;

ಶಾಸಕ ವೆಂಕಟರಾವ ಗೌಡರರಿಂದ ಜನತಾ ಜಲಧಾರೆ ರಥಯಾತ್ರೆ…!!!

ಶಾಸಕ ವೆಂಕಟರಾವ ಗೌಡರರಿಂದ ಜನತಾ ಜಲಧಾರೆ ರಥಯಾತ್ರೆ :ಜನತಾ

ಸಿಂಧನೂರು ಏ.11 ರಾಜ್ಯದಲ್ಲಿನ 15 ನದಿಗಳ ನೀರಿನ ಸದ್ಭಳಕೆ ಕುರಿತು ರಾಜ್ಯದ ಪ್ರತಿ ಕ್ಷೇತ್ರದಲ್ಲಿ‌ ಜನತಾ ಜಲಧಾರೆ ರಥಯಾತ್ರೆ ಪ್ರಾರಂಭವಾಗಿದ್ದು, ಪಕ್ಷದ ಮುಖಂಡರು, ಕಾರ್ಯಕರ್ತರು ಯಶಸ್ವಿಗೊಳಿಸೋಣ ಎಂದು ಶಾಸಕ ವೆಂಕಟರಾವ್ ನಾಡಗೌಡ ಹೇಳಿದರು.

ನಗರದ ವಿವೇರಾ ಗ್ರಾಂಡ್ ಹೋಟೆಲ್ ನಲ್ಲಿ ಜಾತ್ಯಾತೀತ ಜನತಾದಳ ಪಕ್ಷದ ವಿವಿಧ ಮುಖಂಡರು, ಕಾರ್ಯಕರ್ತರ ನ್ನೊಳಗೊಂಡು ಕರೆದ ಜನತಾ ಜಲಧಾರೆ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಸಂಪೂರ್ಣ ಸಾಲ ಮನ್ನಾ , ಜೆಡಿಎಸ್ ಪಕ್ಷದ ಸಂಪೂರ್ಣ ಬಹುಮತ ಬಂದರೆ ಈಗ 2023 ರ ಚುನಾವಣೆಯಲ್ಲಿ ರಾಜ್ಯದಲ್ಲಿನ 15 ಪ್ರಮುಖ ನದಿಗಳಿಂದ ಅನಾವಶ್ಯಕವಾಗಿ ಹರಿದು ಹೋಗುವ ನೀರನ್ನು ಜನರ ಅನುಕೂಲಕ್ಕಾಗಿ ಕುಡಿಯಲು ,ಕೃಷಿ ಮಾಡಲು ಸದ್ಭಳಕೆ ಮಾಡಿಕೊಡುತ್ತೆವೆ ಎಂಬ ಗುರಿಯನ್ನು ಇಟ್ಟುಕೊಂಡು ಈ ರಥಯಾತ್ರೆ ರಾಜ್ಯದಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಸಂಚಾರ ಮಾಡುತ್ತಿದ್ದು ಅದರಂತೆ ನಮ್ಮ ಕ್ಷೇತ್ರಕ್ಕೆ ಕೂಡ ಬರುತ್ತದೆ ಮೊದಲು ,ಕೊಪ್ಪಳ, ಮಸ್ಕಿ ನಂತರ ಏ 17 ಅಥವಾ 18 ರಂದು ನಮ್ಮ ಕ್ಷೇತ್ರಕ್ಕೆ ಬರುತ್ತಿದ್ದು ಕ್ಷೇತ್ರದಾದ್ಯಂತ ಮೂರು ಹಂತದ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು ಮತ್ತು ಪಕ್ಷದ ವಿವಿಧ ಘಟಕಗಳ ಅದ್ಯಕ್ಷರು ,ಯುವ ಮುಖಂಡರು ಇದರ ಹೆಚ್ಚಿನ ಜವಬ್ದಾರಿ ವಹಿಸಿಕೊಳ್ಳಬೇಕೆಂದರು.

ಪಕ್ಷದ ರಾಷ್ಟ್ರೀಯ ಅದ್ಯಕ್ಷರಾದ ಹೆಚ್.ಡಿ ದೇವೆಗೌಡರು ಮುಖ್ಯಮಂತ್ರಿ ,ಪ್ರಧಾನ ಮಂತ್ರಿ ಗಳಾಗಿ ಹಾಗೂ ಹೆಚ್.ಡಿ ಕುಮಾರ ಸ್ವಾಮಿ ಯವರು ಎರಡು ಬಾರಿ ಮುಖ್ಯಮಂತ್ರಿ ಯಾಗಿ ಅವರ ಸಾಧನೇಗಳೇನು ಎಂಬುವುದನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡಲಾಗುವುದು. ಪಕ್ಷದ ರಾಷ್ಟ್ರೀಯ ಅದ್ಯಕ್ಷರಾದ ಹೆಚ್.ಡಿ ದೇವೆಗೌಡರು ಪ್ರಧಾನಿಯಾಗಿದ್ದಾಗ ಬೇಡ ಸಮಾಜವನ್ನು ಎಸ್.ಟಿ ಮೀಸಲಾತಿಗ ಸೇರಿಸಿದ್ದಾರೆ , ಮಹಿಳಾ ಮೀಸಲಾತಿಯನ್ನು ನೀಡಿದ್ದು ನಮ್ಮ ಪಕ್ಷದ ಸಾಧನೆ , ಅಲ್ಪಸಂಖ್ಯಾತರಿಗೆ ಶೇ 4 ರಷ್ಟು ಮೀಸಲಾತಿ ನೀಡಿದೆ ಜಮ್ಮು ಕಾಶ್ಮೀರ ರಾಜ್ಯಕ್ಕೆ ಬೇಟಿ ನೀಡಿದ ಮೊದಲ ಪ್ರಧಾನಿ ಮತ್ತು ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿನ ಸಮಸ್ಯೆಗಳನ್ನು ಯಾವುದೇ ಪ್ರಾಣ ಹಾನಿಯಾಗದಂತೆ ಪರಿಹಾರ ಕೊಂಡಿದ್ದಾರೆ , ಪಂಜಾಬ್ ರಾಜ್ಯದಲ್ಲಿ ಇವತ್ತಿಗೂ ಭತ್ತದ ತಳಿಗೆ ದೇವೆಗೌಡರ ಹೆಸರನ್ನು ಇಡಲಾಗಿದೆ ಅಲ್ಲಿನ ಜನ ಹೇಳತಾರೆ ನಿಜವಾದ ರೈತರ ಕಂಬನಿ ಹೊರೆಸುವವರೆಂದರೆ ಅದು ದೇವೆಗೌಡರು ಎನ್ನುತ್ತಾರೆಂದು ಶಾಸಕರು ಮಾತನಾಡಿದರು.

ಈ ಸಂದರ್ಭದಲ್ಲಿ ಪಕ್ಷದ ತಾಲ್ಲೂಕು ಅದ್ಯಕ್ಷರಾದ ಬಸವರಾಜ ನಾಡಗೌಡ, ಪಕ್ಷದ ಮುಖಂಡರಾದ ಎಂ.ಡಿ ನದಿಮುಲ್ಲಾ ,ಅಶೋಕ ಗೌಡ ಗದ್ರಟಗಿ ,ಜಿ.ಸತ್ಯನಾರಾಯಣ ,ಧರ್ಮನಗೌಡ, ನಗರಸಭೆ ಸದಸ್ಯರಾದ ಎಸ್.ಪಿ ಟೇಲರ್, ಕೆ.ಹನುಮೇಶ ಹಾಗೂ ದೇವೇಂದ್ರಗೌಡ,ಗುರು ,ಲಕ್ಷ್ಮಣ್ ಬೋವಿ ,ಶಿವನಗೌಡ ಗೋರೆಬಾಳ ಸೇರಿದಂತೆ ಉಪಸ್ಥಿತರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;