;

ನ್ಯಾಯಾಲಯದ ಆವರಣದಲ್ಲಿ, ಆರ್.ಟಿ.ಇ:ಕಾನೂನು ತಿಳುವಳಿಕೆ ಕಾರ್ಯಗಾರ…!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ನ್ಯಾಯಾಲಯದ ಆವರಣದಲ್ಲಿ, ಕಡ್ಡಾಯ ಶಿಕ್ಷಣಾ ಕಾಯ್ದೆ ಕುರಿತು ಕಾನೂನು ಅರಿವು ಕಾರ್ಯಕ್ರಮ ಜರುಗಿತು. ಕಾನೂನು ಸೇವಾ ಸಮಿತಿ,ಕೂಡ್ಲಿಗಿ ವಕೀಲರ ಸಂಘ ಹಾಗೂ ಅಂಗನವಾಡಿ ಕಾರ್ಯಕರ್ತರ ಸಹಯೋಗದಲ್ಲಿ ಕಾರ್ಯಕ್ರಮ ಜರುಗಿತು.ಹಿರಿಯ ಶ್ರೇಣಿ ನ್ಯಾಯಾಧೀಶರಾದ ಕೆ.ಎ.ನಾಗೇಶ ರವರು ಕಾರ್ಯಕ್ರಮ ಉದ್ಘಾಟಿಸಿದರು,ಶಿಕ್ಷಣ ಮೂಲಭೂತ ಹಕ್ಕಾಗಿದ್ದು ಪ್ರತಿಯೊಬ್ಬರೂ ಹೊಂದಬೇಕಿದೆ ಎಂದರು. ಪ್ಯಾನಲ್ ವಕೀಲರಾದ ಟಿ.ಮಲ್ಲಿಕಾರ್ಜುನ ರವರು,ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಕುರಿತು ಉಪನ್ಯಾಸ ಮಾಡಿದರು. ಕಿರಿಯ ಶ್ರೇಣಿ ನ್ಯಾಯಾಧೀಶರಾದ ಮುರುಗೇಂದ್ರ ತುಬಾಕೆ ರವರು ಮಾತನಾಡಿದರು. ಸರ್ಕಾರಿ ಸಹಾಕ ಅಭಿಯೋಜಕರಾದ ವಸುವಡ್ರು ಅಣ್ಣೆಶ ರವರು,ವಕೀಲರ ಸಂಘದ ಅಧ್ಯಕ್ಷರಾದ ಜಿ.ಹೊನ್ನೂರಪ್ಪ, ಸರ್ಕಾರಿ ಕಾರ್ಯದರ್ಶಿ ಬಿ.ಸಿದ್ದಲಿಂಗಪ್ಪ ವೇದಿಕೆಯಲ್ಲಿದ್ದರು. ಮಹಿಳಾ ವಕೀಲರಾದ ಕೆ.ಹೆಚ್.ಎಮ್.ಶೈಲಜಾ ಸ್ವಾಗತಿಸಿ ನಿರೂಪಿಸಿ ವಂದಿಸಿದರು. ಪಟ್ಟಣ ಸೇರಿದಂತೆ ತಾಲೂಕಿನ ವಿವಿದೆಡೆಗಳಿಂದ ಬಂದಿದ್ದ,ಅಂಗಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.ನ್ಯಾಯಾಂಗ ಇಲ‍ಖಾ ಸಿಬ್ಬಂದಿ,ಕಾನೂನು ಸೇವೆಗಳ ಸಮಿತಿ ಸಿಬ್ಬಂದಿ ಉಪಸ್ಥಿತರಿದ್ದರು…

 

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;