ಕೂಡ್ಲಿಗಿ:ಪಟ್ಟಣದಲ್ಲಿ ಯೂಜುಡಿ ಯೂಜ್ಲೆಸ್.!?-ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ,ಒಳ ಚರಂಡಿ ಕಾಮಗಾರಿ ಅಸ್ಥವ್ಯೆಸ್ಥವಾಗಿದೆ ಎಂಬ ದೂರಿದೆ. ಪರಿಣಾಮ ಒಳಚರಂಡಿ ಕಾಮಗಾರಿಯಿಂದ ಪಟ್ಟಣದಲ್ಲಿನ ಸಾರ್ವಜನಿಕರು ನೊಂದಿದ್ದಾರೆ,ಒಳಚರಂಡಿಯೊಂದಾಗಿ ಅನುಕೂಲಕ್ಕಿಂತ ಅನಾನುಕೂಲವನ್ನೇ ಅನುಭವಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಗಲ್ಲಿ ಗಲ್ಲಿಗಳಲ್ಲಿನ ರಸ್ತೆಗಳು ತಗ್ಗು ಗುಂಡಿಗಳು ನಿರ್ಮಾಣವಾಗಿದ್ದು, ರಸ್ತೆಗಳು ದುರಸ್ಥೆ ಕಾಣದೇ ವಾಹನ ಮಾತ್ರವಲ್ಲ ಪಾದಾಚಾರಿಗಳೂ ಸಹ ಸಂಚರಿಸಲು ಹರಸಾಹಸ ಮಾಡುವಂತಾಗಿದೆ. ಹಾಗಾಗಿ ಮೂರು ವರ್ಷಗಳಿಂದ ಸಾರ್ವಜನಿಕರ ಪಾಲಿಗೆ ಒಳ ಚರಂಡಿ ಕಾಮಗಾರಿ,ಯೂಜ್ ಲೆಸ್ ಆಗಿದೆ ಕಾಮಗಾರಿಯು ಯಾರಿಗೂ ಯಾವುದಕ್ಕೂ ಉಪಯೋಗವಾಗಿಲ್ಲ ಎನ್ನುತ್ತಾರೆ ಪಟ್ಟಣದ ನಾಗರೀಕರು.ಕೂಡ್ಲಿಗಿ ಪಟ್ಟಣದ ಒಳಚರಂಡಿ ಕಾಮಗಾರಿ, ಭಾಗಶಹಃ ಅವ್ಯವಸ್ಥೆಯ ಆಗರವಾಗಿರುವ ದೂರು ಕೇಳಿಬಂದಿದೆ.ಕಾನಗಾರಿ ಸಂಪೂರ್ಣ ಕಳಪೆ ಯಿಂದ ಕೂಡಿದ ಕಾಮಗಾರಿ ನಡೆದಿದೆ ಎನ್ನಲಾಗಿದೆ, ಒಳಚರಂಡಿ ಯೋಜನೆಯಲ್ಲಿ ಭಾರೀ ಹಗರಣ ಜರುಗಿರುವುದಾಗಿ ಆರೋಪಗಳು ಕೇಳಿಬಂದಿದ್ದು, ಕಳೆದ ಮೂರು ವರ್ಷಗಳಿಂದ ಒಳಚರಂಡಿ ಕಾಮಗಾರಿ ಅರೆಬರೆಯಾಗಿದೆ, ಇಪ್ಪತ್ತು ವಾರ್ಡ್ ಗಳಲ್ಲಿನ ರಸ್ತೆಗಳನ್ನು ಕಾಮಗಾರಿಗೆ ಅಗೆದು ಬಗೆದು ಗುಂಡಿಗಳನ್ನ ಮಾಡಲಾಗಿದೆ. ಒಳ ಚರಂಡಿಗೆಂದು ಬಗೆದು ರಸ್ತೆಗಳಲ್ಲಿ ಚೇಂಬರ್ ನಿರ್ಮಿಸಿದ್ದು ಅವು ಬಹುತೇಕ ಕುಸಿದು ಬಿದ್ದಿವೆ. ಬಹುತೇಕ ಕಡೆಯ ಒಳ ಚರಂಡಿ ಕಾಮಗಾರಿ ಅಸ್ತವ್ಯಸ್ತಗೊಂಡಿವೆ, ಸಂಪರ್ಕ ಹೊಂದದೇ ಒಳಚರಂಡಿಯ ನೀರು ತಸ್ತೆಯಲ್ಲೇ ಹರಿಡಿ ದುರ್ನಾಥ ಬೀರುತ್ತಿವೆ. ತುಂಬಿರುವ ಚೇಂಬರ್ ನಿಂದ ತ್ಯಾಜ್ಯ ನೀರು ರಸ್ತೆಯಲ್ಲೆಲ್ಲಾ ಹರಿದಾಡುತ್ತಿದೆ ಗಬ್ಬೆದ್ದು ನಾರುತ್ತಿದೆ. ನಿರ್ವಹಣೆಯ ಹೊಣೆ ಹೊತ್ತಿರುವ ಕಾಮಗಾರಿ ನಡೆಸಿರುವ ಗುತ್ತಿಗೆದಾರರು, ತಮ್ಮ ಜವಾಬ್ದಾರಿ ನಿರ್ವಹಣೆ ನಿಭಾಯಿಸುತ್ತಿಲ್ಲ ಎಂಬ ದೂರು ಸಾರ್ವಜನಿಕರಿಂದ ಬಂದಿವೆ. ಪಟ್ಟಣದ ಬಹುತೇಕ ಕಡೆಗಳಲ್ಲಿ ಒಳಚರಂಡಿ ಕಾಮಗಾರಿ ಅಪೂರ್ಣವಾಗಿದೆ, ಇನ್ನೂ ಪೂರ್ಣಗೊಂಡಿಲ್ಲದಿದ್ದರೂ ಕೆಲವೆಡೆ ಅನಧಿಕೃತವಾಗಿ ಶೌಚಾಲಯದಿಂದ ಸಂಪರ್ಕ ನೀಡಲಾಗಿದೆ. ಕಾಮಗಾರಿ ಪೂರ್ಣಗೊಂಡಿರುವೆಡೆಗಳಲ್ಲಿ ಬಳಕೆಯಾಗಿಲ್ಲ, ಕಾಮಗಾರಿಯಿಂದ ಸಾರ್ವಜನಿಕರಿಗೆ ಅನುಕೂಲಕ್ಕಿಂತ ಅನಾನು ಕೂಲಗಳೇ ಹೆಚ್ಚು ಎಂದು ಪ್ರಜ್ಞಾವಂತ ನಾಗರೀಕರು ದೂರಿದ್ದಾರೆ. ಒಳಚರಂಡಿ ಕಾಮಗಾರಿ ಬಗ್ಗೆ ಹಲವಾರು ಗಂಭೀರ ಆರೋಪಗಳಿವೆ,ಆರೋಪಗಳ ಕುರಿತು ಸೂಕ್ತ ತನಿಖೆಯಾದರೆ ಮಾತ್ರ ಸತ್ಯಬಯಲಿಗೆ ಬರಲಿದೆ ಎನ್ನುತ್ತಾರೆ ಕೆಲ ಸಂಘಟನೆಗಳ ಪದಾಧಿಕಾರಿಗಳು.

ವರದಿ ವಿ.ಜಿ.ವೃಷಭೇಂದ್ರ ಕೂಡ್ಲಿಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
