;

ಪರಸ್ಪರ ಹೊಂದಾಣಿಕೆಯಿಂದ ನಡೆದಾಗ ಮಾತ್ರ ಸುಖ ಸಂಸಾರ ಸಾದ್ಯ- ಕೆ.ವಿರುಪಾಕ್ಷಪ್ಪ…!!!

ಪರಸ್ಪರ ಹೊಂದಾಣಿಕೆಯಿಂದ ನಡೆದಾಗ ಮಾತ್ರ ಸುಖ ಸಂಸಾರ ಸಾದ್ಯ- ಕೆ.ವಿರುಪಾಕ್ಷಪ್ಪ.

ಸಿಂಧನೂರು ಏ.11 ನೂತನ ವಧು – ವರರು ದಂಪತಿಗಳಾಗಿ ಕುಟುಂಬದ ದೋಣಿ ಸಾಗಿಸುವಾಗ ಸಮಾನ ಮನಸ್ಕರಾಗಿ ಪರಸ್ಪರ ಹೊಂದಾಣಿಕೆಯಿಂದ ನಡೆದಾಗ ಮಾತ್ರ ಸುಖ ಸಂಸಾರ ಸಾಧ್ಯ ಎಂದು ಮಾಜಿ ಸಂಸದರು ಹಾಗೂ ಹಾಲುಮತ ಸಮಾಜದ ಹಿರಿಯರಾದ ಕೆ.ವಿರುಪಾಕ್ಷಪ್ಪ ಹೇಳಿದರು.

ನಗರದ ಸುಕಾಲಪೇಟೆಯ ನಂಜುಂಡೇಶ್ವರ ಗುರುವಿನ್ ಮಠ ಹಾಗೂ ತಾಲ್ಲೂಕು ಕುರುಬರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದ ಅವರು ಸತತವಾಗಿ 30- 35 ವರ್ಷಗಳಿಂದ ಸಾಮೂಹಿಕ ವಿವಾಹಗಳನ್ನು ಮಾಡುತ್ತಾ ಬಂದಿದ್ದು ಈಗ 21ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮದುವೆ ಕಡಿಮೆಯಾಗಲು ಕಾರಣ ಜನರಲ್ಲಿ ಸಾಮೂಹಿಕ ವಿವಾಹವಾಗುವ ಇಚ್ಚೆ ಕಡಿಮೆ ಯಾಗಿದೆಯೋ ಅಥವಾ ಆ ವಯಸ್ಸಿನವರು ಇಲ್ಲವೊ ತಿಳಿಯದಾಗಿದೆ ಹಾಗೂ ಇಲ್ಲಿ ಯಾಗುವ ಮದುವೆಗಳಿಗೆ ಹಿರಿಯರ ,ಸ್ವಾಮಿಗಳ ಆಶಿರ್ವಾದ ಆಗುತ್ತದೆ ಮತ್ತು ಹುಟ್ಟಿದ ಮನೆ ಬಿಟ್ಟು ಗಂಡನ ಮನೆಗೆ ಮದುವೆಯಾಗಿ ಹೋಗುವ ಪ್ರತಿ ಹೆಣ್ಣು ಮಕ್ಕಳನ್ನು ಮನೆ ಮಗಳಂತೆ ನೋಡಿಕೊಳ್ಳಬೇಕು ಆಗ ಆ ಮನೆಯಲ್ಲಿ ದೀಪ ಬೆಳಗುತ್ತದೆಂದು ಎಂದರು.

ಸಾಮೂಹಿಕ ವಿವಾಹಗಳನ್ನು ಮಾಡುವಂತಹ ಕೆಲಸ ಕುರುಬರ ಸಮಾಜದಿಂದ ಆಗಿದೆ, ನಿಜಕ್ಕೂ ಅವರ ಕಾರ್ಯ ಶ್ಲಾಘನೀಯ. ದುಂದು ವೆಚ್ಚಕ್ಕೆ ಕಡಿವಾಣ ಹಾಕುವ ಮತ್ತು ಬಡವರನ್ನು ಸಾಲದಿಂದ ವಿಮುಕ್ತಿ ಗೊಳಿಸುವ ಕೆಲಸ ಇದಾಗಿದೆ. ತಂದೆ ತಾಯಿಗಳಂತೆ ಅತ್ತೆ ಮಾವ ನವರನ್ನು ನೊಡಿಕೊಳ್ಳಬೇಕೆಂದು ಮಸ್ಕಿ ಕ್ಷೇತ್ರದ ಶಾಸಕರಾದ ಬಸನಗೌಡ ತುರವಿಹಾಳ ತಿಳಿಸಿದರು.

ಧರ್ಮದಿಂದ ದುಡಿದು ತಂದಿರುವಂಹ ಒಂದು ಬನ್ನಿ ಪತ್ರಿ ಆದರೂ ದೇವರಿಗೆ ಸಮರ್ಪಣೆ ಆಗುತ್ತೆ ಆದರೆ ಅನ್ಯಾಯದ್ದು ಬಂಗಾರ ,ಬೆಳ್ಳಿ ಏನೆ ಕೊಟ್ಟರು ದೇವರಿಗೆ ಅರ್ಪಣೆ ಯಾಗುವದಿಲ್ಲ ಎಂದು ಮಾಜಿ ಜಿ.ಪ ಸದಸ್ಯರಾದ ಶಿವನಗೌಡ ಗೋರೆಬಾಳ ಹೇಳಿದರು.

ಕಾರ್ಯಕ್ರಮದ ದಿವ್ಯಾ ಸಾನಿದ್ಯವನ್ನು ಹಾಲುಮತ ಸಮಾಜದ ತಿಂಥಣಿ ಬ್ರಿಡ್ಜ್‌ ಶಾಖಾ ಮಠದ ಸಿದ್ದರಾಮನಂದ ಪುರಿ ಶ್ರೀಗಳು, ಸೋಮನಾಥ ಶಿವಾಚಾರ್ಯ, ಚಿದಾನಂದಯ್ಯ ಗುರುವಿನ್, ನಂಜುಂಡಯ್ಯ ಗುರುವಿನ್ , ಮಾದಯ್ಯ ಗುರುವಿನ್ , ವಹಿಸಿದ್ದರು.

ಈ ಸಂದರ್ಭದಲ್ಲಿ ರಮೇಶಪ್ಪ ಸಾಹುಕಾರ ದಿದ್ದಗಿ ,ಜಿಲ್ಲಾ‌ ಕುರುಬರ ಸಂಘದ ಅಧ್ಯಕ್ಷರಾದ ಬಸವಂತಪ್ಪ ,ನಗರಸಭೆ ಅದ್ಯಕ್ಷರಾದ ಮಲ್ಲಿಕಾರ್ಜುನ ಪಾಟೀಲ ,ನಗರ ಯೋಜನಾ ಪ್ರಾಧಿಕಾರ ಅದ್ಯಕ್ಷರಾದ ಮದ್ವಚಾರ್ಯ ಅಚಾರ್ಯ, ಕೆ
ಮರಿಯಪ್ಪ , ಪಿ.ಎಲ್.ಡಿ ಬ್ಯಾಂಕ್ ಅದ್ಯಕ್ಷರಾದ ದೊಡ್ಡ ಬಸವರಾಜ , ನಲ್ಲಾ ವೆಂಕಟೇಶ್ವರರಾವ್ , ಬಾಬರ್ ಪಾಷಾ ವಕೀಲರು ,ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ರಾಜ್ಯ ಕಾರ್ಯದರ್ಶಿ ಬಸನಗೌಡ ಬಾದರ್ಲಿ , ಜೆಡಿಎಸ್ ಮುಖಂಡರಾದ ಅಭಿಷೇಕ‌ ನಾಡಗೌಡ ,ಪೂಜಪ್ಪ ಪೂಜಾರಿ,ವೆಂಕೋಬ ನಾಯಕ , ಸುರೇಶ ಹಚ್ಚೊಳ್ಳಿ, ನಾಗರಾಜ ಬಾದರ್ಲಿ, ಇನ್ನಿತರರು ಉಪಸ್ಥಿತರಿದ್ದರು…

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;