;

ಸೂಗುರು ಗ್ರಾಮದ ಅಕ್ರಮ ಮರಳು ದಂದೆಗೆ ಬ್ರೇಕ್ ಯಾವಾಗ…???

ಸೂಗುರು ಗ್ರಾಮದ ಅಕ್ರಮ ಮರಳು ದಂದೆಗೆ ಬ್ರೇಕ್ ಯಾವಾಗ

ಯಾದಗಿರಿ ಜಿಲ್ಲೆಯ ಸುರಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸೂಗುರು ಗ್ರಾಮದಲ್ಲಿ ಪ್ರತಿ ದಿನ ಬೆಳಗಿನ ಜಾವ 3 ಗಂಟೆಯಿಂದ ಮದ್ಯಾಹ್ನ1 ಗಂಟೆ ಯವರೆಗೆ ಪಕ್ಕದ ಕೃಷ್ಣ ನದಿ ದಂಡೆಯಿಂದ ಕಾನೂನು ಭಾಹಿರವಾಗಿ ಅಕ್ರಮ ಮರಳು ಸಾಗಾಟ ಮಾಡ್ತಾ ಇದ್ದು ಇದರಿಂದ ರಾತ್ರೋರಾತ್ರಿ ಕೆಲಸ ಮಾಡುವಾಗ ಇಲ್ಲಿ ಮರಳು ತುಂಬುವ ಕಾರ್ಮಿಕರಿಗೆ ದಿನಗೂಲಿ ಮಿತಿ ಇಲ್ಲ ಟ್ರ್ಯಾಕ್ಟರ್ ಗೆ ಇಷ್ಟು ಅಂತ ದರ ನಿಗದಿ ಆಗಿದೆ ಇದರಿಂದ ಅವರು ಹಣದಾಸೆಗೆ ಜೀವಕ್ಕೆ ಅರಿವಿಲ್ಲದೆ ಕೆಲಸ ಮಾಡ್ತಾ ಇದ್ದು ಮಾನವ ಜೀವಕ್ಕೆ ಅಪಾಯಕಾರಿ ಆಗಿದ್ದು ಮತ್ತು ಟ್ರ್ಯಾಕ್ಟರ್ ಚಾಲಕರು ಅಷ್ಟೇ ಇದು ಕಾನೂನು ಭಾಹಿರ ಆಗಿರೋದ್ರಿಂದ ಪೊಲೀಸರು ಯಾವಾಗ ಬರ್ತಾರೋ ಅನ್ನೋ ಭಯದಿಂದ ಅತಿ ವೇಗ ಮತ್ತು ಅಲಕ್ಷತನದಿಂದ ವಾಹನ ಚಾಲನೆ ಮಾಡ್ತಾ ಈ ಮರಳು ಊರ ಒಳಗೆ ದಾಸ್ತಾನು ಮಾಡ್ತಾ ಇರೋದ್ರಿಂದ ಊರಲ್ಲಿ ಅಪಘಾತಗಳು ಆಗೋ ಸಾಧ್ಯತೆ ಇವೆ ಈಗಾಗಲೇ ಇಲ್ಲಿ ಸಣ್ಣ ಸಣ್ಣ ಅಪಘಾತ ಸಂಭವಿಸಿದ್ದು ಊರಲ್ಲಿ ರಾಜಿ ಒಪ್ಪಂದಗಳ ಮೂಲಕ ಬಗೆ ಹರಿದಿವೆ ಮತ್ತು ಇಲ್ಲಿ ಅತಿಯಾದ ಓವರ್ ಲೋಡ್ ಟ್ರ್ಯಾಕ್ಟರ್ ಚಾಲನೆಯಿಂದ ರಸ್ತೆಗಳು ಹದಗೆಟ್ಟು ಹೋಗಿವೆ ಮತ್ತು ಇವರು ಮರಳು ಅಗೆಯುವ ಜಾಗದಲ್ಲಿ ಸರ್ಕಾರ ಯಾವುದೇ ಮರಳು ನಿಕ್ಷೇಪ ಗುರುತಿಸಿಲ್ಲ ಮತ್ತು ಇವರು ಎಲ್ಲಿ ಬೇಗ ಮರಳು ಸಿಗುತ್ತದೆ ಅಲ್ಲಿ ಮಾತ್ರ ಅಪಾಯಕಾರಿ ರೀತಿ ತೆಗೆದು ಹಾಗೆ ಬಿಡ್ತಾ ಇದ್ದಾರೆ ಈ ಕೃಷ್ಣ ನದಿ ಪಕ್ಕದ ಜಿಲ್ಲೆಯ ಹಳ್ಳಿಗಳಿಗೆ ಎರಡು ಕಡೆ ಸಂಪರ್ಕ ಇರೋದ್ರಿಂದ ನದಿ ಬಂದು ಕಡಿಮೆ ಆದ ಮೇಲೆ ಇವರು ತೆಗೆದ ಗುಂಡಿಗಳು ದೊಡ್ಡ ಹೊಂಡವಾಗಿ ನಿರ್ಮಾಣ ಆಗಿ ನೀರು ಕಮ್ಮಿ ಇದ್ದಾಗ ಜನರು ಗೊತ್ತಿಲ್ಲದೆ ನದಿ ದಾಟುವಾಗ ಇಂತಹ ಹೊಂಡಕ್ಕೆ ಸುಮಾರು ಜನ ಪ್ರಾಣ ಕಳೆದುಕೊಂಡಿದ್ದಾರೆ ಈ ಅಕ್ರಮ ಮರಳು ದಂದೆ ಕಾನೂನು ಬಾಹಿರ ಅಲ್ಲದೆ ಹಲವು ರೀತಿಯಲ್ಲಿ ಮಾನವ ಜೀವಕ್ಕೆ ಕುತ್ತು ಇದ್ದು ಈ ಅಕ್ರಮ ಮರಳು ಸಾಗಾಟ ಚಟುವಟಿಕೆಯಲ್ಲಿ ಭಾಗಿಯಾದವರೆಲ್ಲ ರಾಜಕೀಯ ಹಿಂಬಾಲಕರಾಗಿದ್ದು ಅಕ್ರಮದ ಬಗ್ಗೆ ಪ್ರಶ್ನೆ ಮಾಡಿದವರ ದಬ್ಬಾಳಿಕೆ ಮಾಡ್ತಾ ಇದ್ದು ಸ್ಥಳೀಯ ಠಾಣೆಗೆ ದೂರು ಕೊಟ್ಟರೆ ಯಾವುದೋ ಒತ್ತಡಕ್ಕೆ ಮಣಿದು ಪೊಲೀಸರು ಕ್ರಮ ಜರುಗಿಸಲು ಮುಂದೆ ಬರ್ತಾ ಇಲ್ಲ ಆದರಿಂದ ಸೂಗುರು ಗ್ರಾಮದಲ್ಲಿ ಈ ಅಕ್ರಮ ಕಾನೂನು ಭಾಹಿರ ಮಾನವ ಜೀವಕ್ಕೆ ಅಪಾಯಕಾರಿ ಇರುವ ಈ ಕೆಲಸಗಳನ್ನು ಶಾಶ್ವತವಾಗಿ ತಡೆಗಟ್ಟುವುದು ಪೊಲೀಸರ ಜವಾಬ್ದಾರಿ ಆಗಿದೆ ಯಾವ ಕ್ರಮ ತೆಗೆದುಕೊಳ್ತಾರೆ ಕಾದು ನೋಡೋಣ…

ವರದಿ. ಮುಕ್ಕಣ್ಣ ಹುಲಿಗುಡ್ಡ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;