೂರಾಗಿದ್ದು, ಕೆರೆ ಕಾಮಗಾರಿ ಮುಗಿದು ಕೆರೆಗೆ ನೀರು ತುಂಬಿಸಿದ ಕೂಡಲೇ ಹೊಡೆದು ಹೋಗಿದೆ.ಕಾರಣ ಕೆರೆಯು ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿದ್ದರ ಪರಿಣಾಮವಾಗಿ ಹೊಡೆದಿದೆ ಎಂದು ಗ್ರಾಮಸ್ಥರು ಹಾಗೂ ಗ್ರಾ. ಪಂಚಾಯತಿ ಸದಸ್ಯರು ಆರೋಪ ಮಾಡಿದ್ದರ ಹಿನ್ನೆಲೆ ನಮ್ಮ ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಆಧಾರದ ಮೇಲೆ , ಮಾಜಿ ಸಂಸದರಾದ ಕೆ. ವಿರೂಪಾಕ್ಷಪ್ಪ ರವರು ಗೋರೆಬಾಳ ಗ್ರಾಮದ ಕುಡಿಯುವ ನೀರಿನ ಕೆರೆ ಸ್ಥಳ ಬೇಟಿ ನೀಡಿ ಪರಿಶೀಲನೆ ನಡೆಸಿದಾಗ ಕಾಮಗಾರಿ
ಕಳಪೆಯಿಂದ ಕೂಡಿದ್ದು ಅಧಿಕಾರಗಳ ಬೇಜಾಬ್ದಾರಿ ಎದ್ದು ಕಾಣುತ್ತಿದೆ ಎಂದರು.
ಕೆರೆ ಸುತ್ತಲು ವೀಕ್ಷಣೆ ಮಾಡಿ ಸಂಪೂರ್ಣ ಬಿರುಕು ಬಿಟ್ಟಿದನ್ನು ನೋಡಿ ಮಾತನಾಡಿದ ಅವರು ಈ ಕಾಮಗಾರಿಯ ಎಸ್ಟಿಮೇಂಟ ತರಿಸಿ ಅಧಿಕಾರಿಗಳ ಜೊತೆ ಮಾಹಿತಿ ಪಡೆದು ಗುರುವಾರದಂದು ಮತ್ತೊಮ್ಮೆ ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಬೇಟಿ ನೀಡುವದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂ. ಸದಸ್ಯರಾದ ಶಿವನಗೌಡ ಗೊರೆಬಾಳ, ಗ್ರಾ. ಪಂಚಾಯತಿ ಸದಸ್ಯರುಗಳಾದ ಲಕ್ಷ್ಮಣರಾವ್, ಮಹದೇವಪ್ಪ,ವಿಜಯಕುಮಾರ ಭಂಡಾರಿ, ಸಂತೋಷಗೌಡ, ರಾಮಕೃಷ್ಣ ,ರಾಘವೇಂದ್ರ ಭೀಮರಾಜಕ್ಯಾಂಪ್,ಪಕೀರಪ್ಪ,ಅಶೋಕ,ಗಂಗಾಧರ ಹೂಗಾರ , ಹಂಸರಾಜ,ಸಿದ್ದು ಮಾಡಶಿರವಾರ, ಸಿದ್ದು ಹೂಗಾರ,ಹನುಮಂತ ಹಿರೇಕುರುಬರ. ಯಲ್ಲಪ್ಪ ಮಲ್ಲದಗುಡ್ಡ,ಇತರರಿದ್ದರು..
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
