;

ತಾಲೂಕು ಪಂಚಾಯತ್ ಸಭಾಂಗಣದಲ್ಲಿ ವಿಶ್ವ ಕ್ಷಯರೋಗ ದಿನಾಚರಣೆ…!!!

ತಾಲೂಕು ಪಂಚಾಯತ್ ಸಭಾಂಗಣದಲ್ಲಿ ವಿಶ್ವ ಕ್ಷಯರೋಗ ದಿನಾಚರಣೆ.

ಸಿಂಧನೂರು : ಇಂದು ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ವಿಶ್ವ ಕ್ಷಯರೋಗ ದಿನಾಚರಣೆ ಯನ್ನು ಆಚರಿಸಲಾಯಿತು. ಇದರ ಪ್ರಯುಕ್ತ ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನ ಕಾರ್ಯಕ್ರಮದಲ್ಲಿ ಉತ್ತಮವಾಗಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ನೆನಪಿನ ಕಾಣಿಕೆ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮವನ್ನು ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ. ಅಯ್ಯನಗೌಡ ಉದ್ಘಾಟನೆ ಮಾಡಿದರು.

ಈ ಸಂದರ್ಭದಲ್ಲಿ ಸನ್ಮಾನಕ್ಕೆ ಆಯ್ಕೆಯಾದ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಅಭಿನಂದನೆಗಳನ್ನು ಸಲ್ಲಿಸಿ ತಾಲೂಕಿನ ಎಲ್ಲಾ ಸಿಬ್ಬಂದಿ ವರ್ಗದವರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ 2025ರ ಒಳಗಡೆ ಕ್ಷಯ ಮುಕ್ತ ರಾಯಚೂರು ಮಾಡೋಣ ಎಂದು ಹೇಳಿದರು.

ಜಿಲ್ಲೆಯಿಂದ ಆಗಮಿಸಿದಂತಹ ಪ್ರವೀಣ್ ಕುಮಾರ್ ಹಿರೇಮಠ ಡಿಪಿಎಸ್ ಇವರು ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಲ್ಲಿ ಎಲ್ಲರೂ ಉತ್ತಮ ಸೇವೆ ಸಲ್ಲಿಸಿ ಕ್ಷಯ ಮುಕ್ತ ತಾಲೂಕು ಮಾಡೋಣ ಎಂದು ಹೇಳಿದರು.

ತಾಲೂಕು ಕ್ಷಯ ರೋಗ ಚಿಕಿತ್ಸಾ ಮೇಲ್ವಿಚಾರಕರಾದ ಅಮೀರ್ ನಿರೂಪಿಸಿದರು.

ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣ ಅಧಿಕಾರಿಗಳಾದ ರಂಗನಾಥ ಗುಡಿ ಸಂಗನಗೌಡ ಮಾಲಿ ಪಾಟೀಲ್ ಮತ್ತು ತಾಲೂಕು ಕ್ಷಯರೋಗ ಘಟಕದ ಮೇಲ್ವಿಚಾರಕರಾದ ಯಮನೂರು,ಅಬ್ದುಲ್ ಹಮೀದ್,ನವೀನ್ ಕುಮಾರ ಇದ್ದರು.

ಡಾ.ನಾಗರಾಜ ಕೆವಿ, ಡಾ.ರಮೇಶ,ಡಾ.ಬಸವರಾಜ ಡಾ.ವೀರೇಶ ಹಾಗೂ ಖಾಸಗಿ ವೈದ್ಯರಾದ ಶ್ರೀನಿವಾಸ ಚಿತ್ತೂರಿ, ಶ್ರೀಮತಿ ಗೀತಾ ಹಿರೇಮಠ, ಬಿ.ಎಚ್.ಈ ಓ, ಹಾಗೂ ಪ್ರಜಾ ಪ್ರಸಿದ್ದ ವರದಿಗಾರರಾದ ಶಿವರಾಜ, ಶಂಕ್ರಪ್ಪ, ಮಂಜುಳಾ, ನಬೀನಾ, ಅಜೀಜ್, ಇನ್ನುಳಿದ ಸಿಬ್ಬಂದಿ ವರ್ಗದವರು ಸನ್ಮಾನವನ್ನು ಸ್ವೀಕರಿಸಿದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;