ಹಸಿರು ಕ್ರಾಂತಿ ಹರಿಕಾರ,ಭಾರತದ ಮಾಜಿ ಪ್ರಧಾನಿ, ಡಾ” ಬಾಬು ಜಗಜೀವನ ರಾಮ್ ಜಯಂತಿ ಆಚರಣೆ,
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ನಾಡಕಚೇರಿಯಲ್ಲಿ ಡಾ// ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಜಯಂತಿ ಆಚರಿಸಲಾಯಿತು.
ಭಾರತದ ಮಾಜಿ ಉಪಪ್ರಧಾನಿ, ಹಸಿರು ಕ್ರಾಂತಿಯ ಹರಿಕಾರ ಡಾ // ಬಾಬು ಜಗಜೀವನ್ ರಾವ್ ರವರು ” ಬಾಬೂಜಿ ”ಎಂದೇ ಖ್ಯಾತಿ ಪಡೆದಿದ್ದರು. ಜವಾಹರ್ ಲಾಲ್ ನೆಹರು ರವರ ಮಂತ್ರಿಮಂಡಲದಲ್ಲಿ ಸಚಿವರಾಗಿ. ಮೊರಾರ್ಜಿ ದೇಸಾಯಿಯವರ ಕಾಲದಲ್ಲಿ ಭಾರತದ ಉಪ ಪ್ರಧಾನಿಯೂ ಆಗಿದ್ದರು. ಜಗಜೀವನ್ ರಾಮ್ ಅವರು ಅಸ್ಪೃಶ್ಯತಾ ನಿವಾರಣೆಯ ಹೋರಾಟದ ಮಹಾನ್ ದಲಿತ ನಾಯಕರಾಗಿದ್ದರು.
ಇದೇ ಸಂದರ್ಭದಲ್ಲಿ ಕಂದಾಯ ಇಲಾಖೆ ಸಿಬ್ಬಂದಿಗಳಾದ ಅನಿತಾ ಪೂಜಾರ್ . ಮಂಜುನಾಥ. ಸಿದ್ದೇಶ್.
ವೀರೇಶ್ ಕಿಟ್ಟಪ್ಪ ನವರ. ಫೋಟೋ ನಾಗರಾಜ. ಗ್ರಾಮ ಪಂಚಾಯಿತಿ ಸದಸ್ಯ ಹೊನ್ನೂರಪ್ಪ .ಕೆ.ಎಸ್ ವೀರೇಶ್ ನಾಡಕಚೇರಿಯ ಸಿಬ್ಬಂದಿ ವರ್ಗ ಸಾರ್ವಜನಿಕರು ಉಪಸ್ಥಿತರಿದ್ದರು.

ವರದಿ ಕೆ ಎಸ್ ವೀರೇಶ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
