;

ಪಾವಗಡ ರಸ್ತೆಯ ನಗರಸಭೆ ಉದ್ಯಾನದಲ್ಲಿ ಪ್ರತಿ ಭಾನುವಾರ ನಡೆಯುವ ಸಂತೆಗೆ ನೆರಳು, ಶುದ್ಧ ಕುಡಿಯುವ ನೀರು, ಸ್ವಚ್ಛತೆ ಹಾಗೂ ಶೌಚಾಲಯ ವ್ಯವಸ್ಥೆ ಇಲ್ಲ….!!!

ಪಾವಗಡ ರಸ್ತೆಯ ನಗರಸಭೆ ಉದ್ಯಾನದಲ್ಲಿ ಪ್ರತಿ ಭಾನುವಾರ ನಡೆಯುವ ಸಂತೆಗೆ ನೆರಳು, ಶುದ್ಧ ಕುಡಿಯುವ ನೀರು, ಸ್ವಚ್ಛತೆ ಹಾಗೂ ಶೌಚಾಲಯ ವ್ಯವಸ್ಥೆ ಇಲ್ಲ.

ಕೋವಿಡ್ ಸಂದರ್ಭದಲ್ಲಿ ನೆಹರೂ ಸರ್ಕಲ್ ಬಳಿ ಇಂದಿರಾ ತರಕಾರಿ ಮಾರುಕಟ್ಟೆ, ಚಿತ್ರದುರ್ಗ ರಸ್ತೆ ವಾಲ್ಮೀಕಿ ಸರ್ಕಲ್ ಬಳಿಯ ರಸ್ತೆ ಬದಿಯಲ್ಲಿ ವಾರದ ಸಂತೆ ನಡೆಯುತ್ತಿದ್ದವು ಆದರೆ ಅಲ್ಲಿ ವ್ಯಾಪಾರಿಗಳಿಗೆ ಲಾಭದಾಯಕವಾಗದೇ ಇರುವುದರಿಂದ ವಿವಿಧ ಜಿಲ್ಲೆಗಳಿಂದ ಬರುತ್ತಿದ್ದ ವ್ಯಾಪಾರಿಗಳ ಸಂಖ್ಯೆ ಕ್ಷೀಣಿಸಿದೆ.

ಪುರಸಭೆ ಕಚೇರಿಯ ಹಾಗೂ ಮೈದಾನದಲ್ಲಿ ಇರುವ ಹಳೆಯ ಕಟ್ಟಡ, ಶಿಥಿಲಗೊಂಡಿರುವ ನೀರಿನ ತೊಟ್ಟಿಯನ್ನು ತೆರವುಗೊಳಿಸಿ ಭಾನುವಾರ ನಡೆಯುವ ಸಂತೆ ವ್ಯಾಪಾರಿಗಳಿಗೆ ನೀರು, ನೆರಳಿನ ಆಸರೆ ಕಲ್ಪಿಸಿಕೊಡಬೇಕು. ಮೈದಾನ ತಗ್ಗು
ಪ್ರದೇಶವಾಗಿದ್ದು, ಮಳೆ ನೀರು ಹರಿದು ಹೋಗಲು ಚರಂಡಿ ಇಲ್ಲದಿರುವ ಕಾರಣ ಅಲ್ಪ ಮಳೆ ಬಿದ್ದರೂ ಸಂತೆ ಜಲಾವೃತಗೊಳ್ಳುತ್ತದೆ. ಇದರಿಂದಾಗಿ ಎಲ್ಲೆಂದರಲ್ಲೆ ರೊಳ್ಳೆ, ಬುರ್ಜೆ, ಕೆಸರು ತುಂಬಿಕೊಂಡು ಮಳೆಗಾಲದಲ್ಲಿ ಸಂತೆಗೆ ತೀವ್ರ ತೊಂದರೆಯಾಗುತ್ತದೆ.

ಸಂತೆಗೆ ತಂದಿದ್ದ ಸೊಪ್ಪು ತರಕಾರಿಗಳನ್ನು ಚಿತ್ರದುರ್ಗ, ಹಿರಿಯೂರು ಹಾಗೂ ಬಳ್ಳಾರಿ ಮಾರುಕಟ್ಟೆಗೆ ಸಾಗಿಸುವ, ಮಾರಾಟಕ್ಕೆ ಜಾಗವಿಲ್ಲದೆ ತರಕಾರಿಗಳನ್ನು ವಾಪಸ್‌ ಕೊಂಡೊಯ್ಯುವ ಪರಿಸ್ಥಿತಿ ರೈತರು, ಮಾರಾಟಗಾರರಿಗೆ ಎದುರಾಗುತ್ತದೆ.

ಸೊಪ್ಪು, ತರಕಾರಿಗಳನ್ನು ಕೆಸರಿನಲ್ಲಿಯೇ ಇಟ್ಟುಕೊಂಡು ಮಾರಾಟ ಮಾಡುತ್ತಿರುವ ವರ್ತಕರನ್ನು ನೋಡಿ ತರಕಾರಿಗಳನ್ನು ಕೊಳ್ಳಲು ಬಂದ ಗ್ರಾಹಕರಿಗೆ ಕಸಿವಿಸಿಯೂ ಉಂಟಾಗುತ್ತದೆ. ಹಾಗಾಗಿ ಮಳೆಗಾಲ ಬಂತೆಂದರೆ ಸಂತೆಯ ಜನರಿಗೆ ತೀವ್ರ ಆತಂಕ ಕಾಡುತ್ತದೆ.

‘ವಾರದ ಸಂತೆ ನಡೆಯುತ್ತಿದ್ದ ಜಾಗದಲ್ಲಿ ಸರ್ಕಾರಿ ಬಸ್ ನಿಲ್ದಾಣದ ನಿರ್ಮಿಸಿ ಸಂತೆಯನ್ನು ನಗರಸಭೆ ಉದ್ಯಾನಕ್ಕೆ ಸ್ಥಳಾಂತರ ಮಾಡಿದ್ದರಿಂದ ಹಲವು ತೊಂದರೆಯನ್ನು ಅನುಭವಿಸಬೇಕಾಗಿದೆ’ ಎಂದು ಸಂತೆ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ. ವಿಜಯಕುಮಾರ್ ಬೇಸರ ವ್ಯಕ್ತಪಡಿಸಿದರು.

ಸುಡು ಬಿಸಿಲಿಗೆ ತತ್ತರ: ಸರಿಯಾದ ನಿರ್ವಹಣೆಯ ಕೊರತೆ ಮತ್ತು ನೆರಳಿನ ಆಸರೆಯಿಲ್ಲದೇ ಉರಿಯುವ ಸುಡು ಬಿಸಿಲಿನ ಧಗೆಯ ಮಧ್ಯೆ ವ್ಯಾಪಾರಿಗಳು ವ್ಯಾಪಾರ ನಡೆಸಲು ಮತ್ತು ತರಕಾರಿ ರಕ್ಷಣೆ ಸವಾಲಾಗಿದೆ. ಸಂತೆಗೆ ಬಂದ ವ್ಯಾಪಾರಸ್ಥರು ನಗರಸಭೆಗೆ ಹಿಡಿ ಶಾಪ ಹಾಕುತ್ತಾರೆ.

‘ಬೇರೆ ಕಡೆಯಿಂದ ಬಂದ ವರ್ತಕರಿಗೆ ಬೆಳಕಿನ ವ್ಯವಸ್ಥೆ, ಗ್ರಾಹಕರು ಹಾಗೂ ವಾಹನಗಳ ಓಡಾಟದ ಅನುಕೂಲಕ್ಕಾಗಿ ಮೈದಾನದ ನಾಲ್ಕೂ ಕಡೆ ದೊಡ್ಡ ಗೇಟ್ ನಿರ್ಮಾಣ ಮಾಡಿಸಬೇಕು’ ಎಂದು ಹಳೇಟೌನ್ ವ್ಯಾಪಾರಿ ತಿಪ್ಪೇಸ್ವಾಮಿ ಶಾಸಕರಲ್ಲಿ ಮನವಿ ಮಾಡಿದ್ದಾರೆ.

* ನೀರಿನಿಂದ ತೋಯಿಸಿದ ಗೋಣಿಚೀಲ ಮತ್ತು ಮರಗಳ ಸೊಪ್ಪು ಹಾಸಿ, ಅದರ ಮೇಲೆ ತರಕಾರಿಗಳನ್ನು ಇಡುತ್ತಿದ್ದಾರೆ. ಬಾಡಿದ ಸೊಪ್ಪಿಗೆ ನೀರು ಹಾಕಿದರೆ ದೂಳು ಮೆತ್ತಿಕೊಳ್ಳುತ್ತದೆ. ಇದರಿಂದ ವ್ಯಾಪಾರಿಗಳು ನಷ್ಟಕ್ಕೆ ಸಿಲುಕಿದ್ದಾರೆ…

ವರದಿ.ಶಶಿಕುಮಾರ್ ಚಳ್ಳಕೆರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend