;

ಗೃಹಮಂತ್ರಿ ಆರಗ ಜ್ಞಾನೇಂದ್ರ ರಾಜಿನಾಮೆಗೆ ದಲಿತ ಅಲ್ಪಸಂಖ್ಯಾತ ಶೋಷಿತ ಸಮುದಾಯಗಳ ಒಕ್ಕೂಟ ಒತ್ತಾಯ !!!

ಗೃಹಮಂತ್ರಿ ಆರಗ ಜ್ಞಾನೇಂದ್ರ ರಾಜಿನಾಮೆಗೆ ದಲಿತ ಅಲ್ಪಸಂಖ್ಯಾತ ಶೋಷಿತ ಸಮುದಾಯಗಳ ಒಕ್ಕೂಟ ಒತ್ತಾಯ !

ಸಿಂಧನೂರು : ಮುಸ್ಲಿಂರ ಅಂಗಡಿಗಳ ದ್ವಂಸ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ನೈತಿಕ ಹೊಣೆ ಹೊತ್ತು ಗೃಹ ಸಚಿವರಾದ ಆರಗ ಜ್ಞಾನೇಂದ್ರರವರು ರಾಜೀನಾಮೆಯನ್ನು ನೀಡಲು ದಲಿತ ಅಲ್ಪಸಂಖ್ಯಾತ ಶೋಷಿತ ಸಮುದಾಯಗಳ ಒಕ್ಕೂಟ ಆಗ್ರಹಿಸುತ್ತದೆ .

ಧಾರವಾಡದ ನುಗ್ಗಿಕೇರಿ ಆಂಜನೇಯ್ಯ ದೇವಸ್ಥಾನದಲ್ಲಿ ಹಣ್ಣಿನ ವ್ಯಾಪಾರ ಮಾಡುತಿರುವವರ ಮೇಲೆ ನಿನ್ನೆ ದಿನ ಏಕಾಏಕೀಯವಾಗಿ ಶ್ರೀರಾಮಸೇನೆಯ ಗೂಂಡಾ ಕಾರ್ಯಕರ್ತರು 8-10 ಜನ ನಭೀಸಾಬ ಎಂಬ ಮುಸ್ಲಿಂ ಅಂಗಡಿಗೆ ನುಗ್ಗಿ, ಅಂಗಡಿ ಮತ್ತು ಕಲ್ಲಂಗಡಿ ಹಣ್ಣುಗಳು ಸೇರಿದಂತೆ ಇತರೆ ಹಣ್ಣುಗಳನ್ನು ದ್ವಂಸ ಮಾಡಿದ ಹೇಯ ಕೃತ್ಯವನ್ನು ದಲಿತ ಅಲ್ಪಸಂಖ್ಯಾತ ಶೋಷಿತ ಸಮುದಾಯಗಳ ಒಕ್ಕೂಟ ಸಿಂಧನೂರು ಉಗ್ರವಾಗಿ ಖಂಡಿಸುತ್ತದೆ.

ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ಹಿಡಿದ ಕೋಮುವಾದಿ ಬಿಜೆಪಿ ಸರಕಾರ ದಿನಕ್ಕೊಂದು ರೀತಿಯಲ್ಲಿ ಕೋಮುದ್ವೇಷದ ಬೆಂಕಿಯ ಜಾಲವನ್ನು ಸಂಘಪರಿವಾರದ ಮೂಲಕ ವಿಷ ಹರಡಿ, ಹಿಂದೂ- ಮುಸ್ಲಿಂರ ಭಾವೈಕ್ಯತೆಗೆ ದಕ್ಕೆ ತರುತ್ತಿರುವುದು ನಿರಂತರವಾಗಿದೆ. ಇದರ ಹಿಂದೆ ಬಿಜೆಪಿಯ ನೇರ ಕೈವಾಡವಿದ್ದು, ಕೋಮು ಸಾಮರಸ್ಯವನ್ನು ಹಾಳುಮಾಡಿ ಮನುವಾದವನ್ನು ಬಿತ್ತಿ, ಬಹು ಧರ್ಮಿಯರು, ಬಹು ಭಾಷಿಕರು, ಸರ್ವ ಜನಾಂಗದವರು ಸಹಬಾಳ್ವೆ ನಡೆಸುತ್ತಿದ್ದ ಭಾರತದಲ್ಲಿ ಬೆಂಕಿ ಹಚ್ಚುವ ಕೆಲಸ ಉದ್ದೇಶ ಪೂರ್ವಕವಾಗಿ ಮಾಡುತ್ತಿದೆ. ಸಂವಿಧಾನ ಕ್ಷಣ-ಕ್ಷಣಕ್ಕೂ ಕಗ್ಗೊಲೆಯಾಗುತ್ತಿದೆ. ದೇಶದ ಸಾರ್ವಭೌಮತ್ವ ಪರದೇಶಿಯಾಗುತ್ತಿದೆ. ಸಾಮಾಜೀಕ ನ್ಯಾಯ ಬತ್ತಲೆಯಾಗುತ್ತಿದೆ. ಶಾಂತಿಯ ತೋಟ-ಮುಳ್ಳುಗಿಡಗಳ ತೋಟವಾಗುತ್ತಿದೆ. ಕೋವಿಡ್ ಲಾಕ್‌ಡೌನ್ ಆಗಿ ಆರ್ಥಿಕ ಸಂಕಟವನ್ನು ಈ ಮೊದಲೇ ಎದುರಿಸುತ್ತಿದ್ದ ಜನ ಸಾಮಾನ್ಯರು ಹಾಗೂ ವ್ಯಾಪಾರಿಸ್ಥರು, ಶ್ರೀರಾಮ ಸೇನೆ, ವಿಶ್ವ ಹಿಂದೂ ಪರಿಷತ್‌ನಂತಹ ಕೋಮುವಾದಿ, ಭಯೋತ್ಪಾದಕ ಸಂಘಟನೆಗಳಿಂದ ಹಿಂದೂ- ಮುಸ್ಲಿಂ ಎಂಬ ಕೋಮು ಬಾವನೆಗಳಿಗೆ ಸಿಲುಕಿ ಅವರ ಜೀವನಗಳು ಸರಿಪಡಿಸಲಾಗದಷ್ಟು ಸಂಕಷ್ಟಕ್ಕೆ ಸಿಲುಕುತ್ತಿವೆ. ದಿನನಿತ್ಯ ಗಗನಕ್ಕೇರುತ್ತಿರುವ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ, ತೈಲ ದರಗಳ ಏರಿಕೆಯಿಂದ ಜನರ ಜೀವನದ ಸ್ಥಿತಿ, ಬಾಣಲೆಯಿಂದ ಬೆಂಕಿಗೆ ಬಿಳುವಂತಾಗಿದೆ. ದೇಶದ ಜನರು ಎದುರಿಸುತ್ತಿರುವ ಸಂಕಷ್ಟದ ಸ್ಥಿತಿಯ ಬಗ್ಗೆ ಪರಿಹರಿಸುವ ಕುರಿತು ಮಾತನಾಡದೇ, ಮೌನವಹಿಸಿದ ಕೇಂದ್ರದ ಒಕ್ಕೂಟ ಸರಕಾರದ, ಮೋದಿ, ರಾಜ್ಯದ ಬೊಮ್ಮಾಯಿ ಸರಕಾರ ಕೋಮುವಾದಿ ಘಟನೆಗಳಿಗೆ ಕಾನೂನು ಕಠಿಣ ಕ್ರಮ ತೆಗೆದುಕೊಳ್ಳದೆ ಸಂಘಪರಿವಾರದ ಪುಂಡರನ್ನು ಮಟ್ಟ ಹಾಕದೇ, ಮೌನ ವಹಿಸಿರುವುದು ನೋಡಿದರೆ, ನೇರವಾಗಿ ಜನತೆಯ ಸಾಮರಸ್ಯವನ್ನು ಕೆಡಿಸುವಂತ ಸಂವಿಧಾನ ವಿರೋಧಿ ಕೆಲಸಕ್ಕೆ ಹಾಗೂ ಸಂಘಪರಿವಾರಕ್ಕೆ ನೇರವಾಗಿ ಬೆಂಬಲಿಸುವಂತಿದೆ ಸರಕಾರದ ಕ್ರಮಗಳು.ಕೂಡಲೇ ಸರಕಾರ ಧಾರವಾಡ ಶ್ರೀರಾಮ ಸೇನೆಯ ಕಾರ್ಯಕರ್ತರು ಮತ್ತು ಸಂಘಪರಿವಾರ ನಡೆಸಿದಂತ ಗೂಂಡಾ ಸಂಸ್ಕೃತಿ ಒಳಗೊಂಡಂತೆ ರಾಜ್ಯದಲ್ಲಿ ಇದುವರೆಗೆ ನಡೆದಿರುವಂತಹ ಮುಸ್ಲಿಂ ವಿರೋಧಿ, ದಲಿತ ವಿರೋಧಿ, ಸಾಮಾಜೀಕವಾಗಿ ಬಹಿಷ್ಕರಿಸುವಂತ, ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರವನ್ನು ಕೂಡಲೇ ವಿಸರ್ಜಿಸಿ, ರಾಷ್ಟ್ರಪತಿ ಆಳ್ವಿಕೆಯನ್ನು ತರಬೇಕೆಂದು ಒಕ್ಕೂಟದ ಸಂಚಾಲಕ ಎಂ.ಗಂಗಾಧರ ಒತ್ತಾಯಿಸಿದರು…

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;